ಮಂಗಳೂರು: ಜನಪದ ಸೊಗಡನ್ನು ಪರಿಚಯಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸುಗ್ಗಿ-ಹುಗ್ಗಿ ಕಾರ್ಯಕ್ರಮ ಮಾರ್ಚ್ 15ರಂದು ಮಂಗಳೂರಿನ ಸಿಸಿ ಚಾವಡಿ ತುಳು ಭವನ ಉರ್ವಸ್ಟೋರ್ ನಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಬಯಲಾಟ, ಜನಪದ ನೃತ್ಯ, ಹಗಲು ವೇಷ ಸೇರಿದಂತೆ ಅನೇಕ ಬಗೆಯ ಜನಪದ ಕಲಾಪ್ರಕಾರವನ್ನು ಪರಿಚಯಿಸಲಾಗುತ್ತದೆ.
ಕಣ್ಣಿಗೆ ಹಬ್ಬ ತರುವ ಹತ್ತು ಹಲವಾರು ವಿಶೇಷ ನೋಟಗಳಿಗೆ ಸುಗ್ಗಿ ಹಬ್ಬ ಕಾರಣವಾಗುತ್ತಿದೆ.
ಬೆಳಗ್ಗೆ 10ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಮಂಗಳೂರು ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆವಹಿಸಲಿದ್ದು, ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಮಂಗಳೂರು ಪಾಲಿಕೆ ಮೇಯರ್ ಭಾಸ್ಕರ್ ಪಾಲ್ಗೊಳ್ಳಲಿದ್ದಾರೆ.
ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಆಯ್ದ ತಂಡಗಳಿಂದ ಡೊಳ್ಳು ಕುಣಿತ, ಕಂಸಾಳೆ, ಚಂಡೆವಾದನ, ಜಾನಪದ ನೃತ್ಯ, ನಾದಸ್ವರ, ಪೂಜಾ ಕುಣಿತ, ಹುಲಿವೇಷ, ಜನಪದ ಸಂಗೀತ, ಕರಂಗೋಲು, ಸುಗ್ಗಿ ಕುಣಿತ, ಕೃಷಿ ಹಾಡುಗಳು, ಸಂದಿ ಪಾಡ್ದಾನ , ಕಂಗೀಲು ನೃತ್ಯ, ಸುಗ್ಗಿ ಹಾಡುಗಳು ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Click this button or press Ctrl+G to toggle between Kannada and English