ಮಂಗಳೂರು: ಸಾಹಿತ್ಯ ನಮ್ಮದು ಮಾತ್ರವೇ ಅಲ್ಲದೇ ಬೇರೆಯವರ ಭಾವನೆಗಳನ್ನೂ ಶಕ್ತವಾಗಿ ವ್ಯಕ್ತ ಪಡಿಸುವ ಕ್ಷೇತ್ರವಾಗಿದ್ದು, ಅದು ಬದುಕಿನ ನಿತ್ಯದ ಹೋರಾಟಕ್ಕೆ ಶಕ್ತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಿರಿಯ ಲೇಖಕಿ ಡಾ,ಯು ಮಹೇಶ್ವರಿ ಹೇಳಿದರು. ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಮೂರು ದಿನಗಳ ಕಾಲದ ಮಹಿಳಾ ಸಾಹಿತ್ಯ ಸಂವಾದ ಕಾರ್ಯಕ್ರಮದ ಎರಡನೆಯ ದಿನದ ಅತಿಥಿಯಾಗಿ ಮಾತಾಡುತ್ತಿದ್ದರು.
ಬದುಕೇ ಒಂದು ನಿತ್ಯದ ಹೋರಾಟವಾಗಿರುವ ಹೊತ್ತಿನಲ್ಲಿ ಸಾಹಿತ್ಯದ ಮೂಲಕ ಬೇರೆ ಬೇರೆಯವರ ಭಾವನೆಗಳನ್ನು, ಅಭಿವ್ಯಕ್ತ ಗೊಳಿಸುವ ಮೂಲಕ, ಗೆಲುವನ್ನು ದಾಖಲಿಸಬಹುದು ಎಂದೂ ಅವರು ಹೇಳಿದರು.
ಕೋಶಾಧಿಕಾರಿ ಹರೀಶ್ ಸುಲಾಯ ಒಡ್ಡಂಬೆಟ್ಟು ಸ್ವಾಗತಿಸಿ ಮಾಲತಿ ಶೆಟ್ಟಿ ಮಾಣೂರು ಸಮನ್ವಯಕಾರರಾಗಿ ಸಹಕರಿಸಿದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್, ಕಾರ್ಯದರ್ಶಿ ಸುಬ್ರಾಯ ಭಟ್ ಹಾಗೂ ಇತರ ಸದಸ್ಯರು ಹಾಜರಿದ್ದರು.
Click this button or press Ctrl+G to toggle between Kannada and English