ಕೊಪ್ಪಳ : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬಸವರಾಜ ಕೆ. ಹಿಟ್ನಾಳ್ ಎರಡನೇ ಸ್ಥಾನ ಗಳಿಸಿದ್ದರೆ. ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆರಂಭದಿಂದಲೂ ಮುನ್ನಡೆ ಕಾದಿರಿಸಿಕೊಂಡ ಮಾಜಿ ಜೆಡಿಎಸ್ ಶಾಸಕ ಕರಡಿ ಸಂಗಣ್ಣ ಪ್ರಸಕ್ತ ಬಿಜೆಪಿ ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿಜಯೋತ್ಸಾಹ ಎಲ್ಲೆಲ್ಲೂ ಕಂಡುಬಂದಿದೆ. ಜೆಡಿಎಸ್ ಪಕ್ಷಕ್ಕೆ ಫಲಿತಾಂಶ ತುಸು ಆಶ್ಚರ್ಯ ತಂದಿದೆ. ಏಕೆಂದರೆ ಜೆಡಿಎಸ್ಸನ್ನು ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ನೂಕಿದೆ. ಪಕ್ಷೇತರರಾಗಿ ಕಣಕ್ಕಿಳಿದಿದ್ದ 11 ಮಂದಿ ಅಭ್ಯರ್ಥಿಗಳು ಲೇಕ್ಕಕಿಲ್ಲದಂತಾಗಿದ್ದಾರೆ.
ಜೆಡಿಎಸ್‌ನಿಂದ ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಬಂದು, ಅದರಲ್ಲಿಯೂ ಯಶಸ್ಸು ಸಾಧಿಸಿ, ಜೆಡಿಎಸ್ ಕೈಯಿಂದ ಕೊಪ್ಪಳ ಕ್ಷೇತ್ರವನ್ನು ಕಿತ್ತುಕೊಂಡು, ಇಲ್ಲಿಂದ ನಾಲ್ಕನೇ ಬಾರಿ ಆಯ್ಕೆಯಾಗಿರುವ ಕರಡಿ ಸಂಗಣ್ಣ, ತಮ್ಮ ಗೆಲುವಿಗೆ ಬಿಜೆಪಿ ಸರಕಾರದ ಸಾಧನೆಗಳೇ ಕಾರಣ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಎಲ್ಲಾ ಮಂತ್ರಿಗಳು ಹಾಗೂ ಶಾಸಕರ ಬೆಂಬಲದಿಂದ ಗೆಲುವು ಸಾಧಿಸಿದ್ದಾಗಿ ಹೇಳಿದ್ದಾರೆ.
ಯಡಿಯೂರಪ್ಪ ಅವರ ಸರಕಾರದ ಅಭಿವೃದ್ಧಿ ಕಾರ್ಯಗಳಿಂದಲೇ ತನಗೆ ಈ ಗೆಲುವು ದೊರೆತಿದೆ. ಕೊಪ್ಪಳದ ಜನತೆ ಹಣ ಮತ್ತು ಹೆಂಡದ ಆಮಿಷಕ್ಕೆ ಬಲಿಯಾಗದೆ, ಅಭಿವೃದ್ಧಿ ನೋಡಿಯೇ ಮತ ಚಲಾಯಿಸಿದ್ದಾರೆ ಎಂದು ಕರಡಿ ಸಂಗಣ್ಣ ಹೇಳಿಕೆ ನೀಡುವ ಮೂಲಕ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್‌ಗಳನ್ನು ಕೆಣಕಿದ್ದಾರೆ.
Click this button or press Ctrl+G to toggle between Kannada and English
September 29th, 2011 at 22:12:04
ಕುಮಾರಣ್ಣನಿಗೆ ಗೆಲುವು ಖಚಿತವಾಗಿತ್ತು. ಈಗ ಮಂಡೆ ಬಿಸಿಯಾಗಿದೆ
September 29th, 2011 at 22:08:02
ಕರಡಿಯವರು ಜಯಗಳಿಸಿ, ಕುಮಾರಣ್ನನಿಗೆ ಮುಖಭಂಗವಾಗ್ಗಿದೆ