ಶಿವಸೇನಾ ಪ್ರಮುಖ ದಿ.ಬಾಳ ಠಾಕ್ರೆ ಸೊಸೆ ಜತೆಗಿದ್ದ ಮಹಿಳೆ ಮೇಲೆ ಖಾಸಗಿ ಕಾರ್‌ ಚಾಲಕನಿಂದ ಹಲ್ಲೆ

4:07 PM, Wednesday, March 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

smitha-takreyಮಂಗಳೂರು: ಶಿವಸೇನಾ ಪ್ರಮುಖ ದಿ. ಬಾಳ ಠಾಕ್ರೆ ಸೊಸೆ ಜತೆಗಿದ್ದ ಮಹಿಳೆ ಮೇಲೆ ಖಾಸಗಿ ಕಾರ್‌ ಚಾಲಕನಿಂದ ಹಲ್ಲೆ ನಡೆದಿರುವ ಘಟನೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಮರಕಡ ಎಂಬಲ್ಲಿ ನಡೆದಿದೆ.

ಸ್ಮಿತಾ ಠಾಕ್ರೆ ಜತೆಯಲ್ಲಿದ್ದ ಶರೀನ್ ಎಂಬ ಮಹಿಳೆ ಮೇಲೆ ಖಾಸಗಿ ಕಾರು ಚಾಲಕ ದಯಾನಂದ ಎಂಬಾತ ಹಲ್ಲೆ ನಡೆಸಿದ್ದಾನೆ. ಬೆಳ್ತಂಗಡಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವಾಗ ವಾಹನ ಚಾಲನೆ‌ ಮಾಡುವ ಸಮಯದಲ್ಲಿ ಚಾಲಕ ಮೊಬೈಲ್ ಬಳಸಿದ್ದಾನೆ. ಮೊಬೈಲ್‌ ಬಳಕೆಗೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ವಾಗ್ವಾದ ಶುರವಾಗಿದೆ. ಈ ವೇಳೆ ಶರೀನ್‌ನನ್ನು ದಯಾನಂದ ಎಳೆದಾಡಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಘಟನೆ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಯಾನಂದನನ್ನು ಬಂಧಿಸಿರುವ ಕಾವೂರು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English