ಕುಕ್ಕೆ ಸುಬ್ರಹ್ಮಣ್ಯನಿಗೆ ಬ್ರಹ್ಮರಥ ನಿರ್ಮಾಣಕ್ಕೆ ವೀಳ್ಯ ಸ್ವೀಕರಿಸಿದ ಮುತ್ತಪ್ಪ ರೈ

10:45 AM, Friday, March 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mutthappa-raiಮಂಗಳೂರು: ಇದು ನನ್ನ ಜೀವನದ ಒಂದು ಭಾಗ್ಯ. ಪುತ್ತೂರು ಮಹಾಲಿಂಗೇಶ್ವರನ ಕೃಪೆಯಿಂದ ಇದೀಗ ಮೂರನೇ ಬ್ರಹ್ಮರಥವನ್ನು ನೀಡುವ ಭಾಗ್ಯ ದೊರಕಿದೆ ಎಂದು ಉದ್ಯಮಿ ಎನ್.ಮುತ್ತಪ್ಪ ರೈ ಹೇಳಿದರು.

ಅವರು ಮಹತೋಭಾರ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವಾರೂಪದಲ್ಲಿ ನಿರ್ಮಿಸಿ ಕೊಡುತ್ತಿರುವ ನೂತನ ಬ್ರಹ್ಮರಥ ನಿರ್ಮಾಣಕ್ಕೆ ವೀಳ್ಯ ಸ್ವೀಕರಿಸಿ ಮಾತನಾಡಿದರು. ಇದು ನಾವು ಕೊಡುವುದಲ್ಲ ಬದಲಾಗಿ ಸಕಲ ಭಕ್ತರ ಪರವಾಗಿ ಕುಕ್ಕೆಸುಬ್ರಹ್ಮಣ್ಯದ ಎಲ್ಲಾ ಜನತೆಯ ಪರವಾಗಿ ನಮ್ಮ ಕೈಯಿಂದ ಭಗವಂತ ಕೊಡಿಸುತ್ತಿದ್ದಾನೆ. ಭಗವಂತ ನೀಡಿದ ಭಾಗ್ಯವನ್ನು ನಾವು ಪೂರೈಸುತ್ತಿದ್ದೇವೆ. ಶ್ರೀ ದೇವರ ಕೃಪೆಯಿಂದ ಇಂತಹ ಒಂದು ಮಹಾನ್ ಅವಕಾಶ ಲಭಿಸಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ರಥ ನಿರ್ಮಾಣದ ಕೆಲಸವನ್ನು ಖ್ಯಾತ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯರು ನೆರವೇರಿಸಲಿದ್ದಾರೆ ಎಂದರು.

ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಪವಿತ್ರ ಬ್ರಹ್ಮರಥವನ್ನು ಸೇವಾರೂಪದಲ್ಲಿ ನೀಡಲು ಅವಕಾಶ ದೊರಕಿರುವುದು ದೇವರು ನೀಡಿದ ದೊಡ್ಡ ಆಶೀರ್ವಾದ. ನಾನು ಮತ್ತು ನನ್ನ ಪಾರ್ಟನರ್ ಅಜಿತ್ ಶೆಟ್ಟಿ ಅವರು ಜೊತೆಯಾಗಿ ಈ ಮಹಾನ್‌ ಸೇವೆಯನ್ನು ನೆರವೇರಿಸಲಿದ್ದೇವೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈಗಿನ ಬ್ರಹ್ಮರಥದ ಸ್ವರೂಪವನ್ನೆ ನೂತನ ರಥವು ಹೊಂದಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆಯ ಇತ್ಯಾದಿಗಳೆಲ್ಲವೂ ಅದೇ ತೆರನಾಗಿರುತ್ತದೆ. ಪ್ರಾಚೀನ ಸ್ವರೂಪವನ್ನೇ ಹೊಂದಿದ ನೂತನ ಬ್ರಹ್ಮರಥವನ್ನು ರಚಿಸಲಾಗುವುದು ಎಂದರು.

ಸುಮಾರು 2ಕೋಟಿ ರೂ ವೆಚ್ಚದಲ್ಲಿ ರಥ ನಿರ್ಮಾಣವಾಗಲಿದೆ. ಈ ಕಾರ್ಯವು ಮುಂದಿನ ಜಾತ್ರೆಯೊಳಗೆ ಪೂರ್ಣಗೊಳ್ಳುವಂತೆ ಸುಬ್ರಹ್ಮಣ್ಯ ದೇವರು ಆಶೀರ್ವಾದ ಮಾಡುತ್ತಾರೆ ಎಂಬುದು ನಮ್ಮ ವಿಶ್ವಾಸ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ಈ ಬ್ರಹ್ಮರಥವನ್ನು ಶಿಲ್ಪಶಾಸ್ತ್ರದಲ್ಲಿ ಸ್ಯಂದ್ಯನ ರಥವೆಂದು ಕರೆಯಲಾಗುವುದು. ಸ್ಯಂದ್ಯನ ಶಿಲ್ಪಶಾಸ್ತ್ರದಲ್ಲಿ ನೂತನ ರಥವು ನಿರ್ಮಾಣವಾಗಲಿದೆ. ಹಳೆಯ ಇತಿಹಾಸ ಪ್ರಸಿದ್ಧವಾದ ಬ್ರಹ್ಮರಥದ ಆಯ ಮತ್ತು ಅಳತೆಗೆ ಅನುಗುಣವಾಗಿ ನೂತನ ರಥವನ್ನು ತಯಾರಿಸಲಾಗುವುದು. ಅದೇ ಮಾದರಿ ಮತ್ತು ಅಳತೆಗೆ ಅನುಗುಣವಾಗಿ ನೂತನ ರಥ ರಚಿತವಾಗಲಿದೆ. ಈ ರಥವು ನೆಲದಿಂದ ಜಿಡ್ಡೆಯ ತನಕ ಸುಮಾರು 17ಅಡಿ ಎತ್ತರವಾಗಿದೆ. ಇದರ ಚಕ್ರಗಳು ಸುಮಾರು 8.5ಅಡಿ ಎತ್ತರವಿರಲಿದೆ ಎಂದು ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English