ಸದ್ಯದಲ್ಲೇ ಸೆಟ್ ಏರಲಿರುವ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನ ಕಥೆಯ ಸಿನಿಮಾ

Friday, December 4th, 2020
Muttappa Rai

ಪುತ್ತೂರು : ಡೆಡ್ಲಿ ಸೋಮ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಸಿನಿಮಾ ಆರಂಭಿಸಿದ್ದಾರೆ. ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನದ ಕಥೆಗಳನ್ನು ಒಳಗೊಂಡ ಬಯೋ ಪಿಕ್ ‘ಎಂ ಆರ್” ಸಿನಿಮಾ ಸದ್ಯದಲ್ಲೇ ಸೆಟ್ ಏರಲಿದೆ. ಡೆಡ್ಲಿ  ಸಿನಿಮಾ ಚಿತ್ರಿಕರಣ ಆರಂಭಕ್ಕೆ ಪೂರ್ವಭಾವಿಯಾಗಿ ಸಿನಿಮಾದ ಯಶಸ್ಸಿಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಚಿತ್ರ ನಿರ್ಮಾಣದ ಬಳಿಕ ಶ್ರೀ ದೇವಾಲಯದಲ್ಲಿ ಮಹಾಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಸೇವೆ ಸಲ್ಲಿಸುವ ಸಂಕಲ್ಪವನ್ನು ಚಿತ್ರ […]

ಮುತ್ತಪ್ಪ ರೈ ಬರೆದಿಟ್ಟ 40 ಪುಟಗಳ ವಿಲ್ ವಿವರ ಬಹಿರಂಗ!

Saturday, June 6th, 2020
Muttappa Rai

ಮಂಗಳೂರು  : ಭೂಗತಲೋಕದ ಮಾಜಿ ಡಾನ್ ಮುತ್ತಪ್ಪ ರೈ ಕ್ರೂರ ಮನೋವೃತ್ತಿಯಿಂದ ಅದೆಷ್ಟೋ ಕೊಲೆಗಳನ್ನು ಮಾಡಿದ್ದರೂ. ಮಾನವೀಯತೆ ಇದೆಯೆನ್ನುವುದನ್ನು ತಾನು ಬರೆದ ವಿಲ್ ನಲ್ಲಿ ತೋರಿಸಿದ್ದಾರೆ . ಆದರೆ  ಆ ವಿಲ್ ನಲ್ಲಿ ಏನೆಲ್ಲ ಇದೆ  ಎಂದು ಈ ವರದಿ ನೋಡಿ. ಮುತ್ತಪ್ಪ ರೈ ತಮ್ಮ ಜೀವಿತಾವಧಿಯಲ್ಲಿ ಸಂಪಾದಿಸಿದ್ದ ಬರೋಬ್ಬರಿ ಒಟ್ಟು ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ. ಆ ಕುರಿತು ಬರೆದಿಟ್ಟಿದದ 40 ಪುಟಗಳ ವಿಲ್ ನ ಮಾಹಿತಿ ಬಯಲಾಗಿದೆ. ರೈ ಅವರು ಬರೆದಿಟ್ಟ ವಿಲ್ ಪ್ರಕಾರ, ತಮ್ಮ […]

ಅಂದು ಪಣಂಬೂರು ಡಿ.ಎಸ್.ಪಿ ಯನ್ನೇ ಎಸ್.ಟಿ.ಡಿ. ಬೂತಿನಲ್ಲಿ ಯಾಮಾರಿಸಿ ಬೆಚ್ಚಿಬೀಳಿಸಿದ್ದ ಮುತ್ತಪ್ಪ ರೈ

Monday, May 25th, 2020
muttappa-rai

ಬೆಂಗಳೂರು  : ಮುತ್ತಪ್ಪ ರೈ ಯಂತಹ ಒಬ್ಬ ವ್ಯಕ್ತಿ ಇನ್ನಿಲ್ಲವಾಗುವುದೆಂದರೆ ಆತ ಭೌತಿಕವಾಗಿ ಈ ಲೋಕದಿಂದ ನಿರ್ಗಮಿಸುವುದಷ್ಟೆ ಅಲ್ಲ, ಆತ ಬಿಟ್ಟುಹೋದ ನೆನಪುಗಳು ಎಷ್ಟು ಜನರ ಎದೆಯಲ್ಲಿ ಆರ್ದ್ರ ಕಣ್ಣೀರು ಉಕ್ಕಿಸುತ್ತವೆ ಅಥವಾ ಎಷ್ಟು ಜನರ ಮನದಲ್ಲಿ ನಿಟ್ಟುಸಿರುಗರೆಯುತ್ತವೆ ಎಂಬುದನ್ನು ಅವಲಂಬಿಸಿರುತ್ತೆ. ಬದುಕಿನ ಕೊನೆಗಾಲದಲ್ಲಿ ಒಂಟಿ ಕೋಟೆಯಂತ ಮನೆಯಲ್ಲಿ ಬಂಧಿಯಾಗಿ, ಜಯ ಕರ್ನಾಟಕ ಎಂಬ ಸಂಘಟನೆಯ ಮತ್ತೊಂದು ಸೋಗಿನ ಕೋಟೆಯಲ್ಲಿ ಬೆಚ್ಚಗಿದ್ದ ಮುತ್ತಪ್ಪ ರೈ ಹೆಜ್ಜೆಹೆಜ್ಜೆಗು ಸಾವಿನ ಭೀತಿಯಲ್ಲೆ ಬದುಕಿದ್ದು ಸುಳ್ಳಲ್ಲ. ಅದು, ಆತನನ್ನು ಬಲಿ ತೆಗೆದುಕೊಂಡ […]

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಬಗ್ಗೆ ಒಂದಿಷ್ಟು

Friday, May 15th, 2020
MuttappaRai

ಮಂಗಳೂರು : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಭೂಗತ ದೊರೆ ಮುತ್ತಪ್ಪ ರೈ (68) ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಪುತ್ತೂರಿನ ಕಯ್ಯೂರು ಗ್ರಾಮದ ನೆಟ್ಟಲಾ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿ ಪುತ್ರ ಮುತ್ತಪ್ಪ ರೈ  ಕಳೆದ ಕೆಲವು ವರುಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಮಾಗಡಿಯಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಯಿತು. ಮುಂಭಾಗದಲ್ಲಿ ಒಂದು ಪೊಲೀಸ್ ವಾಹನ ಹಿಂಭಾಗ ಕೆಎಸ್ಆರ್ ಪಿ ತುಕಡಿ ನಿಯೋಜಿಸಲಾಗಿತ್ತು. ರಸ್ತೆ ಮಧ್ಯೆ ಯಾರಿಗೂ ದರ್ಶನಕ್ಕೆ […]

ಆಯುಧ ಪೂಜೆ ಮಾಡಿ ಸಂಕಷ್ಟಕ್ಕೆ ಸಿಲುಕಿದ ಮುತ್ತಪ್ಪ ರೈ: ಸಿಸಿಬಿಯಿಂದ ವಿಚಾರಣೆ

Saturday, October 20th, 2018
muttappa-rai

ಬೆಂಗಳೂರು: ಆಯುಧ ಪೂಜೆ ದಿನ ಕತ್ತಿ, ಡ್ರಾಗರ್ ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಮಾಜಿ ಡಾನ್ ಮುತ್ತಪ್ಪ ರೈ ಇಂದು ಸಿಸಿಬಿ ಕಚೇರಿಗೆ ಹಾಜರಾಗಿ ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ. ಆಯುಧ ಪೂಜೆ ವೇಳೆ ಇಟ್ಟಿದ್ದ ರಿವಾಲ್ವರ್, ಬಂದೂಕುಗಳಿಗೆ ಲೈಸನ್ಸ್ ತೋರಿಸಿ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಸಿಸಿಬಿಯಿಂದ ರೈಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ತಲುಪಿದ 24 ತಾಸುಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ರೈ‌ಗೆ ಸಿಸಿಬಿ ಖಡಕ್ ಸೂಚನೆ ನೀಡಿದ್ದ ಹಿನ್ನೆಲೆ ಇಂದು ಮುತ್ತಪ್ಪ ರೈ ಎಸಿಪಿ ಮರಿಯಪ್ಪ […]

ಕುಕ್ಕೆ ಸುಬ್ರಹ್ಮಣ್ಯನಿಗೆ ಬ್ರಹ್ಮರಥ ನಿರ್ಮಾಣಕ್ಕೆ ವೀಳ್ಯ ಸ್ವೀಕರಿಸಿದ ಮುತ್ತಪ್ಪ ರೈ

Friday, March 16th, 2018
mutthappa-rai

ಮಂಗಳೂರು: ಇದು ನನ್ನ ಜೀವನದ ಒಂದು ಭಾಗ್ಯ. ಪುತ್ತೂರು ಮಹಾಲಿಂಗೇಶ್ವರನ ಕೃಪೆಯಿಂದ ಇದೀಗ ಮೂರನೇ ಬ್ರಹ್ಮರಥವನ್ನು ನೀಡುವ ಭಾಗ್ಯ ದೊರಕಿದೆ ಎಂದು ಉದ್ಯಮಿ ಎನ್.ಮುತ್ತಪ್ಪ ರೈ ಹೇಳಿದರು. ಅವರು ಮಹತೋಭಾರ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವಾರೂಪದಲ್ಲಿ ನಿರ್ಮಿಸಿ ಕೊಡುತ್ತಿರುವ ನೂತನ ಬ್ರಹ್ಮರಥ ನಿರ್ಮಾಣಕ್ಕೆ ವೀಳ್ಯ ಸ್ವೀಕರಿಸಿ ಮಾತನಾಡಿದರು. ಇದು ನಾವು ಕೊಡುವುದಲ್ಲ ಬದಲಾಗಿ ಸಕಲ ಭಕ್ತರ ಪರವಾಗಿ ಕುಕ್ಕೆಸುಬ್ರಹ್ಮಣ್ಯದ ಎಲ್ಲಾ ಜನತೆಯ ಪರವಾಗಿ ನಮ್ಮ ಕೈಯಿಂದ ಭಗವಂತ ಕೊಡಿಸುತ್ತಿದ್ದಾನೆ. ಭಗವಂತ ನೀಡಿದ ಭಾಗ್ಯವನ್ನು ನಾವು ಪೂರೈಸುತ್ತಿದ್ದೇವೆ. ಶ್ರೀ ದೇವರ […]

ಕುಕ್ಕೆ ಸುಬ್ರಹ್ಮಣ್ಯಕ್ಕೆ 2.5 ಕೋಟಿಯ ಬ್ರಹ್ಮರಥ ನೀಡಲಿರುವ ಮುತ್ತಪ್ಪ ರೈ

Wednesday, March 14th, 2018
muthappa-rai

ಮಂಗಳೂರು: ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬ್ರಹ್ಮ ರಥ ನೀಡಲು ಉದ್ಯಮಿ ಮುತ್ತಪ್ಪ ರೈ ಹಾಗೂ ಬಿಡದಿ ರಿಯಾಲಿಟಿ ವೆಂಚರ್ ಪಾಲುದಾರ ಅಜಿತ್ ಶೆಟ್ಟಿ ನಿರ್ಧರಿಸಿದ್ದಾರೆ. ಜಂಟಿಯಾಗಿ ಎರಡೂವರೆ ಕೋಟಿ ಮೌಲ್ಯದ ಬ್ರಹ್ಮರಥವನ್ನು ದೇವಸ್ಥಾನಕ್ಕೆ ನೀಡಲು ನಿರ್ಧರಿಸಿದ್ದಾರೆ. ಗುರುವಾರ ಇಬ್ಬರೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಬ್ರಹ್ಮರಥ ನೀಡುವುದಕ್ಕೆ ಎಲೆ ವೀಳ್ಯ ಸ್ವೀಕರಿಸಲಿದ್ದಾರೆ. ಬಳಿಕ ಬ್ರಹ್ಮರಥ ಕೆತ್ತನೆಯ ಕಾರ್ಯ ಆರಂಭವಾಗಲಿದೆ. ಬ್ರಹ್ಮರಥವನ್ನ ರಾಷ್ಟ್ರ,ರಾಜ್ಯ,ಶಿಲ್ಪಕಲಾ ಅಕಾಡಮಿ […]

ಕುಕ್ಕೆ: ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪ, ನಿರ್ಮಾಣ ವಿಚಾರದಲ್ಲಿ ಚರ್ಚೆ

Wednesday, October 18th, 2017
kukke subramanya

ಮಂಗಳೂರು: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥದ ನಿರ್ಮಾಣ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಉದ್ಯಮಿ ಹಾಗೂ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ತನ್ನ ಸ್ವಂತ ಖರ್ಚಿನಲ್ಲಿ ಕ್ಷೇತ್ರಕ್ಕೆ ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪವನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಮುಂದಿಟ್ಟಿದ್ದಾರೆ. ಈ ವಿಚಾರವನ್ನು ವ್ಯವಸ್ಥಾಪನಾ ಮಂಡಳಿ ಇಂದು ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪ್ರಸ್ತುತ ಪಡಿಸಿದ್ದು, ಇದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಕೇವಲ ಒಬ್ಬ ಭಕ್ತ ಕೊಡುವ ಬ್ರಹ್ಮರಥದಲ್ಲಿ ಸುಬ್ರಮಣ್ಯ ಸ್ವಾಮಿ ಸಂತುಷ್ಚನಾಗಲಾರ. ಈ […]

ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ತಾಯಿ ಸುಶೀಲಾ ಎನ್‌. ರೈ ನಿಧನ

Monday, September 4th, 2017
Sushila

ಮಂಗಳೂರು: ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ತಾಯಿ ಸುಶೀಲಾ ಎನ್‌. ರೈ(89) ಭಾನುವಾರ  ನಿಧನ ಹೊಂದಿದ್ದಾರೆ. ಪುತ್ತೂರು ತಾಲೂಕಿನ ಕೈಯೂರಿನ ಮನೆಯಲ್ಲಿ ಅವರು ನಿಧನ ಹೊಂದಿದ್ದು, ನಿನ್ನೆ ಶನಿವಾರವಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ತಾಯಿಯ ಹುಟ್ಟುಹಬ್ಬ ಆಚರಣೆಯಲ್ಲಿ ಮುತ್ತಪ್ಪ ರೈ ಸೇರಿದಂತೆ ಕುಟುಂಬಸ್ಥರು‌ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸುಶೀಲಾ ಎನ್‌. ರೈ ನಿರಂತರ ಚಿಕಿತ್ಸೆ ನಡೆಯುತ್ತಿತ್ತು.