ಮಂಗಳೂರು : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಭೂಗತ ದೊರೆ ಮುತ್ತಪ್ಪ ರೈ (68) ಗುರುವಾರ ತಡರಾತ್ರಿ ನಿಧನರಾಗಿದ್ದಾರೆ.
ಪುತ್ತೂರಿನ ಕಯ್ಯೂರು ಗ್ರಾಮದ ನೆಟ್ಟಲಾ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿ ಪುತ್ರ ಮುತ್ತಪ್ಪ ರೈ ಕಳೆದ ಕೆಲವು ವರುಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.
ಅವರ ಪಾರ್ಥಿವ ಶರೀರವನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಮಾಗಡಿಯಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಯಿತು.
ಮುಂಭಾಗದಲ್ಲಿ ಒಂದು ಪೊಲೀಸ್ ವಾಹನ ಹಿಂಭಾಗ ಕೆಎಸ್ಆರ್ ಪಿ ತುಕಡಿ ನಿಯೋಜಿಸಲಾಗಿತ್ತು. ರಸ್ತೆ ಮಧ್ಯೆ ಯಾರಿಗೂ ದರ್ಶನಕ್ಕೆ ಅವಕಾಶ ಇರಲಿಲ್ಲ. ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಬಾವುಟಗಳನ್ನು ಪ್ರದರ್ಶಿಸಿದರು.
ನೂರಾರು ಕಾರ್ಯಕರ್ತರು ಪಾರ್ಥಿವ ಶರೀರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಸಾಮಾಜಿಕ ಅಂತರ ಇಲ್ಲದರಿಂದ ಪೊಲೀಸರು ಪ್ರತಿಯೊಬ್ಬರಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಎಂದು ಸೂಚಿಸುತ್ತಿದದ್ದು ಕಂಡು ಬಂತು.
ಮಾಗಡಿಯಲ್ಲಿರುವ ಅವರ ಮನೆ ಸಮೀಪದಲ್ಲಿಯೇ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮೊದಲ ಪತ್ನಿ ಸಮಾಧಿ ಪಕ್ಕದಲ್ಲೇ ನೆರವೇರಿಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಮೂರು ದಶಕಗಳಿಗೂ ಅಧಿಕ ಕಾಲ ಭೂಗತ ಜಗತ್ತಿನಲ್ಲಿ ಅಧಿಪತ್ಯ ಸಾಧಿಸಿ, ಹತ್ತಾರು ಕೊಲೆ, ಸುಲಿಗೆ, ಪ್ರಾಣ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುತ್ತಪ್ಪರೈ ಭೂಗತ ಲೋಕ ಪ್ರವೇಶಿಸಿದ್ದು ಹುಟ್ಟೂರಿನಲ್ಲೇ .
ಪುತ್ತೂರಿನ ಕಯ್ಯೂರು ಗ್ರಾಮದ ನೆಟ್ಟಲಾ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿ ಪುತ್ರ ಮುತ್ತಪ್ಪ ರೈ ಬಿಕಾಂ ಪದವೀಧರ ಅದಕ್ಕಾಗಿ ವಿಜಯಾ ಬ್ಯಾಂಕ್ ನಲ್ಲಿ ಕ್ಲಾರ್ಕ್ ಆಗಿ ಕೆಲಸಸಿಕ್ಕಿತ್ತು . ಅಲ್ಲಿ ಬ್ಯಾಂಕ್ ಉದ್ಯೋಗಿಗಳನ್ನು ಸೇರಿಸಿಕೊಂಡು ಯೂನಿಯನ್ ಕಟ್ಟಿಕೊಂಡು ಅದರ ಲೀಡರ್ ಆಗಿದ್ದ ಮುತ್ತಪ್ಪ ರೈ, ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಕ್ಷುಲ್ಲಕ ಕಾರಣಕ್ಕೆ ರೌಡಿಸಂ ಮಾಡಿ ನಂತರ 1983ರಲ್ಲಿ ಬೆಂಗಳೂರು ಸೇರಿಕೊಂಡಿದ್ದ.
ಅಲ್ಲಿ ಕೊತ್ವಾಲ್ ರಾಮಚಂದ್ರ ನೊಂದಿಗೆ ಪಾತಕ ಲೋಕದಲ್ಲಿ ಪಳಗಿದ ಮುತ್ತಪ್ಪ ರೈ ಮತ್ತೆ ಅದರ ರುಚಿ ಬಿಡಲಿಲ್ಲ. ಅಲ್ಲೇ ಇನ್ನೊಬ್ಬ ಮಹಾ ಪಾತಕಿ ಜಯರಾಜ್ ಪೊಲೀಸರಿಗೆ ದುಸ್ವಪ್ನವಾಗಿದ್ದ ಅತ ಕೊತ್ವಾಲನನ್ನು ಮುಗಿಸಿ ಬಿಟ್ಟ, ತನ್ನ ಗುರುವನ್ನು ಮುಗಿಸಿದ ಜಯರಾಜನನ್ನು ಮುಗಿಸಲು ಮುತ್ತಪ್ಪ ರೈ ಪಣ ತೊಟ್ಟ.
ಮೊದಲೇ ಪೊಲೀಸರಿಗೆ ಜಯರಾಜನನ್ನು ಮುಗಿಸಬೇಕಿತ್ತು ಆಗ ಅದಕ್ಕೆ ಸೂಕ್ತ ವ್ಯಕ್ತಿ ಮುತ್ತಪ್ಪ ರೈ ಆಗಿದ್ದ ಆತನಿಗೂ ಜಯರಾಜ ನನ್ನು ಮುಗಿಸಬೇಕಿತ್ತು. ಪೊಲೀಸರ ಪ್ಲಾನ್ ಪ್ರಕಾರ ಜಯರಾಜನನ್ನು ಮುತ್ತಪ್ಪರೈ ಮುಗಿಸಿ ಬಿಟ್ಟ.
ಸುಮಾರು ನಲವತ್ತು ವರ್ಷಗಳ ಹಿಂದೆ ಬೆಂಗಳೂರು ಆಯಿಲ್ ದಂದೆಗೆ ಕುಖ್ಯಾತಿ ಪಡೆದಿತ್ತು. ಅಲ್ಲಿ ಆಯಿಲ್ ಕುಮಾರ ಎನ್ನುವ ರೌಡಿ ಪೆಟ್ರೋಲನ್ನು ಕಲಬೆರೆಕೆ ಮಾಡಿ ಮಾರಾಟ ಮಾಡುತ್ತಿದ್ದ ಕೊತ್ವಾಲ್ ನಂತರ ಆಯಿಲ್ ಕುಮಾರ್ ಜೊತೆ ಸೇರಿದ ಮುತ್ತಪ್ಪ ರೈ ಕೊನೆಗೆ ಆತನನ್ನೇ ಮುಗಿಸಿ ಬಿಡುತ್ತಾನೆ ನಂತರ ದುಬೈ ಸೇರಿಕೊಂಡು ಅಲ್ಲಿಂದ ಪಾತಕ ಲೋಕ ಆರಂಭಿಸುತ್ತಾನೆ. ದುಬೈನಲ್ಲಿದ್ದುಕೊಂಡೇ ಹೋಟೆಲ್ ಉದ್ಯಮ ನಡೆಸುತ್ತಾನೆ.
ದುಬೈನಿಂದ ಮಂಗಳೂರು ಭೂಗತ ಲೋಕವನ್ನು ರೈ ಕಂಟೋಲ್ ಮಾಡುತ್ತಿದ್ದ ಅದಕ್ಕಾಗಿ ಅಮರ್ ಆಳ್ವ, ರಮೇಶ್ ಪೂಜಾರಿ, ಫ್ರಾನ್ಸಿಸ್ ಡಿ ಸೋಜ ಎಂಬ ಸಹಚರಚರರನ್ನು ಉಪಯೋಗಿಸುತ್ತಿದ್ದ.
ಕಾಲೇಜು ರೌಡಿಸಂ ನಲ್ಲೂ ಮುತ್ತಪ್ಪ ರೈ ತನ್ನ ಹಸ್ತ ಚಾಚಿದ್ದ ಅದಕ್ಕಾಗಿ ರಾಕೇಶ್ ಮಲ್ಲಿ, ಪುತ್ತೂರಿನಲ್ಲಿ ಸುರೇಶ ರೈ ಎಂಬ ಯುವಕರನ್ನು ಇಟ್ಟುಕೊಂಡಿದ್ದ.
ದುಬೈನಲ್ಲಿ ದಾವೂದ್ ಇಬ್ರಾಹಿಂ, ಛೋಟಾ ರಾಜನ್ ಮೊದಲಾವರ ಜೊತೆ ರೈಗೆ ಸಂಪರ್ಕವಿತ್ತು. ನಂತರ ಅವರ ವಿರುದ್ಧ ತಿರುಗಿ ಬಿದ್ದಿದ್ದ ಮುತ್ತಪ್ಪ ರೈ, ಅವರ ಬಗ್ಗೆ ಭಾರತೀಯ ಗುಪ್ತಚರ ಇಲಾಖೆಗಳಿಗೂ ಮಾಹಿತಿ ನೀಡುತ್ತಿದ್ದ.
ಉಡುಪಿ ಸಮೀಪದ ಸಾಧು ಶೆಟ್ಟಿಯೊಂದಿಗೆ ಸಂಪರ್ಕದಲ್ಲಿದ್ದ ರೈ ಬೊಗತ ಚಟುವಟಿಕೆಗಳ ಮಾಹಿತಿ ಸಂಗ್ರಹಿಸುತ್ತಿದ್ದ. ಒಮ್ಮೆ ಕೋರ್ಟಿನಲ್ಲಿ ಜಾಮೀನು ಕೊಡಿಸುವಲ್ಲಿ ಶೆಟ್ಟಿಗೆ ರೈ ಸಹಾಯ ಮಾಡಿದ್ದ.
2002 ರಲ್ಲಿ ದುಬೈ ಸರ್ಕಾರ ರೈ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಬಳಿಕ ಸಿಬಿಐ, ರಾ ಸೇರಿದಂತೆ ದೇಶದ ಹಲವು ತನಿಖಾ ಸಂಸ್ಥೆಗಳು ರೈಯನ್ನು ವಿಚಾರಣೆ ನಡೆಸಿದ್ದವು.
ಮುತ್ತಪ್ಪ ರೈ ವಿರುದ್ಧ ಸುಮಾರು 28 ಪ್ರಕರಣಗಳಿದ್ದವು. ಆ ಬಳಿಕ ಕರ್ನಾಟಕದಲ್ಲಿ ಇದ್ದುಕೊಂಡು, ತಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ನ್ಯಾಯಾಲಯದ ಮೂಲಕವೇ ಕ್ಲೀನ್ ಚೀಟ್ ಪಡೆದುಕೊಂಡಿದ್ದರು.
ಈ ಮಧ್ಯೆ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಜತೆ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಾನೂನು ಬಾಹಿರ ಚಟುವಟಿಕೆ ಹಾಗೂ ಹಣ ವಸೂಲಿ, ಪ್ರಾಣ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರೈ ಅವರನ್ನು ಅವರ ಮನೆಯಲ್ಲೇ ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದರು.
2009 ರ ನಂತರ ಸಾಮಾನ್ಯ ರಂತೆ ಜೀವನ ನಡೆಸಲು ಮುತ್ತಪ್ಪ ರೈ ಪ್ರಯತ್ನಿಸಿದ್ದರು.
ಬಂಟ್ವಾಳದಲ್ಲಿ ರಾಕೇಶ್ ಮಲ್ಲಿ ಯೊಂದಿಗೆ ಸೇರಿ ಸುಮಾರು 1.5 ಕೋಟಿಯ ಅಸ್ತಿ ಖರೀದಿಸಿದ್ದರು ಅದಕ್ಕೆ ರಾಕೇಶ್ ಮಲ್ಲಿ 75 ಲಕ್ಷ ಕೊಟ್ಟಿದ್ದರು. ಆದರೆ ರಾಕೇಶ್ ಮಲ್ಲಿಗೆ ಮೋಸ ಮಾಡಿದ ಮುತ್ತಪ್ಪ ರೈ ಆ ಆಸ್ತಿಯನ್ನು ತನ್ನ ಮಗನ ಹೆಸರಿಗೆ ಬರೆಸಿ ಕೊಂಡರು. ಆ ಬಗ್ಗೆ ರಾಕೇಶ್ ಮಲ್ಲಿ 75 ಲಕ್ಷ ತೆಗೆಸಿ ಕೊಡುವಂತೆ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದರು.
ಪಾತಕ ಲೋಕ ತೊರೆದ ನಂತರ ಮುತ್ತಪ್ಪ ರೈ ಮಾಡಿದ ಒಳ್ಳೆ ಕೆಲಸ ಅಂದರೆ ಜಯ ಕರ್ನಾಟಕ ಸಂಘಟನೆ ಮೂಲಕ ಸಮಾಜ ಸೇವೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಮುತ್ತಪ್ಪ ರೈ ಪಾರ್ಥೀವ ಶರೀರವನ್ನು ಮಾಗಡಿಯಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗಿದೆ.
ಇಬ್ಬರು ಗಂಡು ಮಕ್ಕಳು ರಾಖಿ ಮತ್ತು ರಿಕ್ಕಿ. ರೈ ಹಿರಿಯ ಪುತ್ರ ಅಗಲಿದ್ದಾರೆ.
ಮಾಗಡಿಯಲ್ಲಿರುವ ಅವರ ಮನೆ ಸಮೀಪದಲ್ಲಿಯೇ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮೊದಲ ಪತ್ನಿ ಸಮಾಧಿ ಪಕ್ಕದಲ್ಲೇ ನೆರವೇರಿಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಮುತ್ತಪ್ಪ ರೈ ಅನುರಾಧ ಎಂಬವರೊಂದಿಗೆ ಎರಡನೇ ಮದುವೆ ಆಗಿದ್ದರು. ಆದರೆ ಅವರೊಂದಿಗೆ ಹೆಚ್ಚು ದಿನ ಸಂಸಾರ ಮಾಡದೆ ಬೇರೆ ಬೇರೆ ಆಗಿದ್ದರು.
ಹತ್ತು ವರ್ಷಗಳ ಹಿಂದೆ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸುಮಾರು ಒಂದು ಕೋಟಿ ವೆಚ್ಚ ಮಾಡಿ ರಥ ದಾನ ಮಾಡಿರುವುದು ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ರಥ ನಿರ್ಮಾಣಕ್ಕೂ ಸಹಾಯ ಮಾಡಿರುವುದು ಅವರ ಪಾಪ ನಿರ್ಮೂಲನೆಯ ಧಾರ್ಮಿಕ ನಂಬಿಕೆಯ ಮತ್ತೊಂದು ಮುಖ.
ಅಂದ ಹಾಗೆ ಮಂಗಳೂರಲ್ಲಿ ಮುತ್ತಪ್ಪ ರೈ ಈಗಲೂ 28ಲಕ್ಷ ವಾರ್ಷಿಕ ತೆರಿಗೆ ಪಾವತಿ ಮಾಡುತ್ತಿದ್ದರಂತೆ. ನೀವೇ ಅಂದಾಜು ಮಾಡಿ ಮುತ್ತಪ್ಪ ರೈ ಯ ವ್ಯವಹಾರ ಎಂಥದ್ದು ಇರಬಹುದು ಅಂತ.
Click this button or press Ctrl+G to toggle between Kannada and English