ಸದ್ಯದಲ್ಲೇ ಸೆಟ್ ಏರಲಿರುವ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನ ಕಥೆಯ ಸಿನಿಮಾ

9:54 PM, Friday, December 4th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Muttappa Rai ಪುತ್ತೂರು : ಡೆಡ್ಲಿ ಸೋಮ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಸಿನಿಮಾ ಆರಂಭಿಸಿದ್ದಾರೆ. ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನದ ಕಥೆಗಳನ್ನು ಒಳಗೊಂಡ ಬಯೋ ಪಿಕ್ ‘ಎಂ ಆರ್” ಸಿನಿಮಾ ಸದ್ಯದಲ್ಲೇ ಸೆಟ್ ಏರಲಿದೆ. ಡೆಡ್ಲಿ  ಸಿನಿಮಾ ಚಿತ್ರಿಕರಣ ಆರಂಭಕ್ಕೆ ಪೂರ್ವಭಾವಿಯಾಗಿ ಸಿನಿಮಾದ ಯಶಸ್ಸಿಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಚಿತ್ರ ನಿರ್ಮಾಣದ ಬಳಿಕ ಶ್ರೀ ದೇವಾಲಯದಲ್ಲಿ ಮಹಾಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಸೇವೆ ಸಲ್ಲಿಸುವ ಸಂಕಲ್ಪವನ್ನು ಚಿತ್ರ ತಂಡ ಮಾಡಿದೆ. ನಿರ್ದೇಶಕ ರವಿ ಶ್ರೀವತ್ಸ, ನಾಯಕ ನಟ ದೀಕ್ಷಿತ್ ಹಾಗೂ ನಿರ್ಮಾಪಕ ಶೋಭಾ ರಾಜಣ್ಣ ಈ ಸಂಕಲ್ಪವನ್ನು ಕೈಗೊಂಡರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ನಿರ್ದೇಶಕ ರವಿ ಶ್ರೀವತ್ಸ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಚಿತ್ರ ಕಥಾ ನಾಯಕ ಮುತ್ತಪ್ಪ ರೈ ಅವರ ಆರಾಧ್ಯ ದೈವವಾಗಿದ್ದರು. ಅವರ ಜೀವನದ ಸಕಲ ಯಶಸ್ಸಿನ ಹಿಂದೆ ಪುತ್ತೂರು ಮಹಾಲಿಂಗೇಶ್ವರನ ಪಾತ್ರ ಇದೆ ಎಂದು ನಂಬಿಕೊಂಡಿದ್ದರು. ಅದೇ ಹಿನ್ನೆಲೆಯಲ್ಲಿ ಚಿತ್ರ ತಂಡವೂ ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿ ಶತರುದ್ರಾಭಿಷೇಕದ ಸಂಕಲ್ಪ ಮಾಡಿಕೊಂಡಿದೆ ಎಂದರು.

Srivatsaಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪುತ್ತೂರಿಗೆ ಅಗಮಿಸುವುದಾಗಿ ತಿಳಿಸಿದ ಅವರು, ಸಿನಿಮಾದಲ್ಲಿ ಬರುವ ಮುತ್ತಪ್ಪ ರೈ ಯವರ ಬಾಲ್ಯದ ಹಾಗೂ ಯೌವನದ ದಿನಗಳ ಕಥೆಗಳ ಚಿತ್ರೀಕರಣವನ್ನು ಪುತ್ತೂರು ಹಾಗೂ ಮಂಗಳೂರು ಭಾಗದಲ್ಲಿ ಚಿತ್ರೀಕರಿಸಲಾಗುತ್ತದೆ. ಚಿತ್ರವು ಮೂರು ಭಾಗಗಳಲ್ಲಿ ತೆರೆ ಕಾಣಲಿದೆ. ಚಿತ್ರದ ನಾಯಕ ನಟ ದೀಕ್ಷಿತ್ ಈ ಹಿಂದೆ ಡೆಡ್ಲಿ ಸೋಮ ಚಿತ್ರದಲ್ಲಿ ಬಾಲ ನಟನಾಗಿ ಪಾತ್ರ ನಿರ್ವಹಿಸಿದ್ದರು ಎಂದು ತಿಳಿಸಿದರು.

ಈ ಸಿನಿಮಾಕ್ಕಾಗಿ ಕಳೆದ ಹಲವು ದಿನಗಳಿಂದ ತಯಾರಿ ನಡೆಸುತ್ತಿದ್ದಾನೆ. ಮುತ್ತಪ್ಪ ರೈ ಅವರ ಹಳೇ ವಿಡಿಯೋ ಹಾಗೂ ಫೋಟೋಗಳನ್ನು ಗಮನಿಸಿ ಪಾತ್ರಕ್ಕೆ ಪೂರಕವಾಗುವ ಅಂಶಗಳನ್ನು ಬಳಸಿಕೊಳ್ಳಲಿದ್ದೇನೆ. ತಯಾರಿ ಮುಂದುವರೆದಿದೆ. ನಾಯಕ ನಟನಾಗಿ ಅವಕಾಶ ಸಿಕ್ಕ ಮೊದಲ ಸಿನಿಮಾದಲ್ಲೇ ಇಷ್ಟು ಅಗಾಧ ವ್ಯಕ್ತಿತ್ವದ ವ್ಯಕ್ತಿಯ ಪಾತ್ರ ನಿರ್ವಹಿಸಲು ಅವಕಾಶ ಸಿಕ್ಕಿದೆ. ದೇವರ ಆಶೀರ್ವಾದದಿಂದ ಇದರಲ್ಲಿ ಯಶಸ್ವಿಯಾಗುತ್ತೇನೆ ಎಂಬ ನಂಬಿಕೆ ಇದೆ ಎಂದು ನಾಯಕ ನಟ ದೀಕ್ಷಿತ್ ತಿಳಿಸಿದರು.

ಈ ಹಿಂದೆ ಮಾಜಿ ಡಾನ್ ಮುತ್ತಪ್ಪ ರೈ ಜೀವನ ಆಧರಿಸಿ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಅದ್ಧೂರಿಯಾಗಿ ಆರಂಭಿಸಿದ್ದರು. ಮುತ್ತಪ್ಪ ರೈ ಸಮ್ಮುಖದಲ್ಲಿ ಈ ಚಿತ್ರದ ಮುಹೂರ್ತ ಸಹ ನಡೆದಿತ್ತು. ಆಮೇಲೆ ಈ ಚಿತ್ರ ಮುಂದುವರಿಯಲಿಲ್ಲ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English