ಕನ್ನಡವನ್ನೇ ಬಳಸಬೇಕು, ಕನ್ನಡವನ್ನು ಬೆಳಸಬೇಕು ಎಂಬುದು  ಸರಕಾರದ ಆಶಯ : ವಸಂತ ಬಂಗೇರ

12:38 AM, Saturday, March 17th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kannada-kalarava ಬೆಳ್ತಂಗಡಿ   :  ಕನ್ನಡವನ್ನೇ ಬಳಸಬೇಕು, ಕನ್ನಡದಲ್ಲೇ ಮಾತನಾಡಬೇಕು, ಕನ್ನಡವನ್ನು ಬೆಳಸಬೇಕು ಎಂಬುದು ಕರ್ನಾಟಕ ಸರಕಾರದ ಆಶಯ. ಇಡೀ ಸರಕಾರವೇ ಕನ್ನಡದಲ್ಲಿ ನಡೆಯಬೇಕು ಎಂಬುದು ಸರಕಾರದ ಉದ್ದೇಶ ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು. ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಬೆಳ್ತಂಗಡಿಯ ತಣ್ಣೀರುಪಂತ ಗ್ರಾಮದ ಮನೆಯಂಗಳದಲ್ಲಿ  ಗುರುವಾರ ಮಧ್ಯಾಹ್ನ ಆಯೋಜಿಸಿದ್ದ ಮನೆಯಂಗಳದಲ್ಲಿ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದ ಮಾಜಿ ಪ್ರದಾನಿ ಎಚ್ ಡಿ ದೇವೇಗೌಡ ಕನ್ನಡಿಗರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಮತ್ತು ಶಾಸಕರು ಕನ್ನಡ ಮಾಧ್ಯಮದಲ್ಲಿ ಓದಿದವರು. ನಾವು ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದವರು ಈ ಕಾರಣದಿಂದಾಗಿಯೆ ಕರ್ನಾಟಕ ಸರಕಾರ ಅನೇಕ ಕನ್ನಡ ಮಾಧ್ಯಮ ಶಾಲೆಗಳನ್ನು ನಡೆಸುತ್ತಾ ಬಂದಿದೆ. ಇಂದಿನ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನ ಕನ್ನಡದಲ್ಲಿ ಓದಿ ಹೈಸ್ಕೂಲ್ ಬಳಿಕ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಾರೆ. ಎಲ್ಲ ಹೆತ್ತವರಿಗೆ ತಮ್ಮ ಮಕ್ಕಳು ಆಂಗ್ಲ ಭಾಷೆಯಲ್ಲಿ ಓದಬೇಕು ಎಂಬ ಹಂಬಲ ಇರುವುದು ಸಹಜ. ಆದರೆ ಕನ್ನಡದ ನೆಲದಲ್ಲಿ ಕನ್ನಡವನ್ನು ಬೆಳೆಸಿ ಪೋಷಿಸುವುದು ಕನ್ನಡಿಗರ ಧರ್ಮ ಎಂದ ಅವರು ಈ ನಿಟ್ಟಿನಲ್ಲಿ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯ ಶ್ಲಾಘನಾರ್ಹ ಎಂದು ಹೇಳಿದರು.

kannada-kalarava ತನ್ನೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಸಾಹುಲ್ ಹಮೀದ್, ತಾಲೂಕು ಪಂಚಾಯತ್ ಸದಸ್ಯೆ ಕೇಶವತಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸದಾನಂದ ಶೆಟ್ಟಿ ಮತ್ತು, ಡಿ.ಕೆ ಆಯೂಬ್, ಮನೆಯಂಗಳದ ಮನೆಯೊಡತಿ ಪೂರ್ಣಿಮಾ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಂಗಾಧರ್ ಗಾಂಧಿ ಮತ್ತು ಬಳಗದಿಂದ ಕನ್ನಡ ಗೀತ ಗಾಯನ ನೆರೆದ ಬಂಧುಗಳ ಮನ ತಣಿಸಿತು.

kannada-kalarava

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English