ಕನ್ನಡವನ್ನೇ ಬಳಸಬೇಕು, ಕನ್ನಡವನ್ನು ಬೆಳಸಬೇಕು ಎಂಬುದು ಸರಕಾರದ ಆಶಯ : ವಸಂತ ಬಂಗೇರ
Saturday, March 17th, 2018ಬೆಳ್ತಂಗಡಿ : ಕನ್ನಡವನ್ನೇ ಬಳಸಬೇಕು, ಕನ್ನಡದಲ್ಲೇ ಮಾತನಾಡಬೇಕು, ಕನ್ನಡವನ್ನು ಬೆಳಸಬೇಕು ಎಂಬುದು ಕರ್ನಾಟಕ ಸರಕಾರದ ಆಶಯ. ಇಡೀ ಸರಕಾರವೇ ಕನ್ನಡದಲ್ಲಿ ನಡೆಯಬೇಕು ಎಂಬುದು ಸರಕಾರದ ಉದ್ದೇಶ ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು. ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಬೆಳ್ತಂಗಡಿಯ ತಣ್ಣೀರುಪಂತ ಗ್ರಾಮದ ಮನೆಯಂಗಳದಲ್ಲಿ ಗುರುವಾರ ಮಧ್ಯಾಹ್ನ ಆಯೋಜಿಸಿದ್ದ ಮನೆಯಂಗಳದಲ್ಲಿ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಮಾಜಿ ಪ್ರದಾನಿ ಎಚ್ ಡಿ ದೇವೇಗೌಡ ಕನ್ನಡಿಗರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ […]