ಮಂಗಳೂರು: ದೆಹಲಿ ಕರ್ನಾಟಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣಕನ್ನಡ ಜಿಲ್ಲಾಡಳಿತ ಸಂಯುಕ್ತವಾಗಿ ಆಚರಿಸುತ್ತಿರುವ ರಾಷ್ಟ್ರೀಯ ಅಬ್ಬಕ್ಕ ಉತ್ಸವದ ಆರನೇ ದಿನವಾದ ಇಂದು ತೆಲುಗು ಭಾಷೆಯಲ್ಲಿ ರಾಣಿ ಅಬ್ಬಕ್ಕನ ಕುರಿತು ಶ್ರೀ ಎ.ಎಸ್.ಜಯಚಂದ್ರ ಉಪನ್ಯಾಸ ಮಾಡಿದರು.
ರಾಣಿ ಅಬ್ಬಕ್ಕನ ಇತಿಹಾಸವನ್ನು ವಿಷದೀಕರಿಸುತ್ತ ತೆಲುಗು ಮತ್ತು ತುಳು ಭಾಷೆಯ ಆಗಿನ ಕಾಲದ ಸಂಬಂಧದ ಬಗ್ಗೆ ಹೊಸ ಸುಳಿವೊಂದನ್ನು ನೀಡಿದರು. ಮಹಿಳೆಯರ ಅಗಿನ ಜೀವನ ಸ್ಥಿತಿಯ ಬಗ್ಗೆ ವಿವರಿಸುತ್ತ ಮಹಿಳಾ ದಿನಾಚರಣೆಯ ಈ ತಿಂಗಳಿನಲ್ಲಿ ರಾಣಿ ಅಬ್ಬಕ್ಕನ ಉತ್ಸವವನ್ನು ಆಚರಿಸುತ್ತಿರುವುದರ ಮಹತ್ವವನ್ನು ತಿಳಿಸಿದರು. ತುಳು ಹಾಗೂ ತೆಲುಗು ಸಂಪ್ರದಾಯದ ನಂಟನ್ನು ವಿವರಿಸಿ ಇಂದಿನ ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಪ್ರಖ್ಯಾತರಾದ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಪ್ರಕಾಶ್‌ರೈ, ಸುಮನ್‌ಮುಂತಾದವರು ತುಳುವರು ಎಂದು ಹೇಳಿದರು.
ಈ ಉತ್ಸವದ ಮೂಲಕ ದೆಹಲಿಯಲ್ಲಿರುವತೆಲುಗು ಭಾಷಿಕರಿಗೆ ತುಳು ನಾಡಿನರಾಣಿಯ ಪರಿಚಯ ಮಾಡಿಸಿದ್ದು ಉತ್ತಮ ಪ್ರಯತ್ನ. ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಎಂದರೆ ನಮಗೆ ಮೊದಲು ನೆನಪಾಗುವುದುಝಾನ್ಸಿರಾಣಿ ಲಕ್ಷ್ಮೀ ಬಾಯಿ ಮಾತ್ರ, ರಾಣಿ ಅಬ್ಬಕ್ಕನ ಬಗ್ಗೆ ಎಲ್ಲಿಯೂಕಂಡುಬರುವುದಿಲ್ಲ. ಆದ್ದರಿಂದ ಈ ಉತ್ಸವ ಮತ್ತಷ್ಟು ಸಾರ್ಥಕವಾಗಬೇಕೆಂದರೆದೆಹಲಿಯಯಾವುದಾದರೂ ಪ್ರಸಿದ್ಧ ಸ್ಥಳದಲ್ಲಿ ರಾಣಿಅಬ್ಬಕ್ಕನ ಪ್ರತಿಮೆ ಸ್ಥಾಪನೆ ಆಗಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಸಂಘದಕಾರ್ಯಕಾರಿ ಸಮಿತಿಯ ಸದಸ್ಯರಾದಡಾ.ಎಂ.ಎಸ್.ಶಶಿಕುಮಾರ್‌ಅವರುಕಾರ್ಯಕ್ರಮವನ್ನು ನಿರೂಪಿಸಿದರು.ಖಜಾಂಚಿ ಶ್ರೀ ಕೆ.ಎಸ್.ಜಿ.ಶೆಟ್ಟಿಅವರುವಂದನಾರ್ಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ ಅವರು ಈ ಕಾರ್ಯಕ್ರಮದ ಸಂಚಾಲ ಕತ್ವವನ್ನು ವಹಿಸಿದ್ದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಸಂಸ್ಥೆಯ ಸದಸ್ಯರಾದಡಾ.ಎಸ್.ಎಂ.ಕಂಠೀಕರ್ ಹಾಗೂ ಸ್ಥಳೀಯ ಅನೇಕ ತೆಲುಗು ಭಾಷಿಗರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English