ಕೊಹ್ಲಿ ಎಲ್ಲರಿಗೂ ಮಾದರಿ: ಶ್ರೀಲಂಕಾ ತಂಡದ ಕ್ರಿಕೆಟಿಗ ರೋಶನ್ ಸಿಲ್ವಾ

6:13 PM, Tuesday, March 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

virat-kohliಮಂಗಳೂರು: ಭಾರತ ಕಿಕಟ್ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ಅದ್ಭುತ ಆಟದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶ್ರೀಲಂಕಾ ತಂಡದ ಟೆಸ್ಟ್ ಕ್ರಿಕೆಟಿಗ ರೋಶನ್ ಸಿಲ್ವಾ ಹೇಳಿದ್ದಾರೆ.

ಮಂಗಳೂರು ಪ್ರೀಮಿಯರ್ ಲೀಗ್ ಉದ್ಘಾಟನೆಗೆ ನಗರಕ್ಕೆ ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಅತ್ಯದ್ಭುತ ಆಟಗಾರ, ನಾಯಕನಾಗಿ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಬಲ್ಲ ಚಾಕಚಕ್ಯತೆಯುಳ್ಳವರು ಮಾತ್ರವಲ್ಲ ಶ್ರಮಜೀವಿ. ಕೆಲವು ಸಂದರ್ಭ ಇಡೀ ತಂಡ ಮಾಡಬೇಕಾದ ರನ್‌ಗಳನ್ನು ಏಕಾಂಗಿಯಾಗಿ ಸಂಪಾದಿಸಿ ತಂಡದ ವಿಜಯಕ್ಕೆ ಕಾರಣರಾಗಿದ್ದಾರೆ ಎಂದು ಹೊಗಳಿದರು.

ತಂಡದ ಕ್ಯಾಪ್ಟನ್‌ ಆಗಿ ಸಲಹೆ ನೀಡುವುದು ಸುಲಭ. ಆದರೆ ಸಲಹೆ ನೀಡಿದ್ದನ್ನು ಅಕ್ಷರಶಃ ತಾನೇ ಆಟದ ಮೂಲಕ ತೋರಿಸುವುದು ಕಷ್ಟ ಎಂದ ಅವರು, 2007ರಲ್ಲಿ 19ರೊಳಗಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಪರ ವಿರಾಟ್ ಕೊಹ್ಲಿ ಆಡುತ್ತಿದ್ದಾಗ ನಾನು ಶ್ರೀಲಂಕಾ ಪರ ಆಡಿದ್ದೆ ಎಂದು ಹಳೆಯ ದಿನಗಳನ್ನು ಸ್ಮರಿಸಿದರು.

ಮಂಗಳೂರಿನ ಹವಾಮಾನ ಮತ್ತು ಆಹಾರ ಪದ್ಧತಿ ಶ್ರೀಲಂಕಾದಂತೆಯೇ ಹೋಲಿಕೆಯಾಗುತ್ತಿದ್ದು, ಈ ನಗರ ನನಗೆ ತುಂಬಾ ಇಷ್ಟವಾಗಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಎಂಪಿಎಲ್ ಟೂರ್ನಿಯಲ್ಲಿ ಟಿ-4 ಸೂಪರ್ ಕಿಂಗ್ಸ್ ತಂಡದ ರಾಯಭಾರಿಯಾಗಿ ಆಯ್ಕೆಯಾಗಿರುವುದು ತುಂಬಾ ಖುಷಿ ನೀಡಿದೆ. ಇಲ್ಲಿನ ಜನ ತುಂಬಾ ಒಳ್ಳೆಯವರು. 3ರಿಂದ 4 ದಿನಗಳ ಕಾಲ ಮಂಗಳೂರಿನಲ್ಲಿದ್ದು, ತಂಡವನ್ನು ಬೆಂಬಲಿಸುವೆ. ವೆಸ್ಟ್ ವಿಂಡೀಸ್ ಪ್ರವಾಸ ಹಿನ್ನೆಲೆಯಲ್ಲಿ ಫೈನಲ್ ಪಂದ್ಯಕ್ಕೆ ಬರುವುದು ಅನುಮಾನ ಎಂದರು.

ಟಿ-4 ಸೂಪರ್ ಕಿಂಗ್ಸ್ ತಂಡದ ಮಾರ್ಷಲ್‌ ನೊರೊನ್ಹಾ ಮಾತನಾಡಿ, ಟಿ-4 ತಂಡವು ಬುಧವಾರ ಮೊದಲ ಪಂದ್ಯವನ್ನು ಆಡಲಿದೆ. ತಂಡದಲ್ಲಿ 3 ರಾಜ್ಯಮಟ್ಟದ ನಾಯಕರಿದ್ದು, 9 ಮಂಗಳೂರಿನ ಆಟಗಾರರಿದ್ದಾರೆ. ವಿದೇಶಿ ಕೋಚ್ ವಸಂತನ್, ರಾಯಭಾರಿ ರೋಶನ್ ಸೇರಿದಂತೆ ತಂಡ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ ಎಂದು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English