ಮಂಗಳೂರು: ಮೀನು ಸಾಗಾಟದ ರೀತಿಯಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವೊಂದು ಬಯಲಿಗೆ ಬಂದಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ವಿಜಯ ಬ್ಯಾಂಕ್ ಸಮೀಪ ಇರುವ ಹೊಗೆಹಿತ್ಲು ಎಂಬಲ್ಲಿ ಕಂಟೈನರ್ ಹಾಗೂ ಮೀನು ಸಾಗಾಟದ ಮುಚ್ಚಿದ ಲಾರಿಯಲ್ಲಿ ಅಕ್ರಮವಾಗಿ ಸಾಮಾನ್ಯ ಮರಳನ್ನು ಗುಪ್ತವಾದ ರೀತಿಯಲ್ಲಿ ಹೊರ ನೋಟಕ್ಕೆ ಮೀನು ಸಾಗಾಟ ಮಾಡುವ ರೀತಿಯಲ್ಲಿ ಕೇರಳದ ಕಡೆಗೆ ಮಾರಾಟ ಮಾಡಲು ತುಂಬಿಸಿ ಸಾಗಿಸಲಾಗುತ್ತಿತ್ತು.
ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಮತ್ತು ಸಿಬ್ಬಂದಿ ದಾಳಿ ನಡೆಸಿ ಕಂಟೈನರ್‌ಗಳನ್ನ ಮರಳು ಸಹಿತ ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡಿರುವ ಮರಳು ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ 15 ಲಕ್ಷ ಎನ್ನಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಮರಳನ್ನು ಹಾಗೂ ವಾಹನಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.
Click this button or press Ctrl+G to toggle between Kannada and English