ಬೆಂಗಳೂರಿನಲ್ಲಿದ್ದುಕೊಂಡೇ ದೇಶ ಆಳುತ್ತಾರಂತೆ ಹುಚ್ಚ ವೆಂಕಟ್‌‌!

10:15 AM, Thursday, March 29th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

huccha-venkatಮಂಗಳೂರು: ನನ್ನನ್ನು ಹೀರೋ ಮಾಡಿದ್ದು ನ್ಯೂಸ್ ಚಾನೆಲ್‌ಗಳು. ನ್ಯೂಸ್ ಚಾನೆಲ್‌ಗಳ ಸಹಿತ ಪತ್ರಕರ್ತರು ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ನಾನೂ ನ್ಯೂಸ್ ಚಾನೆಲ್ ಆ್ಯಂಕರ್ ಆಗಿ ನಟಿಸುತ್ತಿದ್ದೇನೆ. ನನ್ನ ಸಿನಿಮಾ `ಡಿಕ್ಟೇಟರ್ ಹುಚ್ಚ ವೆಂಕಟ್’ ಸಿದ್ಧಗೊಳ್ಳುತ್ತಿದ್ದು, ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಅಡ್ಡಿಪಡಿಸಿದರೆ, ದೃಶ್ಯಗಳಿಗೆ ಕತ್ತರಿ ಪ್ರಯೋಗ ನಡೆಸಿದರೆ ಯೂಟ್ಯೂಬ್‌ನಲ್ಲಿ ಪೂರ್ಣ ಪ್ರಮಾಣದ ಸಿನಿಮಾ ಹರಿಯಬಿಡುತ್ತೇನೆ ಎಂದು ಸಿನಿಮಾ ನಿರ್ದೇಶಕ, ನಿರ್ಮಾಪಕ ಹುಚ್ಚ ವೆಂಕಟ್ ಹೇಳಿದರು.

ಐಶ್ವರ್ಯ ಅವರು ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಡಿಕೇರಿ, ಭಾಗಮಂಡಲ, ತಲಕಾವೇರಿಯಲ್ಲಿ ಈಗಾಗಲೇ ಚಿತ್ರೀಕರಣ ನಡೆದಿದೆ. ಸಮಾಜಕ್ಕೆ ಉತ್ತಮ ಸಂದೇಶ ಈ ಚಿತ್ರದಲ್ಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಒಂದಲ್ಲ ಒಂದು ದಿನ ನಾನು ಪ್ರಧಾನಮಂತ್ರಿಯಾಗುತ್ತೇನೆ. ಬೆಂಗಳೂರಿನಲ್ಲಿ ಇದ್ದುಕೊಂಡೇ ದೇಶದ ಆಡಳಿತ ನಡೆಸುತ್ತೇನೆ. ನನ್ನ ಮಂತ್ರಿ ಮಂಡಲದಲ್ಲಿ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು, ಐಟಿ ತಜ್ಞರು ಮಂತ್ರಿಗಳಾಗಿರುತ್ತಾರೆ. ಯಾವುದೇ ರಾಜಕೀಯ ಪಕ್ಷಕ್ಕೆ ತನ್ನ ವಿರೋಧವಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡಿರುವುದರಿಂದ ಐದು ವರ್ಷ ಅಧಿಕಾರ ಪೂರೈಸಿದ್ದಾರೆ. ಆದರೆ ಇದನ್ನೆಲ್ಲ ಹಾಳು ಮಾಡಲು ಮುನಿರತ್ನ ಎಂಬ ಒಬ್ಬ ಶಾಸಕರು ಸಾಕು. ಮುನಿರತ್ನ ತನ್ನ ಚುನಾವಣೆ ಪ್ರಚಾರಕ್ಕಾಗಿ ಮತದಾರರಿಗೆ ಕುಕ್ಕರ್ ವಿತರಣೆ ಮಾಡಿದ್ದಾರೆ. ಸಾಕ್ಷಿ ಸಂಗ್ರಹಕ್ಕಾಗಿ ನನ್ನ ಅಕ್ಕನ ಮೂಲಕ ಕುಕ್ಕರ್ ಸಂಗ್ರಹಿಸಿಟ್ಟಿದ್ದೇನೆ. ಜನರಿಗೆ ವಿತರಿಸಿದ ಕುಡಿಯುವ ನೀರಿನ ಕ್ಯಾನ್‌ನಲ್ಲಿಯೂ ಮುನಿರತ್ನ ತನ್ನ ಭಾವಚಿತ್ರ ಹಚ್ಚಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕ್ಯಾನ್ ಪ್ರದರ್ಶಿಸಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ನಮ್ಮ ತೆರಿಗೆ ಹಣದಿಂದ ಆಹಾರವನ್ನು ನೀಡಲಾಗುತ್ತದೆ. ಅದಕ್ಕೆ ನಾವು ನಮ್ಮಿಂದ ಒಂದಿಷ್ಟು ಹಣವನ್ನೂ ನೀಡುತ್ತೇವೆ. ಹಾಗಿದ್ದರೆ ಅದಕ್ಕೆ ಇಂದಿರಾ ಕ್ಯಾಂಟೀನ್ ಎಂಬ ಹೆಸರು ಯಾಕೆ? ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೋದಿ ಕ್ಯಾಂಟೀನ್ ಕೂಡಾ ಬರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿನಿಮಾದ ನಾಯಕಿ ಐಶ್ವರ್ಯ ಮಾತನಾಡಿ, ಹುಚ್ಚ ವೆಂಕಟ್ ಅವರ ಪ್ರಾಜೆಕ್ಟ್‌ಗಳು ತುಂಬಾ ಕ್ಲೀಯರ್. ಸೊಸೈಟಿ ಬಗ್ಗೆ ಅವರು ತುಂಬಾ ಹೇಳುತ್ತಾರೆ. ಅವರಿಂದ ತುಂಬಾ ಪಾಠ ಕಲಿತಿದ್ದೇನೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English