ಶ್ರದ್ಧಾ ಭಕ್ತಿಯಿಂದ ಮಹಾವೀರ ಜಯಂತಿ ಆಚರಣೆ

10:16 AM, Friday, March 30th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mahaveer-jayanthiಮಂಗಳೂರು: ಭಗವಾನ್ ಮಹಾವೀರರ 2,617ನೇ ಜಯಂತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಂಗಳೂರಿನ ಬಜಿಲಕೇರಿಯಲ್ಲಿರುವ ಏಕೈಕ ಜಿನಾಲಯ ಆಧಿಶ್ವರ ಸ್ವಾಮಿ ಜೈನ ಬಸದಿಯಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಗವಾನ್ ಮಹಾವೀರನಿಗೆ ಚಂದನಾಭಿಷೇಕ, ಕನಕಾಭಿಷೇಕ, ಪುಷ್ಪ ವೃಷ್ಠಿ, ಕಳಶಾಭಿಷೇಕ ಸೇರಿದಂತೆ ಅಷ್ಟ ದ್ರವ್ಯಗಳ ವಿಶೇಷ ಅಭಿಷೇಕ ನಡೆಯಿತು.

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಬಿ.ಪಿ. ಸಂಪತ್ ಕುಮಾರ್, ಭಗವಾನ್ ಮಹಾವೀರ ವಿಶ್ವಭಾತೃತ್ವ ಹಾಗೂ ಸಮಾನತೆಯನ್ನು ಪ್ರತಿಪಾದಿಸಿದವರು ಹಾಗೂ ಅದನ್ನು ಸಮಾಜಕ್ಕೆ ಬೋಧಿಸಿದವರು ಎಂದರು.

ತಮ್ಮ 30ನೆ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ, 12 ವರ್ಷಗಳ ದೀರ್ಘ ತಪಸ್ಸಿನ ಬಳಿಕ ಮತ್ತೆ ಸಮಾಜಕ್ಕೆ ಹಿತ ಬೋಧನೆಯನ್ನು ಮಾಡಿದವರು ಮಹಾವೀರರು. ನೊಂದವರಿಗೆ ತತ್ವ ಸಿದ್ಧಾಂತಗಳ ಮೂಲಕ ಶಾಶ್ವತವಾದ ಬೆಳಕನ್ನು ತೋರಿಸಿದ ಅವರ ಸಂದೇಶ ಸಾರ್ವಕಾಲಿಕ ಎಂದವರು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English