ಆಳ್ವಾಸ್‍ನಲ್ಲಿ “ಶಾಜ್ಬೂ ಚರೋಬಾ” ಹಬ್ಬ ಆಚರಣೆ

10:17 AM, Monday, April 2nd, 2018
Share
1 Star2 Stars3 Stars4 Stars5 Stars
(No Ratings Yet)
Loading...

collegeಮಂಗಳೂರು: ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣ ಪರಿಹಾರ ಸೂಚಿಸುತ್ತದೆ. ಉತ್ತಮ ಶಿಕ್ಷಣ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಬುನಾದಿ ಎಂದು ಮಣಿಪುರದ ಶಿಕ್ಷಣ ಸಚಿವ ರಾಧೆಶ್ಯಾಮ್ ಅಭಿಪ್ರಾಯಪಟ್ಟರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಭಾನುವಾರ ಜರುಗಿದ “ಶಾಜ್ಬೂ ಚರೋಬಾ” ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು,ಶಿಕ್ಷಣಕ್ಕೂ, ಸಾಕ್ಷರತೆಗೂ ಅಗಾಧ ವ್ಯತ್ಯಾಸವಿದೆ. ಸಾಕ್ಷರತೆ ಶಿಕ್ಷಣದ ಒಂದು ಸಣ್ಣ ಭಾಗವಷ್ಟೆ. ವಿದ್ಯಾಭ್ಯಾಸ ನಿಶ್ಚಿತ ಗುರಿ ಹೊಂದಿರುವುದು ಅಗತ್ಯ” ಎಂದು ಕಿವಿಮಾತು ಹೇಳಿದರು.

ಮಣಿಪುರ ಈಗಿನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. ಮೂಲಭೂತ ಸಮಸ್ಯೆಗಳಿಂದ ಮುಕ್ತವಾಗಿದ್ದರೂ ಹಲವು ಕ್ಷೇತ್ರಗಳಲ್ಲಿ ನಾವಿನ್ನೂ ಸಾಧಿಸುವುದು ಸಾಕಷ್ಟಿದೆ. ಹಾಗಾಗಿ ನಾನು ಭೇಟಿ ನೀಡಿದ ಜಾಗಗಳಲ್ಲಿನ ಉತ್ತಮ ಅಂಶಗಳನ್ನು ನನ್ನ ರಾಜ್ಯದಲ್ಲಿ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ ಎಂದು ರಾಧೆಶ್ಯಾಮ್ ಹೇಳಿದರು.

ಶಾಜ್ಬೂ ಚರೋಬಾ ಮಣಿಪುರಿಯ ಹೊಸ ವರ್ಷವಿದ್ದಂತೆ. ಯುಗಾದಿ ಹೇಗೆ ಹಿಂದುಗಳಿಗೆ ವರ್ಷಾರಂಭವೋ ಅದೇ ರೀತಿ ಇದು ಮಣಿಪುರಿಗರ ಯುಗಾದಿ. ಈ ಹಬ್ಬದಂದು ದೇವರ ಪೂಜೆಗೈದು ನಂತರ ಅಳಿದ ಪಿತೃಗಳಿಗೆ ಅನ್ನ ನೀಡಲಾಗುತ್ತದೆ. ಈ ದಿನ ಹೇಗೆ ಇರುತ್ತದೋ ಅದೇ ರೀತಿ ಇಡೀ ವರ್ಷವೂ ಇರುತ್ತದೆ ಎಂಬುದು ನಂಬಿಕೆ.

ಶಾಜ್ಬೂ ಚರೋಬಾ ಹಬ್ಬದ ಆಚರಣೆಯ ಪ್ರಯುಕ್ತ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಣಿಪುರಿ ನೃತ್ಯ, ಡೊಳ್ಳು ಕುಣಿತ, ಸ್ಟಿಕ್ ಡಾನ್ಸ್, ಪೆನಾ ಮತ್ತು ಲಾಂದೆ ವಾದ್ಯ ಪ್ರದರ್ಶನ ಜರುಗಿದವು. ಅಲ್ಲದೇ, ಯೆನ್, ಪನ್ನೀರ್, ಎರೊಂಬಾ, ಕಾಂಗೌ, ಚಾಂಫುಟ್, ಹೈ ತೊಂಬಾ, ಸಿಂಜೂ, ಮಂಗಲ ಊಟಿ ಸೇರಿದಂತೆ ಮಣಿಪುರಿಯ ಖಾದ್ಯಗಳು ಎಲ್ಲರ ಬಾಯಲ್ಲಿ ನೀರೂರಿಸಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English