ಜಮ್ಮು ಕಾಶ್ಮೀರದಲ್ಲಿ ‌ಉಗ್ರರ ಸದೆಬಡಿದ ಯೋಧನಿಗೆ ಹುಟ್ಟೂರಿನಲ್ಲಿ ಸನ್ಮಾನ!

3:31 PM, Monday, April 2nd, 2018
Share
1 Star2 Stars3 Stars4 Stars5 Stars
(No Ratings Yet)
Loading...

jammu-kashmirಮಂಗಳೂರು: ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾದ ಯೋಧ ಝುಬೈರ್ ಅವರನ್ನು ಸನ್ಮಾನಿಸಲಾಯಿತು.

ಕಡಬ ತಾಲೂಕಿನ ಆತೂರು ಸಮೀಪದ ಬಜತ್ತೂರು ಗ್ರಾಮದ ನೇರೆಂಕಿಯ ಮೇಲೂರು ನಿವಾಸಿ ಸಮೂನ್ ಬ್ಯಾರಿ ಹಾಗೂ ಆಮಿನಮ್ಮ ದಂಪತಿಯ ದ್ವಿತೀಯ ಪುತ್ರ ಝುಬೈರ್ ಎಂ.ನೇರಂಕಿ ರವಿವಾರ ಹುಟ್ಟೂರಿಗೆ ಆಗಮಿಸಿದ್ದರು. ಈ ಸಂದರ್ಭ ಸಾರ್ವಜನಿಕರು ಅವರನ್ನು ಮೆರವಣಿಗೆ ನಡೆಸಿ ಸನ್ಮಾನಿಸಿದರು.

ಕಟ್ಟಡವೊಂದರಲ್ಲಿ ಅವಿತು ಕುಳಿತು ಭಾರತೀಯ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸಿದ್ದ ಉಗ್ರರನ್ನು ಭಾರತದ ಸೈನಿಕರು ಹೊಡೆದುರುಳಿಸಿದ್ದರು. ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಕೆಲ ಉಗ್ರರು ನುಗ್ಗಿ ಅಲ್ಲಿದ್ದ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇಂತಹ ಸನ್ನಿವೇಶದಲ್ಲೂ ಅಪಾಯಕಾರಿ ಹಾಗೂ ಅನಿರೀಕ್ಷಿತ ದಾಳಿಯಿಂದ ಕಂಗೆಡದ ಭಾರತದ ಸಿ.ಆರ್.ಪಿ.ಎಫ್ ಯೋಧರು ಎಲ್ಲಾ ದಾಳಿಗಳನ್ನು ಎದುರಿಸಿ ಉಗ್ರರಿಗೆ ತಕ್ಕ ಉತ್ತರ ನೀಡುವ ಮೂಲಕ ಭಯೋತ್ಪಾದಕರನ್ನು ಸದೆ ಬಡಿದಿದ್ದರು.

ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆನೇರಂಕಿಯಲ್ಲಿ ಪಡೆದಿದ್ದ ಝುಬೈರ್ ಪ್ರೌಢ ಶಿಕ್ಷಣವನ್ನು ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಮುಗಿಸಿದ್ದರು. ನಂತರ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯು ಹಾಗೂ ಬಿ.ಬಿ.ಎಂ. ವ್ಯಾಸಂಗವನ್ನು ಮುಗಿಸಿ ದೇಶ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡ ಅವರು ಇದೀಗ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ್ದಾರೆ. ಶನಿವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಅವರು ರವಿವಾರ ಊರಿಗೆ ತಲುಪಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English