‘ಖಾದರ್ ಪ್ರವೇಶಿಸಿದ ದೇವಾಲಯಕ್ಕೆ ಮತ್ತೊಮ್ಮೆ ಬ್ರಹ್ಮ ಕಲಶ ಆಗಲೇಬೇಕು’

10:58 AM, Friday, April 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

kaladkaಮಂಗಳೂರು: ‘ಸಚಿವ ಯು.ಟಿ. ಖಾದರ್ ಎಂಬ ಕೊಳಕು ಮನುಷ್ಯ, ಗೋಮಾಂಸ ಭಕ್ಷಣೆ ಮಾಡುವಂತಹ ವ್ಯಕ್ತಿಯನ್ನು ಪವಿತ್ರ ದೇವಾಲಯಕ್ಕೆ ಕರೆಸಿ ಪ್ರಸಾದ ನೀಡುತ್ತಿರುವುದು ಎಷ್ಟು ಸರಿ?’ ಎಂದು ಆರ್‌ಎಸ್‌ಎಸ್ ಮುಖಂದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಕಿಡಿಕಾರಿದ್ದಾರೆ.

ಬಂಟ್ವಾಳದ ಕೈರಂಗಳದಲ್ಲಿರುವ ಅಮೃತ ಧಾರಾ ಗೋಶಾಲೆಯಲ್ಲಿ ನಡೆದ ದನಗಳ್ಳತನವನ್ನು ಖಂಡಿಸಿ, ಗೋವು ಕಳ್ಳರನ್ನು ಬಂಧಿಸುವಂತೆ ಒತ್ತಾಯತಿಸಿ ಬುಧವಾರ ಕೈಗೊಳ್ಳಲಾಗಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಸಚಿವ ಖಾದರ್ ವಿರುದ್ಧ ಹೇಳಿಕೆ ನೀಡಿದ್ದರು. ‘ಖಾದರ್ ಪ್ರವೇಶಿಸಿದ ದೇವಾಲಯದಲ್ಲಿ ಇನ್ನೊಮ್ಮೆ ಬ್ರಹ್ಮ ಕಲಶಾಭಿಷೇಕ ನಡೆಸಬೇಕು’ ಎಂದು ಹೇಳಿದ್ದರು. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡಾ. ಪ್ರಭಾಕರ ಭಟ್ ಅವರು, ‘ಗೋಭಕ್ಷಣೆ ಮಾಡುವ ಖಾದರ್‌ಗೆ ಇಲ್ಲಿದ್ದ ಭೂತ ನೇಮದ ಬೂಳ್ಯ ಕೊಡ್ತಾರೆ. ಮಂಡೆ ಶುದ್ಧವಿಲ್ಲದ ದೈವ ಕಟ್ಟುವ ವ್ಯಕ್ತಿ ಕೊಳಕು ಖಾದರ್‌ಗೆ ಪ್ರಸಾದ ಕೊಡ್ತಾರೆ. ಯಾವ ದೇವಸ್ಥಾನಕ್ಕೆ ಈ ಖಾದರ್ ಬಂದಿದ್ದಾನೋ ಅದಕ್ಕೆ ಮತ್ತೊಂದು ಬ್ರಹ್ಮಕಲಶ ವಿಧಿವಿಧಾನ ನೆರವೇರಲೇ ಬೇಕು’ ಎಂದು ಹೇಳಿಕೆ ನೀಡಿದ್ದರು.

‘ದೇವಸ್ಥಾನಕ್ಕೆ ರಸ್ತೆ ಮಾಡಿದ್ದಾರೆ ಎಂದು ಯು.ಟಿ.ಖಾದರ್ ಅವರನ್ನು ದೇಗುಲದೊಳಗೆ ಕರೆದೊಯ್ಯುತ್ತೀರಿ. ನಾಚಿಗೆಯಾಗುವುದಿಲ್ಲವೇ?. ಅವನೇನು ಅವನ ಅಪ್ಪನ ಹಣದಿಂದ ರಸ್ತೆ ಮಾಡಿಸಿಲ್ಲ. ಜನರ ತೆರಿಗೆಯ ಹಣದಿಂದ ರಸ್ತೆ ನಿರ್ಮಾಣ ಮಾಡಿಸಿದ್ದಾನೆ’ ಎಂದು ಭಟ್ ಆಕ್ರೋಶ ವ್ಯಕ್ತಪಡಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English