ಕಾರವಾರ: ಕಾಂಗ್ರೆಸ್ ಅಭಿವೃದ್ಧಿಯಲ್ಲಿ ನಂಬಿಕೆಯಿಟ್ಟ ಪಕ್ಷ. ಜನರನ್ನು ಒಡೆದು, ದ್ವೇಷ ಹಬ್ಬಿಸಿ ನಾವು ಮತ ಕೇಳಲ್ಲ. ಅಭಿವೃದ್ಧಿ ಮಾಡಿದ ಕಾರ್ಯವನ್ನು ಜನರಿಗೆ ವಿವರಿಸಿ ಮತ ಕೇಳುತ್ತೇವೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಮತ್ತು ರಾಜ್ಯದಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ಕಾರವಾರದಲ್ಲಿ ಸಚಿವ ದೇಶಪಾಂಡೆ ಹೇಳಿದರು. ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿಲ್ಲ. ಮಾರ್ಗರೇಟ್ ಆಳ್ವಾ ಮತ್ತು ನಮ್ಮ ಮಧ್ಯೆ ಒಳ್ಳೆಯ ಬಾಂಧವ್ಯವಿದೆ. ಭೀಮಣ್ಣ ಸಹ ಶಿರಸಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಪಕ್ಷದ ವರಿಷ್ಠರ ಕಮಿಟಿ ಟಿಕೆಟ್ ನೀಡಿಕೆ ಬಗ್ಗೆ ನಿರ್ಣಯಿಸಲಿದೆ.
ಅಭಿವೃದ್ಧಿ ಹೆಸರಲ್ಲಿ ಮತ ಕೇಳುತ್ತೇವೆ. ಜಾತಿ-ಧರ್ಮ-ಮತ ಆಧರಿಸಿ ಮತ ಕೇಳಲ್ಲ. ಕಾಂಗ್ರೆಸ್ ಪಕ್ಷ ಜಾತ್ಯಾತೀತ ಹಿನ್ನೆಲೆಯದ್ದು. ಎಲ್ಲರಿಗೂ ಕಾಂಗ್ರೆಸ್ನಲ್ಲಿ ಸ್ಥಾನ ಇದೆ. ಅಲ್ಪಸಂಖ್ಯಾತರು ಎಲ್ಲೆಲ್ಲಿ ಟಿಕೆಟ್ ಕೇಳಿದ್ದಾರೆ ಎಂಬುದನ್ನು ನೋಡಿ ಪಕ್ಷ ಅಂತಿಮವಾಗಿ ಟಿಕೆಟ್ ನೀಡಲಿದೆ ಎಂದು ಸಚಿವ ದೇಶಪಾಂಡೆ ಹೇಳಿದ್ದಾರೆ.
Click this button or press Ctrl+G to toggle between Kannada and English