ತೌಕ್ತೆ ಚಂಡಮಾರುತ ಅಬ್ಬರಕ್ಕೆ ಸಿಲುಕಿ ಕಾಳಿ ನದಿಯ ಹಿನ್ನೀರಿಲ್ಲಿಕೊಚ್ಚಿ ಹೋದ ವೃದ್ಧ ಬದುಕಿದ್ದು ಹೇಗೆ ಗೊತ್ತಾ ?

Wednesday, May 19th, 2021
Kataray

ಕಾರವಾರ : ಇಲ್ಲೊಬ್ಬ ವ್ಯಕ್ತಿ ಕಾಳಿ ನದಿಯ ಹಿನ್ನೀರಿಲ್ಲಿಕೊಚ್ಚಿ ಹೋಗಿ ಗಿಡ ಹಿಡಿದುಕೊಂಡು ಸತತ ಮೂರು ದಿನ ಸಾವು-ಬದುಕಿನ ಮಧ್ಯೆ ಹೋರಾಡಿ ಸಾವನ್ನೇ ಗೆದ್ದು ಬಂದ  ಘಟನೆ ಕಾರವಾರ ತಾಲೂಕಿನ ಹಣಕೋಣದಲ್ಲಿ ನಡೆದಿದೆ. ಮೇ 16ರಂದು ಜಾನುವಾರನ್ನು ಹುಡುಕಿಕೊಂಡು ಬರುವುದಾಗಿ ಕಟರಾಯ್ ಕೋಠಾರಕರ್ ಎಂಬ ವ್ಯಕ್ತಿ ಹೊರಹೋಗಿದ್ದರು. ಆ ವೇಳೆ ತೌಕ್ತೆ ಚಂಡಮಾರುತ ಅಬ್ಬರಿಸುತ್ತಲೇ ಇತ್ತು. ಅವರೂ ವಾಪಸ್ ಬಾರದಿದ್ದಾಗ ಭಯಗೊಂಡ ಮಗ ಎಲ್ಲೆಡೆ ಹುಡುಕಾಡಿದ್ದಾರೆ. ಗ್ರಾಮಸ್ಥರೊಂದಿಗೆ ಹಳ್ಳ, ಬಾವಿ ಎಲ್ಲೆಡೆ ಹುಡುಕಾಡಿದ್ದು, ಎರಡು ದಿನವಾದರೂ ಪತ್ತೆಯಾಗಿಲಿಲ್ಲ. ಮೂರನೇ ದಿನ ಕಾಳಿ ನದಿಯ ಹಿನ್ನೀರಿನಲ್ಲಿ ಗಿಡವೊಂದನ್ನು […]

ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರ ಬೃಹತ್ ಹೋರಾಟ : ಇಂದು ಕಾರವಾರ ಬಂದ್

Thursday, January 16th, 2020
karwar

ಕಾರವಾರ : ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರು ಮತ್ತಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ದಿನ ರವೀಂದ್ರನಾಥ ಕಡಲತೀರಕ್ಕೆ ಮತ್ತು ಮೀನುಗಾರಿಕೆಗೆ ಹಾನಿಯಾಗಲ್ಲ ಎಂದು ಹೋರಾಟದ ದಿಕ್ಕುತಪ್ಪಿಸುತ್ತಿದ್ದ ಬಂದರು ಇಲಾಖೆ, ಕೊನೆಗೂ ನಿನ್ನೆ ಕಡಲತೀರದ ಮಧ್ಯೆಯೇ ಕಲ್ಲು ಹಾಕಿ ಕಾಮಗಾರಿ ಆರಂಭ ಮಾಡಿದೆ. ಬಂದರು ಇಲಾಖೆಯ ಈ ಧೋರಣೆಯನ್ನು ಖಂಡಿಸಿ ಮೀನುಗಾರರ ಹೋರಾಟ ಇನ್ನಷ್ಟು ಬಲಗೊಳ್ಳುತ್ತಿದೆ. ಕಾರವಾರದ ಮೀನುಗಾರರು ಕಡಲತೀರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹಾಗಾಗಿ ಇಂದು ಕಾರವಾರ ಬಂದ್ ಮಾಡಿದ್ದು ಹೋರಾಟದ ಕಿಚ್ಚು ಇನ್ನಷ್ಟು ಬಲವಾಗಲಿದೆ. […]

ಕೆಎಸ್ಆರ್ ಟಿಸಿ ಬಸ್-ಬೈಕ್ ಅಪಘಾತ : ಬೈಕ್ ಸವಾರರಿಬ್ಬರು ಸಾವು

Wednesday, October 30th, 2019
Karavara

ಕಾರವಾರ : ಕಾರವಾರ ತಾಲೂಕಿನ ಅಮದಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಕಾರವಾರ ಮೂಲದವರಾದ ರಾಜೇಶ್ ಹಾಗೂ ನಾಗೇಂದ್ರ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ತಪಾಸಣೆ ಸಮಯದಲ್ಲಿ ಕಾರವಾರ ರೈಲ್ವೆಯಲ್ಲಿ 6.30 ಕೆಜಿ ಗಾಂಜಾ ಪತ್ತೆ

Thursday, October 3rd, 2019
karavara

ಕಾರವಾರ : ರೈಲ್ವೆಯಲ್ಲಿ ತಪಾಸಣೆ ವೇಳೆಯಲ್ಲಿ ವಾರಸುದಾರರಿಲ್ಲದ ಬ್ಯಾಗ್ ಪರಿಶೀಲನೆ ನಡೆಸಿದಾಗ ಸುಮಾರು 6.30 ಕೆಜಿ ಗಾಂಜಾ ರೈಲ್ವೆ ಪೊಲೀಸರಿಗೆ ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮುಂಬಯಿ ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲು ಕಾರವಾರದ ಶಿರವಾಡ ಬಳಿ ನಿಂತಾಗ ಕರ್ತವ್ಯದಲ್ಲಿದ್ದ ಆರ್ಪಿಎಫ್ ಕಾನ್ಸ್ ಸ್ಟೇಬಲ್ ಸಾಜಿರ್ ಅವರು ಸಾಮಾನ್ಯ ಬೋಗಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸೇನಾ ಬ್ಯಾಗಿನ ಬಣ್ಣದಂಥ ಬ್ಯಾಗೊಂದು ಲಗೇಜ್ ಇಡುವ […]

ಕಾರವಾರ : ಮೀನುಗಾರಿಕಾ ಬೋಟ್ ಮುಳುಗಡೆ; 8 ಮಂದಿ ರಕ್ಷಣೆ

Friday, September 20th, 2019
sri-durga-boat

ಮಂಗಳೂರು : ಎಂಜಿನ್‌ ವೈಫಲ್ಯದಿಂದ ಕಾರವಾರ ಬಂದರಿನ ಬಳಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕಾ ಬೋಟ್‌ ಒಂದನ್ನು ಕರಾವಳಿ ಕಾವಲು ಪಡೆ ರಕ್ಷಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಶ್ರೀ ದುರ್ಗಾ ಎಂಬ ಹೆಸರಿನ ಹಡಗು ಮುಳುಗುವ ಹಂತದಲ್ಲಿದ್ದ ಬಗ್ಗೆ ಕಾರವಾರ ಮೀನುಗಾರಿಕೆ ಇಲಾಖೆಗೆ ಮಾಹಿತಿ ಬಂದಿತ್ತು. ಆ ಕೂಡಲೇ ಆ ಮಾಹಿತಿಯನ್ನು ಕರಾವಳಿ ಕಾವಲು ಪಡೆಗೆ ರವಾನಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಬೋಟ್‌ ಇರುವ ಸ್ಥಳಕ್ಕೆ ತೆರಳಿದ ಕರಾವಳಿ ಕಾವಲು ಪಡೆ ಅದರಲ್ಲಿದ್ದ ಎಂಟು ಮಂದಿಯನ್ನು ರಕ್ಷಿಸಿದ್ದರು. ಇದರೊಂದಿಗೆ […]

ಈಜಲು ತೆರಳಿ ನಾಪತ್ತೆಯಾಗಿದ್ದ ಬಾಲಕನೋರ್ವ ಶವವಾಗಿ ಪತ್ತೆ..!

Tuesday, September 11th, 2018
died

ಕಾರವಾರ: ಸ್ನೇಹಿತರೊಂದಿಗೆ ಈಜಲು ತೆರಳಿ ನಾಪತ್ತೆಯಾಗಿದ್ದ ಬಾಲಕನೋರ್ವ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಕಾರವಾರ ತಾಲೂಕಿನ ಅಮದಳ್ಳಿಯ ಕಪ್ಪೆಹೊಂಡದಲ್ಲಿ ನಡೆದಿದೆ. ಮುದಗಾ ಕಾಲೋನಿಯ ನಿವಾಸಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮೊ ಓದುತ್ತಿದ್ದ ಸಾಗರ ಛತ್ರಪತಿ ಹರಿಕಂತ್ರ (17) ಮೃತಪಟ್ಟ ಬಾಲಕ. ಭಾರತ್ ಬಂದ್ ಹಿನ್ನಲೆಯಲ್ಲಿ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅದರಂತೆ ಸ್ನೇಹಿತರೊಂದಿಗೆ ಹಳ್ಳಕ್ಕೆ ಈಜಲು ತೆರಳಿದ್ದ ಸಾಗರ್ ನೀರಿನಲ್ಲಿ ಮುಳುಗಿ ನಾಪಯತ್ತೆಯಾಗಿದ್ದ. ಆದರೆ ಈತ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವುದರಿಂದ ಹೆದರಿದ ಇತರ ಸ್ನೇಹಿತರು ಯಾರಿಗೂ […]

ಭೂಕುಸಿತ ಹಿನ್ನೆಲೆ: ಮಂಗಳೂರು-ಬೆಂಗಳೂರು ರೈಲು ರದ್ದು

Saturday, September 1st, 2018
rail-track

ಮಂಗಳೂರು: ಸುಬ್ರಹ್ಮಣ್ಯ ರೋಡ್‌- ಸಕಲೇಶಪುರ ರೈಲು ನಿಲ್ದಾಣ ಮಧ್ಯೆ ಭೂಕುಸಿತ ಹಿನ್ನೆಲೆಯಲ್ಲಿ ರೈಲು ನಂ. 16517/16523 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು /ಕಾರವಾರ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಸೆ. 2ರಿಂದ ಸೆ. 4ರ ವರೆಗೆ ಮತ್ತು ಸೆ. 9ರಿಂದ ಸೆ. 11 ರ ವರೆಗೆ ರದ್ದುಪಡಿಸಲಾಗಿದೆ. ರೈಲು ನಂ. 16511/16513 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು / ಕಾರವಾರ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಸೆ. 1ರಿಂದ ಸೆ. 8ರ ವರೆಗೆ ಹಾಗೂ ಸೆ. 12 , ಸೆ.13 ಹಾಗೂ ಸೆ. 14ರಂದು ರದ್ದುಗೊಳಿಸಲಾಗಿದೆ. […]

ಶೀರೂರು ಶ್ರೀ ಬದುಕ್ಕಿದ್ದಾಗ ಏಕೆ ಈ ಆರೋಪ ಮಾಡಿಲ್ಲ: ಸಂತೋಷ ಗುರೂಜಿ

Saturday, August 11th, 2018
santhosh-guruji

ಕಾರವಾರ: ಶೀರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದ ಶ್ರೀಗಳು ಸ್ವಾಮೀಜಿಯೇ ಅಲ್ಲ, ಅವರು ವ್ಯಸನಿಯಾಗಿದ್ದರು ಎನ್ನುವ ಪೇಜಾವರ ಶ್ರೀಗಳ ಹೇಳಿಕೆ ಒಪ್ಪುವುದಿಲ್ಲ. ಒಂದೊಮ್ಮೆ ಅವರು ಹಾಗಿದ್ದಲ್ಲಿ ಬದುಕಿದ್ದಾಗಲೇ ಇಂತಹ ಆರೋಪಗಳು ಯಾಕೆ ಬಂದಿಲ್ಲ ಎಂದು ಬಾರ್ಕೂರು ಮಹಾಸಂಸ್ಥಾನದ ಸಂತೋಷ ಭಾರತಿ ಗುರೂಜಿ ಪ್ರಶ್ನಿಸಿದ್ದಾರೆ. ಅಂಕೋಲಾದ ಬಾಸ್ಗೋಡಿನಲ್ಲಿ ಮಾತನಾಡಿದ ಅವರು, ಲಕ್ಷ್ಮೀವರತೀರ್ಥ ಶ್ರೀಪಾದ ಶ್ರೀ 43 ವರ್ಷಕ್ಕೂ ಅಧಿಕ ಕಾಲ ಶೀರೂರು ಮಠದ ಶ್ರೀಗಳಾಗಿದ್ದು, ಮಠಾಧಿಪತಿಯು ಆಗಿದ್ದಾರೆ. 3 ಪರ್ಯಾಯಗಳನ್ನ ನಡೆಸಿದ್ದಾರೆ. ಅವರು ಬದುಕಿದ್ದಾಗ ಯಾಕೆ ಇವೆಲ್ಲಾ ಆರೋಪ ಬರಲಿಲ್ಲ […]

ರಾಷ್ಟ್ರೀಯ ಹೆದ್ದಾರಿ 66 ರ ಸುರಂಗ ಮಾರ್ಗಗಳ ಕಾಮಗಾರಿಗೆ ಮಳೆ ಅಡ್ಡಿ..!

Friday, July 6th, 2018
highway

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥದಲ್ಲಿ ನಿರ್ಮಿಸಲಾಗುತ್ತಿರುವ ಸುರಂಗ ಮಾರ್ಗಗಗಳ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದ ಮೇಲ್ಭಾಗದ ಝರಿ ನೀರು ಸುರಂಗದೊಳಕ್ಕೆ ನುಗ್ಗುತ್ತಿದ್ದು, ಒಂದು ಮಾರ್ಗದ ಕಾಮಗಾರಿಯೇ ಸ್ಥಗಿತಗೊಂಡಿದೆ. ಕಾರವಾರದ ಜಿಲ್ಲಾಧಿಕಾರಿ ವಸತಿಗೃಹವಿರುವ ಬಾವುಟೆ ಕಟ್ಟೆ ಸಮೀಪದ ಗುಡ್ಡಕ್ಕೆ ಸುರಂಗ ಮಾರ್ಗ ನಿರ್ಮಿಸುವ ಕಾಮಗಾರಿ ಕಳೆದ ಎರಡ್ಮೂರು ವರ್ಷಗಳಿಂದ ಪ್ರಗತಿಯಲ್ಲಿದೆ. ಈ ಬೃಹತ್ ಗುಡ್ಡದ ಅಡಿಯಿಂದ ಚತುಷ್ಪಥ ಹೆದ್ದಾರಿ ಹಾದು ಹೋಗುತ್ತಿದ್ದು, ದ್ವಿಪಥ ವಿಸ್ತೀರ್ಣದ ರಸ್ತೆ ನಿರ್ಮಾಣಕ್ಕಾಗಿ ಅರ್ಧ ಕಿ.ಮೀ. ಉದ್ದದ […]

ಕಾಂಗ್ರೆಸ್‌‌ ಉತ್ತರ ಕನ್ನಡ ಜಿಲ್ಲೆಯ ಆರು ಕ್ಷೇತ್ರದಲ್ಲಿ ಗೆಲ್ಲಲಿದೆ: ಸಚಿವ ದೇಶಪಾಂಡೆ

Friday, April 6th, 2018
deshpandey

ಕಾರವಾರ: ಕಾಂಗ್ರೆಸ್ ಅಭಿವೃದ್ಧಿಯಲ್ಲಿ ನಂಬಿಕೆಯಿಟ್ಟ ಪಕ್ಷ. ಜನರನ್ನು ಒಡೆದು, ದ್ವೇಷ ಹಬ್ಬಿಸಿ ನಾವು ಮತ ಕೇಳಲ್ಲ. ಅಭಿವೃದ್ಧಿ ಮಾಡಿದ ಕಾರ್ಯವನ್ನು ಜನರಿಗೆ ವಿವರಿಸಿ ಮತ ಕೇಳುತ್ತೇವೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಮತ್ತು ರಾಜ್ಯದಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ಕಾರವಾರದಲ್ಲಿ ಸಚಿವ ದೇಶಪಾಂಡೆ ಹೇಳಿದರು. ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿಲ್ಲ. ಮಾರ್ಗರೇಟ್ ಆಳ್ವಾ ಮತ್ತು ನಮ್ಮ ಮಧ್ಯೆ ಒಳ್ಳೆಯ ಬಾಂಧವ್ಯವಿದೆ. ಭೀಮಣ್ಣ ಸಹ ಶಿರಸಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಪಕ್ಷದ ವರಿಷ್ಠರ […]