ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ರಾಘವೇಶ್ವರ ಭಾರತೀ ಸ್ವಾಮೀಜಿ ಭೇಟಿ

10:16 AM, Saturday, April 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

prabhakar-kaladkaಮಂಗಳೂರು: ಗೋಹಂತಕರ ಬಂಧನಕ್ಕೆ ಆಗ್ರಹಿಸಿ ಸಹಕಾರಿ ಧುರೀಣ ಟಿ.ಜಿ.ರಾಜಾರಾಮ್ ಭಟ್ ನೇತೃತ್ವದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸ್ಥಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸಚಿವ ಯು.ಟಿ. ಖಾದರ್ ವಿರುದ್ಧ ವಾಗ್ದಾಳಿ ನಡೆಸಿದರು. ಮೊಗಲರು, ಬ್ರಿಟಿಷರಿಗಿಂತ ಕೆಟ್ಟದಾಗಿ ಅಧಿಕಾರಶಾಹಿಗಳು ದೇಶದಲ್ಲಿ ಬಂದಿದ್ದಾರೆ. ಇದು ವೈಚಾರಿಕ ಸಂಘರ್ಷ, ಹೋರಾಟ ಕೊನೆವರೆಗೂ ನಡೀಬೇಕಿದೆ ಪ್ರತಿಭಟನೆ, ಸಭೆಗಳು ನಡೆದಿರಬಹುದು. ಈಗ ನಡೆಯುತ್ತಿರುವ ಹೋರಾಟ ವೋಟಿನ ರಾಜಕಾರಣವಲ್ಲ, ನ್ಯಾಯ, ಸತ್ಯ ಜೀವನ ಮೌಲ್ಯಕ್ಕಾಗಿ ನಡೆಯುವ ಹೋರಾಟವಾಗಿದೆ ಎಂದರು.

ಧರ್ಮ ವಿರೋಧಿ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಬೇಕಾಗಿದೆ. ಖಾದರ್ ತೆರಳಿದ ದೇವಾಲಯಕ್ಕೆ ನೂರಕ್ಕೆ ನೂರು ಬ್ರಹ್ಮಕಲಶ ಆಗಲೇಬೇಕು. ಕರು ಹಿಡಿದು ಫೋಟೋ ಕ್ಲಿಕ್ಕಿಸುವ ಖಾದರ್ ಹೊಟ್ಟೆಗೆ ಯಾವ ಕರುವಿನ ಕರುಳು ಹೋಗುತ್ತದೋ ಎಂದರು.

ಈ ಸಂದರ್ಭದಲ್ಲಿ ಬಂಟ್ವಾಳ ರಾಜೇಶ್ ನಾಯಕ್ ಉಳೇಪಾಡಿ, ಸಂತೋಷ್ ರೈ ಬೋಳಿಯಾರ್ , ವಿ.ಹಿಂ.ಪ. ಮುಖಂಡ ಶರಣ್ ಪಂಪ್ ವೆಲ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English