ಸರಕಾರಿ ಶಾಲೆ ಉಳಿಸಿ ಅಭಿಯಾನದ ರಥಯಾತ್ರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಚಾಲನೆ

Thursday, September 6th, 2018
Govt-school

ಬಂಟ್ವಾಳ :  ಸೆ. 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸರಕಾರಿ ಶಾಲೆ ಉಳಿಸಿ ಅಭಿಯಾನದ ಕಾಲ್ನಡಿಗೆ ಜಾಥಕ್ಕೆ ಪೂರ್ವಭಾವಿಯಾಗಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ರಾಜ್ಯದ್ಯಂತ ಸಂಚರಿಸಲಿರುವ ರಥಯಾತ್ರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಬಂಟ್ವಾಳ ಬಡ್ಡಕಟ್ಟೆಯ ಹನುಮಾನ್ ದೇವಸ್ಥಾನದ ಬಳಿ ಬುಧವಾರ ಚಾಲನೆ ನೀಡಿದರು. ಕರೆಂಕಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರಂಭಗೊಂಡ ರಥಯಾತ್ರೆಗೆ ಬಡ್ಡಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಸಾಥ್ ನೀಡಿ ಬಂಟ್ವಾಳ ಪೇಟೆ ಮೂಲಕ ಬೈಪಾಸ್ ವರೆಗೆ […]

ರಾಜೇಶ್ ನಾಯಕ್ ಬಂಟ್ವಾಳ ಕ್ಷೇತ್ರದಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ವತಿಯಿಂದ ವಿಜಯೋತ್ಸವ..!

Saturday, June 2nd, 2018
Rajesh-nayak

ಬಂಟ್ವಾಳ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರದಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಬಿ.ಸಿ.ರೋಡು-ಕೈಕಂಬದಿಂದ ಬಿ.ಸಿ.ರೋಡು, ಗಾಣದಪಡ್ಪು, ಬಂಟ್ವಾಳ ನೆರೆವಿಮೋಚನಾ ರಸ್ತೆ, ಬಂಟ್ವಾಳ ಪೇಟೆ,ಬಡ್ಡಕಟ್ಟೆ, ಜಕ್ರಿಬೆಟ್ಟು ಮೂಲಕ ಬೈಪಾಸ್ ರಾಮನಗರ ಜಂಕ್ಷನ್‌ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶಿಲ್ಪ ಗೊಂಬೆ ಕುಣಿತ, ಚೆಂಡೆ, ಡಿಜೆ ಸೆಟ್ ಆಕರ್ಷಣೀಯವಾಗಿತ್ತು.

ಮೃತ ಗಣೇಶ್ ಕುಟುಂಬವರ್ಗಕ್ಕೆ ಶಾಸಕ ರಾಜೇಶ್ ನಾಯಕ್ ಸಾಂತ್ವನ

Friday, May 25th, 2018
rajesh-naik

ಸುಳ್ಯ: ಇತ್ತೀಚೆಗೆ ಸುಳ್ಯದಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ಬಂಟ್ವಾಳ ತಾಲೂಕಿನ ಸುವರ್ಣನಾಡಿನ ಗಣೇಶ್ ಮುಗುಳಿಯ ಎಂಬವರು ಮೃತಪಟ್ಟಿದ್ದರು. ಅವರ ಮನೆಗೆ ಬಂಟ್ವಾಳದ ಶಾಸಕರಾದ ರಾಜೇಶ್ ನಾೈಕ್ ಉಳಿಪ್ಪಾಡಿಯವರು ಭೇಟಿ ನೀಡಿ, ಕುಟುಂಬವರ್ಗಕ್ಕೆ ಸಾಂತ್ವಾನ ಹೇಳಿ ಮೆಸ್ಕಾಂ ಅಧಿಕಾರಿಗಳಿಗೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸಂಗಬೆಟ್ಟುವಿನ ಮಾಜಿ ತಾ.ಪಂ ಸದಸ್ಯರಾದ ಪ್ರಭಾಕರ ಪ್ರಭು, ಬಿಜೆಪಿ ರೈತಮೋರ್ಚಾದ ನಂದರಾಮ ರೈ,ಪಂಜಿಕಲ್ಲು ಗ್ರಾ.ಪಂ ಉಪಾಧ್ಯಕ್ಷರಾದ ಲಕ್ಷ್ಮಣ್ ಪಂಜಿಕಲ್ಲು, ಸದಸ್ಯರಾದ ಬಾಲಕಕೃಷ್ಣ ಪೂಜಾರಿ, ಕೃಷ್ಣಪ್ಪ ಪೂಜಾರಿ, ಸುರೇಶ್ […]

ಬಂಟ್ವಾಳದಲ್ಲಿ ರಾಜೇಶ್ ನಾಯಕ್ ನಾಮಪತ್ರ ಸಲ್ಲಿಕೆ

Friday, April 20th, 2018
rajesh-nayak

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಇಂದು ಬೆಳಗ್ಗೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲು, ಕ್ಯಾ. ಗಣೇಶ್ ಕಾರ್ಣಿಕ್, ಸುಲೋಚನಾ ಜಿ.ಕೆ.ಭಟ್, ಜಿ.ಆನಂದ, ಸುಗುನಾ ಕಿಣಿ, ಮೋನಪ್ಪ ಭಂಡಾರಿ, ಪದ್ಮನಾಭ ಕೊಟ್ಟಾರಿ, ಜಿತೇಂದ್ರ ಕೊಟ್ಟಾರಿ, ತುಂಗಪ್ಪ ಬಂಗೇರ, ಕಮಲಾಕ್ಷಿ ಕೆ.ಪೂಜಾರಿ, ರಾಮ್ದಾಸ್, ದೇವದಾಸ್ ಶೆಟ್ಟಿ, ಮೋನಪ್ಪ ದೇವಸ್ಯ ಉಪಸ್ಥಿತರಿದ್ದರು.

ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ರಾಘವೇಶ್ವರ ಭಾರತೀ ಸ್ವಾಮೀಜಿ ಭೇಟಿ

Saturday, April 7th, 2018
prabhakar-kaladka

ಮಂಗಳೂರು: ಗೋಹಂತಕರ ಬಂಧನಕ್ಕೆ ಆಗ್ರಹಿಸಿ ಸಹಕಾರಿ ಧುರೀಣ ಟಿ.ಜಿ.ರಾಜಾರಾಮ್ ಭಟ್ ನೇತೃತ್ವದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸಚಿವ ಯು.ಟಿ. ಖಾದರ್ ವಿರುದ್ಧ ವಾಗ್ದಾಳಿ ನಡೆಸಿದರು. ಮೊಗಲರು, ಬ್ರಿಟಿಷರಿಗಿಂತ ಕೆಟ್ಟದಾಗಿ ಅಧಿಕಾರಶಾಹಿಗಳು ದೇಶದಲ್ಲಿ ಬಂದಿದ್ದಾರೆ. ಇದು ವೈಚಾರಿಕ ಸಂಘರ್ಷ, ಹೋರಾಟ ಕೊನೆವರೆಗೂ ನಡೀಬೇಕಿದೆ ಪ್ರತಿಭಟನೆ, ಸಭೆಗಳು ನಡೆದಿರಬಹುದು. […]

ಇದು ರಾಮ v/s ಅಲ್ಲಾಹು ನಡುವಿನ ಚುನಾವಣೆ; MLA ಸುನೀಲ್ ಹೇಳಿದ್ದೇನು?

Tuesday, January 23rd, 2018
sunil

ಬಂಟ್ವಾಳ: ಇದು ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಚುನಾವಣೆ. ರಾಮನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸ್ತೀವಾ, ಅಲ್ಲಾನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸ್ತೀವಾ ಎಂಬುದು ತೀರ್ಮಾನವಾಗಬೇಕು…ಇದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆ. ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದ ಬಿಜೆಪಿ ಪರಿವರ್ತನಾ ರಾಲಿಯಲ್ಲಿ ಮಾತನಾಡುತ್ತ ಈ ಹೇಳಿಕೆ ನೀಡಿರುವುದಾಗಿ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಜೇಶ್ ನಾಯಕ್ ರಾಮನಂತೆ, ಕಾಂಗ್ರೆಸ್ ಅಭ್ಯರ್ಥಿ(ರಮಾನಾಥ್ ರೈ)ಅಲ್ಲಾಹು..ಹೀಗಾಗಿ ಕ್ಷೇತ್ರದ ಜನರು […]

ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಕೆಲಸ ಒಳ್ಳೆಯದು : ರಾಜೇಶ್ ನಾಯಕ್

Thursday, August 10th, 2017
Rajesh Naik

ಬಂಟ್ವಾಳ: ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ಛಾಯಾಚಿತ್ರಗಾಹಕರ ಸಂಘ ಕ್ರೀಡೆಯ ಮೂಲಕ ಸಂಸ್ಕೃತಿಯನ್ನು ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿದೆ, ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಕೆಲಸ ಛಾಯಾಚಿತ್ರಗಾಹಕರ ಸಂಘದ ಸದಸ್ಯರಿಂದ ನಡೆಯುತ್ತದೆ ಎಂದರೆ ನಿಜಕ್ಕೂ ಶ್ಲಾಘನೀಯ ಕೆಲಸ ಎಂದು ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹೇಳಿದರು. ಅವರು ಸೌತ್ ಕೆನರಾ ಪೊಟೋಗ್ರಾಫ್‌ರ‍್ಸ್ ಅಸೋಸಿಯೇಶನ್ (ರಿ). ದ.ಕ-ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ವತಿಯಿಂದ ಒಡ್ಡೂರು ಫಾರ್ಮ ಹೌಸ್ ನಲ್ಲಿ ನೆಡದ ತುಳುನಾಡ ಗೊಬ್ಬಲು ಎನ್ನುವ ಗ್ರಾಮೀಣ ಕ್ರೀಡೆಯನ್ನು ತೆಂಗಿನ […]