ಪೊಳಲಿಯಲ್ಲಿ ಕೊನೆ ಚೆಂಡು ಸಮಾಪ್ತಿ- ಇಂದು ರಥೋತ್ಸವದ ಸಂಭ್ರಮ

11:42 AM, Friday, April 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

polaliಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ಚೆಂಡು ಏ.11ರ ಬುಧವಾರ ಸಮಾಪ್ತಿಗೊಂಡಿತು. ಏ 7 ರ ಶನಿವಾರ ಆರಂಭಗೊಂಡ ಚೆಂಡು ಐದು ದಿನವು ಚೆಂಡಿನ ಉತ್ಸವ ಸರಳ ವಿಧಿ ವಿಧಾನಗಳ ಮೂಲಕ ನಡೆಯಿತು. ಇಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಮಹಾರಥೋತ್ಸವ ಹಾಗೂ ಏ ೧೩ ರಂದು ಅವಭೄತ ನಡೆಯಲಿದೆ.

polali-2ಇನ್ನು ಪೊಳಲಿ ದೇವಾಲಯದ ಜೀರ್ಣೋದ್ದಾರ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಕೆಲವೊಂದು ಸೇವೆಗಳನ್ನು ಈ ಬಾರಿ ನಡೆಸಲಾಗಿಲ್ಲ ಅಲ್ಲದೆ ಈ ಬಾರಿ ಸಾಂಕೇತಿಕವಾಗಿ ಮೂರು ಸಲ ಚೆಂಡನ್ನು ಹಾರಿಸಿ ತೆಗೆಯಲಾಯಿತು. ಅನಾದಿ ಕಾಲದ ನಂಬಿಕೆಯಂತೆ ಪೊಳಲಿ ಚೆಂಡಿನ ದಿನ ಊರಿಗೆ ಮಳೆ ಬರುತ್ತದೆ ಎಂಬುದು ನಂಬಿಕೆ. ಅದರಂತೆ ತಾಲೂಕಿನಲ್ಲಿ ಭಾನುವಾರ ಪ್ರಥಮ ಚೆಂಡಿನ ದಿನ ಮಳೆ ಸುರಿದಿದೆ.

polali-3ಕ್ಷೇತ್ರದ ಉತ್ಸವದ ಮೂರ್ತಿಯನ್ನು ಕೇಪಳ ಹೂವಿನ ದಂಡೆಯಿಂದ ಅಲಂಕರಿಸಿ ಬಲಿ ನಡೆಸುತ್ತಾರೆ. ಉಡಿಕೆ ಸುತ್ತಿನ ವೇಳೆ ಹರಕೆಯ ಪುಷ್ಪಪೂಜೆ ನಡೆಯುತ್ತದೆ. ಪ್ರತಿ ಐದು ಹತ್ತು ಹದಿನೈದು , ಇಪ್ಪತ್ತು ಮತ್ತು ಇಪ್ಪತೈದನೇ ದಿವಸದಲ್ಲಿ ಹೂವಿನ ಹಳೆಯ ದಂಡಮಾಲೆ ಕಳಚಿ ಹೊಸ ದಂಡಮಾಲೆಯನ್ನು ಕಟ್ಟಿ ದಂಡಮಾಲೆ ಉತ್ಸವಗಳು ನಡೆಯುತ್ತದೆ

polali-4ಈ ಬಾರಿಯ ಚೆಂಡಾಟಯ ಸಂದರ್ಭ ದೇವಳದ ತಂತ್ರಿ ಸುಬ್ರಹ್ಮಣ್ಯ, ದೇವಳದ ಪ್ರಧಾನ ಅರ್ಚಕ ಮಾಧವ ಭಟ್‌, ನಾರಾಯಣ ಭಟ್‌, ವಿಷ್ಣುಮೂರ್ತಿ ನಟ್ಟೋಜ, ಅಮ್ಮುಂಜೆ ಗುತ್ತು ಡಾ| ಮಂಜಯ್ಯ ಶೆಟ್ಟಿ, ಉಳಿಪಾಡಿಗುತ್ತು ತಾರಾನಾಥ ಆಳ್ವ, ಮೊಗರುಗುತ್ತು ವಸಂತ ಶೆಟ್ಟಿ, ರಮೇಶ್‌ ರಾವ್‌, ಪರ್ದಕಂಡ ವಾಸುದೇವ ಭಟ್‌, ಕೃಷ್ಣ ಕುಮಾರ್‌ ಪೂಂಜ, ಕೃಷ್ಣರಾಜ್‌ ಮಾರ್ಲ, ಶಿವಪ್ರಸಾದ್‌ ಶೆಟ್ಟಿ, ಜೀವರಾಜ್‌ ಶೆಟ್ಟಿ, ಕೃಷ್ಣಪ್ಪ ಸಪಲಿಗ, ಮಟ್ಟಿ ಗಂಗಾಧರ ಜೋಗಿ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English