ಧರ್ಮಜಾಗೃತಿ ಹಾಗೂ ಹಿಂದೂ ಧರ್ಮದ ಮೇಲಿನ ಆಕ್ರಮಣ ಕುರಿತು ಉಪನ್ಯಾಸ

10:04 PM, Saturday, October 8th, 2011
Share
1 Star2 Stars3 Stars4 Stars5 Stars
(3 rating, 7 votes)
Loading...

Hindu Jagarana Vedike

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಕಾಶ್ಮೀರದ ಸದ್ಯದ ಸ್ಥಿತಿ, ಹಿಂದೂ ಧರ್ಮದ ಮೇಲಿನ ಆಕ್ರಮಣಗಳು ಮತ್ತು ಪರಿಹಾರೋಪಾಯಗಳು’ ವಿಷಯದಲ್ಲಿ ನಗರದಲ್ಲಿ ಶುಕ್ರವಾರ ಉಪನ್ಯಾಸ ನಡೆಯಿತು. ಧರ್ಮಜಾಗೃತಿ, ಜಮ್ಮು ಕಾಶ್ಮೀರದ ಭಾರತೀಯರ ರಕ್ಷಣೆ ಹಾಗೂ ಅಲ್ಲಿ ನೆಲೆಸಿರುವ ದೇಶಪ್ರೇಮಿಗಳಿಗೆ ಭದ್ರತೆ ವಿಷಯದಲ್ಲಿ  ಅಶ್ವನಿ ಕುಮಾರ ಚುಂಗೋ ಉಪನ್ಯಾಸ ಹೇಳಿದರು.

ಪಾಕಿಸ್ಥಾನದಿಂದ ಭಯೋತ್ಪಾದಕರು ಮತ್ತು ದಾಳಿಕೋರರು ನುಸುಳಿ ಬರುವುದು ನಿರಂತರ ನಡೆಯುತ್ತಿದೆ. ಈಗಾಗಲೇ ಭದ್ರತಾ ಪಡೆಯ ಅನೇಕ ಯೋಧರು ಈ ಸಂಚಿನ ದಾಳಿಯಿಂದ ಹತರಾಗಿದ್ದಾರೆ. ಜಮ್ಮುಕಾಶ್ಮೀರದಲ್ಲಿ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿ ಗಂಭೀರ ಮತ್ತು ಸೂಕ್ಷ್ಮವಾಗಿದೆ. ಜನಾಂಗೀಯ ದಾಳಿಗೆ ತುತ್ತಾಗಿರುವ ಕಾಶ್ಮೀರ ಪಂಡಿತರು ನಿರಾಶ್ರಿತರಾಗಿದ್ದಾರೆ. ಕೇಂದ್ರ ಸರಕಾರ ಮಾತ್ರ ಈ ಕುರಿತು ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಅಶ್ವನಿ ಕುಮಾರ ಅವರು ಆಕ್ಷೇಪಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ, ಮಂಗಳೂರು ರಣರಾಗಿಣಿ ಮಹಿಳಾ ಶಾಖೆಯ ಪ್ರತಿನಿಧಿ ಲಕ್ಷ್ಮೀ ಪೈ ಅವರು ವಿಶೇಷ ಆಹ್ವಾನಿತರಾಗಿದ್ದರು. ಪ್ರಜ್ಞಾ ರಾವ್‌ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English