ಬಂಟ್ವಾಳ : ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್ ಕಾಂಗ್ರೆಸ್ ಮುಖಂಡ, ಜನಾರ್ಧನ ಪೂಜಾರಿ ಅವರ ಆಶೀರ್ವಾದಕ್ಕಾಗಿ ರಮಾನಾಥ ರೈ , ಕಾಪು ಶಾಸಕ ವಿನುಕುಮಾರ್ ಸೊರಕೆ, ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ, ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಮೊಯಿದ್ದೀನ್ ಬಾವಾ, ಮಂಗಳೂರು ಕ್ಷೇತ್ರದ ಅಭ್ಯರ್ಥಿ ಯು.ಟಿ.ಖಾದರ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಹಾಗೂ ಶನಿವಾರ ಅಭಯಚಂದ್ರ ಜೈನ್ ಅವರ ನಿವಾಸಕ್ಕೆ ತೆರಳಿ ಕಾಲಿಗೆರಗಿ ಬಂದಿದ್ದಾರೆ.
ಕಳೆದ ಐದು ವರ್ಷಗಳಿಂದ ಪೂಜಾರಿಯವರ ಆರೋಗ್ಯ ವಿಚಾರಿಸದ, ಅವರ ಮನೆಗೂ ಪ್ರವೇಶಿಸದ ಈ ನಾಯಕರಿಗೆ ಇದೀಗ ಪೂಜಾರಿಯವರ ನೆನಪು ಅಗಿರುವುದು ಮತ್ತು ಅವರ ಆಶೀರ್ವಾದಕ್ಕೆ ದೌಡಾಯಿಸಿ ಬರುತ್ತಿರುವುದು ಪೂಜಾರಿಯವರ ಅಭಿಮಾನಿ ವಲಯದಿಂದ ಟೀಕೆ ವ್ಯಕ್ತವಾಗಿದೆ. ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸದಂತೆ ಹೊರಹಾಕಿದಾಗ, ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಕಡೆಗಣಿಸಿದಾಗ ಬಾಯ್ಮಚ್ಚಿಕೊಂಡಿದ್ದ ಈ ನಾಯಕರಿಗೆ ಈಗ ದಿಢೀರ್ ಪೂಜಾರಿಯವರ ನೆನಪಾಗಿರುವುದು ಚುನಾವಣಾ ಗಿಮಿಕ್ ಅಥವಾ ಸೋಲಿನ ಭೀತಿಯೇ ಎಂದು ರಾಜಕೀಯವಲಯದಲ್ಲಿಜನ ಹೇಳಿಕೊಳ್ಳುತ್ತಿದ್ದಾರೆ .
ಕಳೆದ ಐದು ವರ್ಷಗಳಿಂದ ಇವರ ನೆನಪಾಗದ ಅವರದೆ ಪಕ್ಷದ ಶಾಸಕರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಜನಾರ್ದನ ಪೂಜಾರಿ ಅವರ ಮೇಲೆ ಇನ್ನಿಲ್ಲದ ಪ್ರೀತಿ ಉಕ್ಕಿ ಬಂದಿದೆ ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರು ಪೂಜಾರಿ ನಿವಾಸಕ್ಕೆ ತೆರಳಿ ಕಾಲಿಗೆರಗಿ ಆಶೀರ್ವಾದ ಪಡೆದ ಬೆನ್ನಲ್ಲೇ ಇತರರು ತೆರಳಿರುವುದು ಸಂಶಯಕ್ಕೆ ಎಡೆ ಮಾಡಿದೆ .
ಇನ್ನು ಒಂದು ವಿಶೇಷವೆಂದರೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮಾಜಿ ಮೇಯರ್ ಆಶ್ರಫ್ ಅವರು ಕೂಡ ತಮ್ಮ ರಾಜಕೀಯ ಗುರು ಪೂಜಾರಿಯವರನ್ನು ಭೇಟಿಯಾಗಿ ಆರ್ಶೀವಾದ ಬೇಡಿದ್ದಾರೆ.
Click this button or press Ctrl+G to toggle between Kannada and English