ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ ಮಧ್ಯೆಯೂ ವರುಣ ಅಬ್ಬರಿಸಿದ್ದಾನೆ. ನಗರದ ಬಹುತೇಕ ಕಡೆ ಮಧ್ಯಾಹ್ನವೇ ಮಳೆ ಸುರಿದಿದೆ. ಮೆಜೆಸ್ಟಿಕ್, ಓಕಳಿಪುರಂ, ಕಾಟನ್ ಪೇಟೆ, ರಾಜಾಜಿನಗರ, ಗಾಯಿತ್ರಿನಗರ, ನವರಂಗ್ ಸುತ್ತಮುತ್ತ ಭಾರೀ ಮಳೆಯಾಗಿದೆ.
ಬಸವೇಶ್ವರ ನಗರ, ಕೈಗಾರಿಕಾ ನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮರ ಬಿದ್ದು ಕಾರೊಂದು ಜಖಂಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ವಾಹನ ದಟ್ಟಣೆ ಉಂಟಾಗಿದೆ.
ಮಳೆಗೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಬೃಹತ್ ಮರವೊಂದು ಧರೆಗುರುಳಿದಿದೆ. ಹಲವೆಡೆ ಮರಗಳು ಬಿದ್ದು ಒಂದು ಕಾರು, ಮೂರು ಬೈಕ್, ಒಂದು ಆಟೋ ಜಖಂಗೊಂಡಿವೆ. ಇನ್ನು ಮೇ ತಿಂಗಳಲ್ಲೂ ಗುಡುಗು ಸಹಿತ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Click this button or press Ctrl+G to toggle between Kannada and English