ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕೊಲೆ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

Tuesday, March 3rd, 2020
azmad

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಶಬ್ಧ ಕೇಳಿ ಬಂದಿದೆ. ಪೊಲೀಸರು ಕೊಲೆ ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ. ಯುನೀಸ್ ಬಟ್ಟಿ ಎಂಬ ಕೊಲೆ ಪ್ರಕರಣದ ಆರೋಪಿಯ ಮೇಲೆ ಪೊಲೀಸರು ಇಂದು ಮುಂಜಾನೆ ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳ ಒಂದು ಗುಂಪು ಎರಡು ದಿನಗಳ ಹಿಂದೆ ಡಿಜೆ ಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಬಟ್ಟಿ ಅಮ್ಜಾದ್ ಎಂಬಾತನನ್ನು ಕೊಲೆ ಮಾಡಿತ್ತು. ಕೊಲೆ ಮಾಡಿದ್ದ ಗ್ಯಾಂಗ್ನ ಲೀಡರ್ ಈ ಯುನೀಸ್ ಎಂಬುದು ಬೆಳಕಿಗೆ ಬಂದಿತ್ತು. ಡಿಜೆ ಹಳ್ಳಿ ಠಾಣಾ […]

ಅಗ್ನಿ ಅವಘಡ : ಮಕ್ಕಳಿಬ್ಬರು ಮೃತ್ಯು; ಪೋಷಕರು ಗಂಭೀರ

Monday, October 21st, 2019
agni-avaghada

ಬೆಂಗಳೂರು : ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿ ಇದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ತಂದೆ-ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯ ಭಕ್ಷಿಗಾರ್ಡನ್‍ನಲ್ಲಿ ನಡೆದಿದೆ. ಮೃತ ದುರ್ದೈವಿ ಮಕ್ಕಳನ್ನು ಕಾವೇರಿ (21) ಶ್ರೀಕಾಂತ್ (13) ಎಂದು ಗುರುತಿಸಲಾಗಿದೆ. ಇವರ ಪೋಷಕರಾದ ಮುರಳಿ ಮತ್ತು ಗೀತಾರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಬಂದು ಪರೀಶಿಲನೆ […]

ಆ್ಯಂಬಿಡೆಂಟ್​ ಮಾದರಿಯಲ್ಲೇ ಮತ್ತೊಂದು ಚೀಟಿಂಗ್​ ಕೇಸ್​!

Friday, December 14th, 2018
banglore

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದಾದರೊಂದಂತೆ ಚೀಟಿಂಗ್ ಪ್ರಕರಣಗಳು ಹೊರ ಬರುತ್ತಲೇ ಇವೆ. ಆ್ಯಂಬಿಡೆಂಟ್ ಪ್ರಕರಣದ ಮಾದರಿಯಲ್ಲಿ ಮತ್ತೊಂದು ಕಂಪನಿ ನೂರಾರು ಜನರಿಗೆ ವಂಚನೆ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಹಣ ಡಬಲ್ ಮಾಡುವುದಾಗಿ ಹಾಗೂ ಸೈಟ್ ಕೊಡಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ ಪ್ರತಿ ಸದಸ್ಯರಿಂದ ಒಂದು ಸಾವಿರ ಸದ್ಯಸತ್ವ ಶುಲ್ಕ ಪಾವತಿಸಿಕೊಂಡು 40 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರೆಗೆ ಹಣವನ್ನು ಠೇವಣಿಯಾಗಿಸಿಕೊಂಡು, ಹಣ ನೀಡದೇ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಜಾಜಿನಗರದ ವಿಶ್ವಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ […]

ಉದ್ಯೋಗ ಕೊಡಿಸುವುದಾಗಿ ನಗರಕ್ಕೆ ಕರೆಸಿ ಪಂಜಾಬ್​ ಯುವಕನ ಕೊಲೆ..!

Saturday, December 8th, 2018
punjab

ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ನಗರಕ್ಕೆ ಕರೆಸಿ ಪಂಜಾಬ್ ಯುವಕನನ್ನು ಕೊಲೆಗೈದ ಆರೋಪಿಗಳ ತನಿಖೆಯನ್ನು ಸಿಐಡಿ ಪೊಲೀಸರು ಚುರುಕುಗೊಳಿಸಿದ್ದು, ತನಿಖೆ ವೇಳೆ ಆರೋಪಿಗಳು ಮತ್ತಷ್ಟು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. 10 ಜನ ಬಂಧಿತ ಆರೋಪಿಗಳು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪಂಜಾಬ್ ಮೂಲದ ಸುರೇಂದ್ರಪಾಲ್ ಎಂಬವರನ್ನು ನಗರಕ್ಕೆ ಕರೆಸಿದ್ದರು. ನಂತರ 20 ಲಕ್ಷ ಹಣ ಕೊಡಿ ಎಂದು ಪೀಡಿಸಿದ್ದರು. ಸುರೇಂದ್ರಪಾಲ್ ಬಳಿ ಹಣ ಇಲ್ಲದ ಕಾರಣ ರಾಮನಗರ ಬಳಿ ಕತ್ತು ಸೀಳಿ ಕೊಲೆ ಮಾಡಿ ಬಿಸಾಕಿದ್ದರು. ಈ ಪ್ರಕರಣದ […]

ಪೊಲೀಸ್​​​ ಇಲಾಖೆಗೆ ಮತ್ತೆ ಸರ್ಜರಿ… 29 ಪಿಎಸ್ಐಗಳ ವರ್ಗಾವಣೆ

Tuesday, December 4th, 2018
police

ಬೆಂಗಳೂರು: ಕರ್ನಾಟಕ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರು 29 ಪಿಎಸ್ಐಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಯಲ್ಲಿ‌ ಕಾರ್ಯನಿರ್ವಹಿಸುತ್ತಿದ್ದ 29 ಪಿಎಸ್ಐಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ವರ್ಗಾವಣೆಗೊಂಡ ಪಿಎಸ್ಐಗಳು ಆದಷ್ಟು‌ ಬೇಗ‌ ತಮಗೆ ನೀಡಿದ ಠಾಣಾ ವ್ಯಾಪ್ತಿಯಲ್ಲಿ ಕೆಲಸ‌ ನಿರ್ವಹಿಸಬೇಕೆಂದು ತಿಳಿಸಲಾಗಿದೆ.

ಸಿಲಿಕಾನ್‌ ಸಿಟಿಯಲ್ಲಿ ಮಧ್ಯಾಹ್ನವೇ ಭಾರೀ ಮಳೆ… ಮರ ಬಿದ್ದು ಕಾರು ಜಖಂ..!

Tuesday, April 24th, 2018
bangaluru

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಬೇಸಿಗೆ ಮಧ್ಯೆಯೂ ವರುಣ ಅಬ್ಬರಿಸಿದ್ದಾನೆ. ನಗರದ ಬಹುತೇಕ ಕಡೆ ಮಧ್ಯಾಹ್ನವೇ ಮಳೆ ಸುರಿದಿದೆ. ಮೆಜೆಸ್ಟಿಕ್, ಓಕಳಿಪುರಂ, ಕಾಟನ್ ಪೇಟೆ, ರಾಜಾಜಿನಗರ, ಗಾಯಿತ್ರಿನಗರ, ನವರಂಗ್ ಸುತ್ತಮುತ್ತ ಭಾರೀ ಮಳೆಯಾಗಿದೆ. ಬಸವೇಶ್ವರ ನಗರ, ಕೈಗಾರಿಕಾ ನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಹಲವೆಡೆ ವಿದ್ಯುತ್‌ ಕಂಬಗಳು ಧರೆಗುರುಳಿವೆ. ಮರ ಬಿದ್ದು ಕಾರೊಂದು ಜಖಂಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ವಾಹನ ದಟ್ಟಣೆ ಉಂಟಾಗಿದೆ. […]

ಸಿಲಿಕಾನ್‌ ಸಿಟಿಯನ್ನು ಕ್ರೈಮ್‌ ಸಿಟಿ ಮಾಡಿರುವುದೇ ಸರ್ಕಾರದ ಸಾಧನೆ: ಅಶೋಕ್‌

Monday, March 26th, 2018
r-ashoka

ಬೆಂಗಳೂರು: ಬೆಂಗಳೂರು ರಕ್ಷಿಸಿ ಎರಡನೇ ಹಂತದ ಪಾದಯಾತ್ರೆಯನ್ನು ಇಂದಿನಿಂದ ಆರಂಭಿಸಿರುವ ಬಿಜೆಪಿ, ಪ್ರತಿ ವಾರ್ಡ್‌ನಲ್ಲಿ ಜಾಥಾ ನಡೆಸುತ್ತಿದೆ. ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರ ನೇತೃತ್ವದಲ್ಲಿ ಇಂದು ಶಾಂತಿನಗರದಿಂದ ಬೆಂಗಳೂರು ರಕ್ಷಿಸಿ ಎರಡನೇ ಹಂತದ ಯಾತ್ರೆ ಅರಂಭವಾಗಿದ್ದು, ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು. ಈ ವೇಳೆ ಮಾತನಾಡಿದ ಆರ್.ಅಶೋಕ್ , ಕಾಂಗ್ರೆಸ್ ಸರ್ಕಾರ ಬೆಂಗಳೂರು ಜನರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಅಪರಾಧಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ದೂರಿದರು. ನಗರದ ಜನರು ನೆಮ್ಮದಿಯಾಗಿ ಬದುಕದಂತಹ […]