ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದಾದರೊಂದಂತೆ ಚೀಟಿಂಗ್ ಪ್ರಕರಣಗಳು ಹೊರ ಬರುತ್ತಲೇ ಇವೆ. ಆ್ಯಂಬಿಡೆಂಟ್ ಪ್ರಕರಣದ ಮಾದರಿಯಲ್ಲಿ ಮತ್ತೊಂದು ಕಂಪನಿ ನೂರಾರು ಜನರಿಗೆ ವಂಚನೆ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.
ಹಣ ಡಬಲ್ ಮಾಡುವುದಾಗಿ ಹಾಗೂ ಸೈಟ್ ಕೊಡಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ ಪ್ರತಿ ಸದಸ್ಯರಿಂದ ಒಂದು ಸಾವಿರ ಸದ್ಯಸತ್ವ ಶುಲ್ಕ ಪಾವತಿಸಿಕೊಂಡು 40 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರೆಗೆ ಹಣವನ್ನು ಠೇವಣಿಯಾಗಿಸಿಕೊಂಡು, ಹಣ ನೀಡದೇ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜಾಜಿನಗರದ ವಿಶ್ವಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಾಧವಗೌಡ, ಉಪಾಧ್ಯಕ್ಷ ಬಸವನಗೌಡ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ವಂಚನೆ ನಡೆಸಿದ್ದು, ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಮಾಧವಗೌಡನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಜಾಮೀನಿನ ಮೇಲೆ ಹೊರಬಂದ ಈತ ಗ್ರಾಹಕರಿಗೆ ಮುಂಗಡವಾಗಿ ಚೆಕ್ ನೀಡಿದ್ದ. ಅದರೆ ಚೆಕ್ ಬೌನ್ಸ್ ಆದ ಕಾರಣ ಗ್ರಾಹಕರು ಮಾಧವಗೌಡನನ್ನು ಪ್ರಶ್ನಿಸಿದರೆ, ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದಾರೆ ಎಂದು ಮೋಸಕ್ಕೊಳಗಾದವರು ದೂರಿದ್ದಾರೆ.
ಈ ಕುರಿತು ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English