ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ನಗರಕ್ಕೆ ಕರೆಸಿ ಪಂಜಾಬ್ ಯುವಕನನ್ನು ಕೊಲೆಗೈದ ಆರೋಪಿಗಳ ತನಿಖೆಯನ್ನು ಸಿಐಡಿ ಪೊಲೀಸರು ಚುರುಕುಗೊಳಿಸಿದ್ದು, ತನಿಖೆ ವೇಳೆ ಆರೋಪಿಗಳು ಮತ್ತಷ್ಟು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ.
10 ಜನ ಬಂಧಿತ ಆರೋಪಿಗಳು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪಂಜಾಬ್ ಮೂಲದ ಸುರೇಂದ್ರಪಾಲ್ ಎಂಬವರನ್ನು ನಗರಕ್ಕೆ ಕರೆಸಿದ್ದರು. ನಂತರ 20 ಲಕ್ಷ ಹಣ ಕೊಡಿ ಎಂದು ಪೀಡಿಸಿದ್ದರು. ಸುರೇಂದ್ರಪಾಲ್ ಬಳಿ ಹಣ ಇಲ್ಲದ ಕಾರಣ ರಾಮನಗರ ಬಳಿ ಕತ್ತು ಸೀಳಿ ಕೊಲೆ ಮಾಡಿ ಬಿಸಾಕಿದ್ದರು. ಈ ಪ್ರಕರಣದ ಬಗ್ಗೆ ಸಿಐಡಿ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಆರೋಪಿಗಳು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ.
ಅಮಾಯಕ ಯುವಕರನ್ನ ಟಾರ್ಗೆಟ್ ಮಾಡಿ ಕೆಲಸದ ಆಮಿಷ ತೋರಿಸಿ ಸಿಲಿಕಾನ್ ಸಿಟಿಗೆ ಕರೆ ತರುತ್ತಿದ್ದರು. ನಂತರ ಪೋಷಕರಿಂದ ಹಣ ತರಿಸಿಕೊಳ್ಳುವಂತೆ ಯುವಕರಿಗೆ ಪೀಡಿಸುತ್ತಿದ್ದರು. ಹಣ ನೀಡದಿದ್ದರೆ ಕೊಲೆಗೈದು ಬೇರೆಡೆ ಬಿಸಾಕುತ್ತಿದ್ದರು. ಇವರ ಟಾರ್ಗೆಟ್ ನಿರುದ್ಯೋಗಿಗಳೇ ಎಂಬ ವಿಚಾರ ತಿಳಿದು ಬಂದಿದೆ.
ಪ್ರಮುಖ ಆರೋಪಿ ಅಬ್ದುಲ್ ಖುರೇಶಿ ಸೇರಿ 10 ಜನ ಆರೋಪಿಗಳಿಂದ ಸಿಐಡಿಯ ಆರ್ಥಿಕ ವಿಭಾಗದ ಪೊಲೀಸರು ಹಲವಾರು ಮಾಹಿತಿ ಕಲೆ ಹಾಕುತ್ತಿದ್ದಾರೆ.
Click this button or press Ctrl+G to toggle between Kannada and English