‘ಕಟಪಾಡಿ ಕಟ್ಟಪ್ಪ’ನ ಆಡಿಯೋ ರಿಲೀಸ್‌ಗೆ ಸುದೀಪ್‌!

1:27 PM, Thursday, April 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

sudeepಮಂಗಳೂರು: ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ ನಿರ್ಮಾಣದ ‘ಕಟಪಾಡಿ ಕಟ್ಟಪ್ಪ’ ಸಿನೆಮಾ ಈಗ ರಿಲೀಸ್‌ನ ಹೊಸ್ತಿಲಲ್ಲಿದೆ. ಇದರ ಪೂರ್ವಭಾವಿಯಾಗಿ ಚಿತ್ರದ ಆಡಿಯೋ ರಿಲೀಸ್‌ ಎ. 29ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ.

ವಿಶೇಷವೆಂದರೆ ಅಭಿನಯ ಚಕ್ರವರ್ತಿ ಸುದೀಪ್‌ ಆಡಿಯೋ ರಿಲೀಸ್‌ ಗಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ. ತುಳು ಸಿನೆಮಾದ ಕಾರ್ಯಕ್ರಮದಲ್ಲಿ ಸುದೀಪ್‌ ಭಾಗವಹಿಸಲು ಒಪ್ಪಿಕೊಂಡಿರುವುದು ಕೋಸ್ಟಲ್‌ವುಡ್‌ನ‌ಲ್ಲಿ ಗರಿ ಮೂಡಿಸಿದಂತಾಗಿದೆ.

ಹಲವಾರು ಸಿನೆಮಾ ಹಾಗೂ ರಾಷ್ಟ್ರೀಯ ಗೌರವ ಪಡೆಯುತ್ತಿರುವ ತುಳು ಸಿನೆಮಾ ರಂಗವನ್ನು ಸ್ಯಾಂಡಲ್‌ವುಡ್‌ ಸಹಿತ ದೇಶದ ಎಲ್ಲ ಮೂಲೆಯಿಂದಲೂ ನೋಡುತ್ತಿರುವ ಸಂದರ್ಭದಲ್ಲಿಯೇ ಸುದೀಪ್‌ ತುಳು ಸಿನೆಮಾದ ಆಡಿಯೋ ರಿಲೀಸ್‌ಗೆ ಆಗಮಿಸಲು ಒಪ್ಪಿರುವುದು ವಿಶೇಷ.

ಅಂದಹಾಗೆ, ಕಟಪಾಡಿ ಕಟ್ಟಪ್ಪ ಸಿನೆಮಾ ಬಗ್ಗೆ ಹೇಳುವುದಾರೆ, ಖ್ಯಾತ ರಂಗಭೂಮಿ ಕಲಾವಿದ ಜೆ.ಪಿ. ತುಮಿನಾಡ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾದಲ್ಲಿ ಹಲವು ಖ್ಯಾತ ನಟರು ಅಭಿನಯಿಸಿದ್ದಾರೆ. ಪ್ರಕಾಶ್‌ ಸಂಗೀತ ಒದಗಿಸಿದ್ದಾರೆ. ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌ ಹಾಗೂ ಬರ್ಕೆಯವರು ಇದರಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English