ನೀವು ಎಲ್ಲೇ ಹೋಗಿ ರೋಮಿಂಗ್ ಪ್ರೀ

4:54 PM, Monday, October 10th, 2011
Share
1 Star2 Stars3 Stars4 Stars5 Stars
(4 rating, 1 votes)
Loading...

Kapil-Sibal

ನವ ದೆಹಲಿ : ರಾಷ್ಟ್ರಾದ್ಯಂತ ಮೊಬೈಲ್‌ ಸೇವೆಯನ್ನು ರೋಮಿಂಗ್‌ನಿಂದ ಮುಕ್ತಗೊಳಿಲು ಕೇಂದ್ರ ಸರಕಾರವು ಹೊಸ ದೂರ ಸಂಪರ್ಕ ನೀತಿಯನ್ನು ಜಾರಿಗೊಳಿಸಲು ಸಜ್ಜಾಗಿದ್ದು, ಈ ಮೂಲಕ ಜನತೆಗೆ ಹೊಸ ಕೊಡುಗೆ ನೀಡಲು ಮುಂದಾಗಿದೆ. ಕೇಂದ್ರದ ಹೊಸ ದೂರ ಸಂಪರ್ಕ ನೀತಿ – 2011 ಮುಂದಿನ ವಾರ ಪ್ರಕಟಗೊಳ್ಳುವ ನಿರೀಕ್ಷೆಯಿದ್ದು, ಬಂಡವಾಳ ಹೂಡಿಕೆಗೆ ಹೊಸ ದೂರ ಸಂಪರ್ಕ ಹಣಕಾಸು ನಿಗಮ ಸ್ಥಾಪನೆ, ಖಾಸಗಿ ದೂರವಾಣಿ ಕಂಪನಿಗಳು ಲೈಸೆನ್ಸ್‌ ಮರಳಿಸಲು ಅವಕಾಶ ಕೊಡುವುದು ಸೇರಿದಂತೆ ಹಲವಾರು ಅಂಶಗಳಿರುವ ದೂರ ಸಂಪರ್ಕ ನೀತಿಯನ್ನು ಕೇಂದ್ರ ದೂರ ಸಂಪರ್ಕ ಸಚಿವ ಕಪಿಲ್‌ ಸಿಬಲ್‌ ಅನಾವರಣಗೊಳಿಸಲಿದ್ದಾರೆ.

ಕೆಲವು ಖಾಸಗಿ ದೂರ ಸಂಪರ್ಕ ಸಂಸ್ಥೆಗಳು 2008 ರಲ್ಲೇ ಲೈಸೆನ್ಸ್‌ ಪಡೆದಿದ್ದರೂ ಬಂಡವಾಳದ ಕೊರತೆಯಿಂದಾಗಿ ಸೇವೆಯನ್ನೇ ಆರಂಭಿಸಲು ಸಾಧ್ಯವಾಗಿಲ್ಲ. ಇಂತಹಾ ಕಂಪನಿಗಳಿಗೆ ದೂರ ಸಂಪರ್ಕ ಹಣಕಾಸು ನಿಗಮದ ಮೂಲಕ ಬಂಡವಾಳ ಒದಗಿಸುವುದಾಗಿ ಸಿಬಲ್‌ ತಿಳಿಸಿದ್ದಾರೆ.ಮೋಬೈಲ್‌ ಪೋರ್ಟಿಬಲಿಟಿ ಸೇವೆಯನ್ನು ಇಡೀ ದೇಶಕ್ಕೆ ವಿಸ್ತರಿಸಲು ಹೊಸ ದೂರ ಸಂಪರ್ಕ ನೀತಿಯಲ್ಲಿ ಉದ್ದೇಶಿಸಲಾಗಿದ್ದು, ಒಂದು ಸೇವಾ ಸಂಸ್ಥೆಯಿಂದ ಇನ್ನೊಂದು ಸೇವಾ ಸಂಸ್ಥೆಗೆ ವರ್ಗಾವಣೆಯಾದ ಗ್ರಾಹಕರಿಗೆ ಎಂಎನ್‌ಪಿ ಸೌಲಭ್ಯ ಮೊದಲಾದ ಅಂಶಗಳೂ ಹೊಸ ನೀತಿಯಲ್ಲಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English