ಫಿಟ್ ಇಂಡಿಯಾ ಪ್ರೀಡಂ ಓಟ 2.೦ಕ್ಕೆ ಉತ್ತಮ ಬೆಂಬಲ

Saturday, October 2nd, 2021
Freedom Run

ಮಂಗಳೂರು : ಕೇಂದ್ರ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮಂಗಳೂರಿನ ನೆಹರು ಯುವ ಕೇಂದ್ರ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ರಾಷ್ಟ್ರೀಯ ಕೆಡೆಟ್ ಕಾಪ್ ಹಾಗೂ ಜಿಲ್ಲಾ ಯುವ ಒಕ್ಕೂಟದ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಫ್ರೀಡಂ ಓಟ 2.0 ಕಾರ್ಯಕ್ರಮವನ್ನು ನಗರದ ಮಂಗಳ ಕ್ರೀಡಾಂಗಣದಲ್ಲಿ ಅ.2ರ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಲೋಕಸಭಾ ಸದಸ್ಯರಾದ ನಳೀನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮಕ್ಕೆ […]

ಕಾರ್ಪೋರೇಟ್ ಕಂಪೆನಿ ಗಳಿಂದ ದೇಶ ಉಳಿಸಿ – ಪ್ರತಿಭಟನಾ ಪ್ರದರ್ಶನ

Monday, August 9th, 2021
cpim

ಮಂಗಳೂರು  : ದೇಶದ ಸಂಪತ್ತನ್ನು ಕಬಳಿಸುತ್ತಿರುವ ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ಹಾಗೂ ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ,CITU ನೇತ್ರತ್ವದಲ್ಲಿ ಸೋಮವಾರ ಕ್ಲಾಕ್ ಟವರ್ ಬಳಿಯಲ್ಲಿ  ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಕ್ವಿಟ್ ಇಂಡಿಯಾ ಚಳುವಳಿಯ ದಿನವಾದ ಇಂದು ದೇಶಾದ್ಯಂತ ರೈತ ಕಾರ್ಮಿಕರು ಜಂಟಿಯಾಗಿ ಹಮ್ಮಿಕೊಂಡ ಕಾರ್ಪೋರೇಟ್ ಕಂಪೆನಿಗಳಿಂದ ದೇಶವನ್ನು ಉಳಿಸಿ ದಿನಾಚರಣೆಯ ಭಾಗವಾಗಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಧಿಕ್ಕರಿಸಿ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು […]

ನಿಗದಿತ ಅವಧಿಯೊಳಗೆ ಜಲಜೀವನ್ ಮಿಷನ್ ಅಭಿಯಾನ ಮುಗಿಸುವಂತೆ ಅಧಿಕಾರಿಗಳಿಗೆ ಬಿಸಿಪಿ ಸೂಚನೆ

Sunday, August 8th, 2021
bc pateel

ಹಾವೇರಿ : ಕೇಂದ್ರ ಸರಕಾರದ  ಮಹತ್ವಾಕಾಂಕ್ಷಿ ಯೋಜನೆಯಾದ “ಜಲಜೀವನ್ ಮಿಷನ್” ಅನ್ನು ನಿಗದಿತ ಅವಧಿಯೊಳಗೆ ಮುಗಿಸುವಂತೆ ಹಾವೇರಿ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನಲ್ಲಿ ರಾಜ್ಯದ ಗ್ರಾಮೀಣ ಭಾಗದ ಪ್ರತಿಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ “ಜಲಜೀವನ್ ಮಿಷನ್ ಯೋಜನೆ”ಗೆ ಕೃಷಿ ಸಚಿವರೂ ಆಗಿರುವ ಹಾವೇರಿ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲರಿಂದು ಹಿರೇಕೆರೂರು ಮತಕ್ಷೇತ್ರದ ರಟ್ಟಿಹಳ್ಳಿ,ಇಂಗಳಗೊಂದಿ ,ಸತ್ತಗಿಹಳದಳಿ, ಶಿರಗಂಬಿ ಗ್ರಾಮಗಳಲ್ಲಿ ಭೂಮಿಪೂಜೆ ನೆರವೇರಿಸಿದರು. ಭೂಮಿ ಪೂಜೆ ನೆರವೇರಿಸಿ ಈ ಸಂದರ್ಭದಲ್ಲಿ ಮಾತನಾಡಿದ […]

ಮುಂದಿನ ವಾರಕ್ಕಾಗಿ ಕರ್ನಾಟಕಕ್ಕೆ ಮತ್ತೆ 4.25 ಲಕ್ಷ ಸೀಸೆ ರೆಮ್ಡೆಸಿವಿರ್ ಹಂಚಿಕೆ

Saturday, May 22nd, 2021
Sadananda Gowda

ಬೆಂಗಳೂರು: ದೇಶದ ವಿವಿಧ ಭಾಗಗಳಿಂದ ಒಟ್ಟು 8,848 ಕಂಪ್ಪುಶಿಲೀಂಧ್ರ (Mucormycosis/Black Fungus) ಪ್ರಕರಣಗಳು ವರದಿಯಾಗಿದ್ದು ಕೇಂದ್ರ ಸರಕಾರವು ಇಂದು ಬೇರೆಬೇರೆ ರಾಜ್ಯಗಳಿಗೆ ಒಟ್ಟು 23,680 ಸೀಸೆ ಅ್ಯಾಂಫೋಟೆರಿಸಿನ್-ಬಿ (Amphotericin-B) ಔಷಧವನ್ನು ಹಂಚಿಕೆ ಮಾಡಿದೆ. ಸುಮಾರು 500 ಕಪ್ಪುಶಿಲೀಂಧ್ರ ಪ್ರಕರಣರಣಗಳಿರುವ ಕರ್ನಾಟಕಕ್ಕೆ1270 ಸೀಸೆ ಅ್ಯಾಂಫೋಟೆರಿಸಿನ್-ಬಿ ಒದಗಿಸಲಾಗಿದೆ. ಈ ಹಿಂದೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ಹಂಚಿಕೆ ಮೂಲಕ ಮೂರು ಕಂತಿನಲ್ಲಿ 1660 ಸೀಸೆ ಅ್ಯಾಂಫೋಟೆರಿಸಿನ್-ಬಿ ಒದಗಿಸಲಾಗಿತ್ತು. ಇಂದು ಇಲ್ಲಿ ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿರುವ ಕೇಂದ್ರ ರಾಸಾಯನಿಕ ಮತ್ತು […]

ಬಜೆಟ್ನಲ್ಲಿ ಕೊರೋನಾದ ಹೆಸರಲ್ಲಿ ಜನರಿಂದಲೇ ಲೂಟುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಿದೆ : ಯು.ಟಿ. ಖಾದರ್

Wednesday, February 10th, 2021
ut-khader

ಮಂಗಳೂರು : ಕೇಂದ್ರ ಸರಕಾರ ಮಂಡನೆ ಮಾಡಿರುವ ಬಜೆಟ್ನಲ್ಲಿ ಯುವ ಜನತೆಗೆ ಉದ್ಯೋಗ ಕಲ್ಪಿಸುವ ಯಾವುದೇ ಯೋಜನೆಗಳಿಲ್ಲ. ಪ್ರಕೃತಿ ವಿಕೋಪಕ್ಕೆ ಯಾವುದೇ ಪರಿಹಾರ ನೀಡಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಸೇಲ್ ಇಂಡಿಯಾ, ಲೂಟ್ ಇಂಡಿಯಾ ಬಜೆಟ್ ಅನ್ನು ಕೇಂದ್ರ ಸರಕಾರ ಮಂಡಿಸಿದೆ.  ಕೊರೋನಾದ ಹೆಸರಲ್ಲಿ ಜನರಿಗೆ ತೆರಿಗೆ ಹಾಕಿ ಜನರಿಂದಲೇ ಲೂಟುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಜೆಟ್ ನಲ್ಲಿ ಕರ್ನಾಟಕಕ್ಕೆ […]

ದ.ಕ.ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಚೇರಿಗೆ‌ ಮುತ್ತಿಗೆ ಯತ್ನ, ಹಲವರ ಬಂಧನ

Saturday, December 26th, 2020
pfi

ಮಂಗಳೂರು : ಸಿಎಫ್ಐ ಕಾರ್ಯಕರ್ತರು‌ ದ.ಕ.ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಚೇರಿಗೆ‌ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ. ಡಿಸಿ‌ ಕಚೇರಿಯ ‌ಮುಂದೆ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ‌ಘೋಷಣೆ‌ ಕೂಗಿದರು.‌ ಅಲ್ಲದೆ ಡಿಸಿ ಕಚೇರಿ ದಾಟಿ ಸಂಸದರ ಕಚೇರಿಗೆ ಮುತ್ತಿಗೆ‌ ಹಾಕಲು ಯತ್ನಿಸಿದರು. ಈ ವೇಳೆ‌ ಪೊಲೀಸರು ಪ್ರತಿಭಟನಾಕಾರರ ಪೈಕಿ‌ ನಾಯಕರು‌ ಹಾಗೂ ಹಲವು ಕಾರ್ಯಕರ್ತರನ್ನು‌ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ […]

‘ಪೌರತ್ವ ತಿದ್ದುಪಡಿ ಮಸೂದೆ’ : ಕೇಂದ್ರ ಸರಕಾರಕ್ಕೆ ಧನ್ಯವಾದ ಸಲ್ಲಿಸಿದ ಹಿಂದೂ ಜನಜಾಗೃತಿ ಸಮಿತಿ

Friday, December 13th, 2019
CAB

ಮಂಗಳೂರು : ‘ಪೌರತ್ವ ತಿದ್ದುಪಡಿ ಮಸೂದೆ’ಗೆ ಅನುಮೋದನೆ ನೀಡಿದ ಕೇಂದ್ರ ಸರಕಾರಕ್ಕೆ ಧನ್ಯವಾದಗಳು. ವಿದೇಶದಲ್ಲಿಯ ಹಿಂದೂ ನಿರಾಶ್ರಿತರ ಸಮಸ್ಯೆಗೆ ಪರಿಹಾರ ಸಿಕ್ಕಿತು. ಇನ್ನೂ ನುಸುಳುಖೋರರನ್ನು ಹೊರದಬ್ಬಿ ಜಮ್ಮು-ಕಾಶ್ಮೀರದಿಂದ ಕಲಂ 370 ತೆಗೆದರು. ಅಸ್ಸಾಂನಲ್ಲಿ ‘ರಾಷ್ಟ್ರೀಯ ಪೌರತ್ವ ನೊಂದಣಿ’ ಜಾರಿಗೆ ತಂದು ಅದು ಇನ್ನು ದೇಶದಾದ್ಯಂತ ಜಾರಿಗೆ ತರುವ ಘೋಷಣೆಯನ್ನು ಮಾಡಿ ಸಮಸ್ತ ಹಿಂದೂಗಳ ಮೇಲೆ ವರ್ಷಾನುಗಟ್ಟಲೆ ಆಗುತ್ತಿದ್ದ ಅನ್ಯಾಯದ ಮೇಲೆ ಪರಿಹಾರವನ್ನು ತೆಗೆಯಲಾಗುತ್ತಿದೆ. ಈಗ ಮೋದಿ ಸರಕಾರವು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನನೊಂದಿಗೆ ಅಕ್ಕಪಕ್ಕದ ಇತರ ದೇಶಗಳಿಂದ ಭಾರತಕ್ಕೆ […]

ಉಡುಪಿ : ಬ್ಯಾಂಕ್‌ಗಳ ವಿಲೀನ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ; ಬ್ಯಾಂಕ್ ನೌಕರರಿಂದ ಮುಷ್ಕರ

Tuesday, October 22nd, 2019
Udupi-bank-mushkara

ಉಡುಪಿ : ಬ್ಯಾಂಕ್‌ಗಳ ವಿಲೀನೀಕರಣಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಮತ್ತು ಬ್ಯಾಂಕ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಮಂಗಳವಾರ ಕಾರ್ಪೊರೇಶನ್ ಬ್ಯಾಂಕ್ ಉಡುಪಿ ವಲಯ ಕಚೇರಿ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಬ್ಯಾಂಕ್‌ಗಳನ್ನು ವಿಲೀನ ಮಾಡುವ ಮೂಲಕ ಬ್ಯಾಂಕ್‌ಗಳನ್ನು ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂದು ಉಡುಪಿ ಕಾರ್ಪೊರೇಶನ್ ಬ್ಯಾಂಕ್ ನೌಕರರ ಸಂಘದ ಉಪಾಧ್ಯಕ್ಷ ರಘುರಾಮಕೃಷ್ಣ ಬಲ್ಲಾಳ್ […]

ಕೇಂದ್ರ ಸರಕಾರವು ಕೂಡಲೇ  ಪೆಟ್ರೋಲಿಯಂ ದರವನ್ನು ಜಿ ಎಸ್ ಟಿ ವ್ಯಾಪ್ತಿಗೆ ತರಬೇಕು :  ದಿಲ್ ರಾಜ್ ಆಳ್ವ 

Saturday, September 8th, 2018
Dilraj-alva

ಮಂಗಳೂರು :  ತೈಲ ದರ ಏರಿಕೆಯ ವಿರುದ್ಧ ಸಪ್ಟೆಂಬರ್ 10 ರಂದು ನಡೆಯಲಿರುವ ಭಾರತ್ ಬಂದ್ ಮುಷ್ಕರಕ್ಕೆ ನಮ್ಮ ಬಸ್ಸು ಮಾಲಕರ ಸಂಘದ ನೈತಿಕ ಬೆಂಬಲವಿರುವುದು, ಸಂಚಾರಕ್ಕೆ ಅಡಚಣೆ ಉಂಟಾದರೆ ಬಸ್ಸು ಸಂಚಾರಕ್ಕೂ ಅಡಚಣೆಯಾಗಬಹುದು ಎಂದು ದ.ಕ.ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಹೇಳಿದ್ದಾರೆ. ಡೀಸಲ್ ದರ ಏರಿಕೆಯು ಇತಿಹಾಸದ ಗರಿಷ್ಠ ಮಟ್ಟಕ್ಕೆ ಏರಿದ್ದು, ಈ ನಿರಂತರ ಡೀಸಲ್ ದರ ಏರಿಕೆಯು ಬಸ್ಸು ಮಾಲಕರಿಗೆ ಮಾರಕವಾಗಿ ಪರಿಣಮಿಸಿದ್ದು, ಬಸ್ಸು ಸಂಚಾರವೇ ನಡೆಸುವುದು ಅಸಾಧ್ಯವಾಗಿದೆ. ಈಗಾಗಲೇ […]

ರಾಜ್ಯ ಸರಕಾರಿ ನೌಕರರ ಸಂಘದಿಂದ ಧರಣಿ

Thursday, January 18th, 2018
nps-hakku

ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘದ ದ.ಕ. ಜಿಲ್ಲಾ ಸಮಿತಿಯು ಗುರುವಾರ ದ.ಕ‌. ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತು. ಕೇಂದ್ರ ಸರಕಾರವು 2004ರಲ್ಲಿ ಜಾರಿಗೊಳಿಸಿರುವ ಎನ್ ಪಿ ಎಸ್ ಯೋಜನೆಯಿಂದ ಸರಕಾರಿ ನೌಕರರು ಅತಂತ್ರರಾಗಿದ್ದಾರೆ. ಹಾಗಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಸಂಘದ ಮುಖಂಡರಾದ ಪ್ರಕಾಶ್ ನಾಯಕ್, ಜಯರಾಮ ಪೂಜಾರಿ, ರೀಟಾ ಡೇಸಾ, ಶಿವಶಂಕರ್ ಭಟ್, ಅಕ್ಷಯ್ ಭಂಡಾರ್ಕರ್, ಪಿ.ಕೆ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.