ಮಂಗಳೂರು : ತೈಲ ದರ ಏರಿಕೆಯ ವಿರುದ್ಧ ಸಪ್ಟೆಂಬರ್ 10 ರಂದು ನಡೆಯಲಿರುವ ಭಾರತ್ ಬಂದ್ ಮುಷ್ಕರಕ್ಕೆ ನಮ್ಮ ಬಸ್ಸು ಮಾಲಕರ ಸಂಘದ ನೈತಿಕ ಬೆಂಬಲವಿರುವುದು, ಸಂಚಾರಕ್ಕೆ ಅಡಚಣೆ ಉಂಟಾದರೆ ಬಸ್ಸು ಸಂಚಾರಕ್ಕೂ ಅಡಚಣೆಯಾಗಬಹುದು ಎಂದು ದ.ಕ.ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಹೇಳಿದ್ದಾರೆ.
ಡೀಸಲ್ ದರ ಏರಿಕೆಯು ಇತಿಹಾಸದ ಗರಿಷ್ಠ ಮಟ್ಟಕ್ಕೆ ಏರಿದ್ದು, ಈ ನಿರಂತರ ಡೀಸಲ್ ದರ ಏರಿಕೆಯು ಬಸ್ಸು ಮಾಲಕರಿಗೆ ಮಾರಕವಾಗಿ ಪರಿಣಮಿಸಿದ್ದು, ಬಸ್ಸು ಸಂಚಾರವೇ ನಡೆಸುವುದು ಅಸಾಧ್ಯವಾಗಿದೆ. ಈಗಾಗಲೇ ಬಸ್ಸು ನಿರ್ವಹಣ ವೆಚ್ಚವು ಗಣನೀಯವಾಗಿ ಏರಿಕೆಯಾಗಿದ್ದು ಇದರಿಂದ ಕಂಗಾಲಾಗಿರುವ ಬಸ್ಸು ಮಾಲಕರು ಈ ನಿರಂತರ ಡೀಸಲ್ ದರ ಏರಿಕೆಯಿಂದ ತಮ್ಮ ಉದ್ಯಮವನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.
ಇದು ಸಾರ್ವಜನಿಕ ಜೀವನದ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ. ಈ ಬೃಹತ್ತಾದ ಮತ್ತು ನಿರಂತರ ತೈಲ ಬೆಲೆ ಏರಿಕೆಯನ್ನು ದ.ಕ ಬಸ್ಸು ಮಾಲಕರ ಸಂಘವು ತೀವ್ರವಾಗಿ ಖಂಡಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕೂಡಲೆ ಪೆಟ್ರೋಲಿಯಂ ದರವನ್ನು ಜಿ ಎಸ್ ಟಿ ವ್ಯಾಪ್ತಿಗೆ ತರಬೇಕೆಂದು ಸಂಘವು ಒತಾಯಿಸುತ್ತದೆ.
Click this button or press Ctrl+G to toggle between Kannada and English