‘ಪೌರತ್ವ ತಿದ್ದುಪಡಿ ಮಸೂದೆ’ : ಕೇಂದ್ರ ಸರಕಾರಕ್ಕೆ ಧನ್ಯವಾದ ಸಲ್ಲಿಸಿದ ಹಿಂದೂ ಜನಜಾಗೃತಿ ಸಮಿತಿ

2:01 PM, Friday, December 13th, 2019
Share
1 Star2 Stars3 Stars4 Stars5 Stars
(No Ratings Yet)
Loading...

CAB

ಮಂಗಳೂರು : ‘ಪೌರತ್ವ ತಿದ್ದುಪಡಿ ಮಸೂದೆ’ಗೆ ಅನುಮೋದನೆ ನೀಡಿದ ಕೇಂದ್ರ ಸರಕಾರಕ್ಕೆ ಧನ್ಯವಾದಗಳು. ವಿದೇಶದಲ್ಲಿಯ ಹಿಂದೂ ನಿರಾಶ್ರಿತರ ಸಮಸ್ಯೆಗೆ ಪರಿಹಾರ ಸಿಕ್ಕಿತು.

ಇನ್ನೂ ನುಸುಳುಖೋರರನ್ನು ಹೊರದಬ್ಬಿ ಜಮ್ಮು-ಕಾಶ್ಮೀರದಿಂದ ಕಲಂ 370 ತೆಗೆದರು. ಅಸ್ಸಾಂನಲ್ಲಿ ‘ರಾಷ್ಟ್ರೀಯ ಪೌರತ್ವ ನೊಂದಣಿ’ ಜಾರಿಗೆ ತಂದು ಅದು ಇನ್ನು ದೇಶದಾದ್ಯಂತ ಜಾರಿಗೆ ತರುವ ಘೋಷಣೆಯನ್ನು ಮಾಡಿ ಸಮಸ್ತ ಹಿಂದೂಗಳ ಮೇಲೆ ವರ್ಷಾನುಗಟ್ಟಲೆ ಆಗುತ್ತಿದ್ದ ಅನ್ಯಾಯದ ಮೇಲೆ ಪರಿಹಾರವನ್ನು ತೆಗೆಯಲಾಗುತ್ತಿದೆ.

ಈಗ ಮೋದಿ ಸರಕಾರವು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನನೊಂದಿಗೆ ಅಕ್ಕಪಕ್ಕದ ಇತರ ದೇಶಗಳಿಂದ ಭಾರತಕ್ಕೆ ಬಂದಿರುವ ಹಿಂದೂ, ಸಿಕ್ಖ್‌ರು, ಬೌದ್ಧರು, ಜೈನರು. ಪಾರಸಿ ಧರ್ಮದ ಶರಣಾರ್ಥಿಗಳಿಗೆ ಭಾರತದ ಪೌರತ್ವವನ್ನು ನೀಡುವ ‘ಪೌರತ್ವ ತಿದ್ದುಪಡಿ ಮಸೂದೆ’ಗೆ ಅನುಮೋದನೆ ನೀಡಿದೆ.

ಈ ನಿರ್ಣಯವೂ ಅತ್ಯಂತ ಶ್ಲಾಘನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿಯು ಈ ನಿರ್ಣಯವನ್ನು ಸ್ವಾಗತಿಸುತ್ತದೆ ಹಾಗೂ ಜಗತ್ತಿನಾದ್ಯಂತ ನಿರಾಶ್ರಿತ ಹಿಂದೂಗಳನ್ನು ಸೇರಿಸಿಕೊಂಡಿದ್ದರಿಂದ ಕೇಂದ್ರ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತದೆ. ಇನ್ನು ವಿದೇಶದಲ್ಲಿರುವ ನಿರಾಶ್ರಿತರ ಸಮಸ್ಯೆ ಬಗೆಹರಿಯಿತು; ಆದರೆ ನಮ್ಮ ದೇಶದಲ್ಲಿರುವ 5ಕೋಟಿಗಿಂತಲೂ ಹೆಚ್ಚು ಬಾಂಗ್ಲಾದೇಶಿ, ಪಾಕಿಸ್ತಾನಿ, ರೊಹಿಂಗ್ಯಾ ಮುಸಲ್ಮಾನ ನುಸುಳುಖೋರರ ಸಮಸ್ಯೆ ಇನ್ನೂ ಬಾಕಿ ಉಳಿದಿದೆ. ಈ ನುಸುಳುಖೋರರಿಂದ ದೇಶದ ಎಲ್ಲ ವ್ಯವಸ್ಥೆಯ ಮೇಲೆ ಹೆಚ್ಚುವರಿ ಭಾರವಾಗುತ್ತಿದ್ದು ದೇಶದಲ್ಲಿಯ ಸುರಕ್ಷೆಯ ದೃಷ್ಟಿಯಿಂದ ಗಂಭೀರವಾದ ಸಮಸ್ಯೆ ನಿರ್ಮಾಣವಾಗಿದೆ. ಆದ್ದರಿಂದ ಈ ನುಸುಳುಕೋರರಿಗೆ ಭಾರತದಿಂದ ಕೂಡಲೇ ಹೊರದಬ್ಬಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಆಗ್ರಹಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯು ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ದೇಶಗಳಲ್ಲಿ ಹಿಂದೂಗಳ ಮೇಲಾಗುವ ದೌರ್ಜನ್ಯಗಳ ಬಗ್ಗೆ ಆಗಾಗ ಧ್ವನಿ ಎತ್ತಿತ್ತು. ಆಗಾಗ ಆಂದೋಲನ ಮಾಡಿ ಅದರ ಬಗ್ಗೆ ಬಹಿರಂಗ ಪಡಿಸಿತ್ತು. ಪ್ರತಿವರ್ಷ ನಡೆಯುವ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ದಲ್ಲಿಯೂ ಇದರ ಬಗ್ಗೆ ಠರಾವನ್ನು ಅನುಮೋದಿಸಿ ಸರಕಾರದ ಬಳಿ ಆಗ್ರಹಿಸಿದೆ. ಇಂದು ಈ ಬೇಡಿಕೆಯನ್ನು ಪೂರ್ಣಗೊಳಿಸಲಾಗಿದೆ. ಈ ನಿರ್ಣಯದಿಂದ ಜಗತ್ತಿನಾದ್ಯಂತ ನಿರಾಶ್ರಿತ ಹಿಂದೂಗಳಿಗೆ ಎಷ್ಟು ಆನಂದವಾಗಿದೆಯೋ ಅಷ್ಟೇ ಆನಂದ ನಮಗೂ ಆಗಿದೆ. ಸಮಿತಿ ಸಹಿತ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ದ ವತಿಯಿಂದ ಮೋದಿ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದೇವೆ, ಎಂದೂ ಶ್ರೀ. ಶಿಂದೆಯವರು ಈ ವೇಳೆ ಹೇಳಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English