ಫಿಟ್ ಇಂಡಿಯಾ ಪ್ರೀಡಂ ಓಟ 2.೦ಕ್ಕೆ ಉತ್ತಮ ಬೆಂಬಲ

7:17 PM, Saturday, October 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Freedom Runಮಂಗಳೂರು : ಕೇಂದ್ರ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮಂಗಳೂರಿನ ನೆಹರು ಯುವ ಕೇಂದ್ರ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ರಾಷ್ಟ್ರೀಯ ಕೆಡೆಟ್ ಕಾಪ್ ಹಾಗೂ ಜಿಲ್ಲಾ ಯುವ ಒಕ್ಕೂಟದ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಫ್ರೀಡಂ ಓಟ 2.0 ಕಾರ್ಯಕ್ರಮವನ್ನು ನಗರದ ಮಂಗಳ ಕ್ರೀಡಾಂಗಣದಲ್ಲಿ ಅ.2ರ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಲೋಕಸಭಾ ಸದಸ್ಯರಾದ ನಳೀನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಫಿಟ್ ಇಂಡಿಯಾ ಫ್ರೀಡಂ ರನ್‌ನ ಪ್ರತಿಜ್ಞಾವಿಧಿ ಬೋಧಿಸಿದರು. ಎನ್‌ಸಿಸಿಯ 18 ಬೇ ಬೆಟಾಲಿಯನ್‌ನ ಕಮಾಂಡಿಂಗ್  ಅಧಿಕಾರಿ ನಿತೀನ್ ಭಿಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಕೆಐಒಸಿಎಲ್‌ನ ರೊನಾಲ್ಡ್, ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜಕರಾದ ಡಾ. ನಾಗರತ್ನ, ಯೆನಪೋಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕಾದ ಡಾ. ಅಶ್ವಿನಿ ಶೆಟ್ಟಿ, ಮಂಗಳೂರಿನ ನೆಹರೂ ಯುವ ಕೇಂದ್ರದ ರಘುವೀರ್ ಸೂಟರ್‌ಪೇಟೆ, ದ.ಕ. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ವೇದಿಕೆಯಲ್ಲಿದ್ದರು.

fit-india

ಫಿಟ್ ಇಂಡಿಯಾ ಫ್ರಿಡಂ ರನ್ 2.0  ಮಂಗಳಾ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಬಲ್ಲಾಳ್‌ಬಾಗ್, ಪಿ.ವಿ.ಎಸ್. ವೃತ್ತ, ನವಭಾರತ ಸರ್ಕಲ್, ಕೆ.ಎಸ್. ರಾವ್ ರೋಡ್, ಹಂಪನಕಟ್ಟೆ ಮೂಲಕ ಸುಮಾರು ೩ ಕಿ.ಮೀ. ಸಾಗಿ ಪುರಭವನದಲ್ಲಿ ಸಮಾಪ್ತಿಗೊಂಡಿತು.

ಎನ್‌ಎಸ್‌ಎಸ್, ಎನ್‌ಸಿಸಿ, ಯುವ ಮಂಡಲದ ಸದಸ್ಯರು, ಕೆಐಒಸಿಎಲ್ ಸಿಬ್ಬಂದಿಗಳು ಸೇರಿದಂತೆ ಓಟದಲ್ಲಿ ಸುಮಾರು ೮೦೦ಕ್ಕೂ ಹೆಚ್ಚು ಯುವಜನರು ಭಾಗವಹಿಸಿದರು.

ಮರಿಯಮ್ ತಂಡ ಪ್ರಾರ್ಥಿಸಿದರು. ಶ್ರೀಮತಿ ಅರ್ಚನಾ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English