ಮುಂದಿನ ವಾರಕ್ಕಾಗಿ ಕರ್ನಾಟಕಕ್ಕೆ ಮತ್ತೆ 4.25 ಲಕ್ಷ ಸೀಸೆ ರೆಮ್ಡೆಸಿವಿರ್ ಹಂಚಿಕೆ

8:46 PM, Saturday, May 22nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Sadananda Gowda ಬೆಂಗಳೂರು: ದೇಶದ ವಿವಿಧ ಭಾಗಗಳಿಂದ ಒಟ್ಟು 8,848 ಕಂಪ್ಪುಶಿಲೀಂಧ್ರ (Mucormycosis/Black Fungus) ಪ್ರಕರಣಗಳು ವರದಿಯಾಗಿದ್ದು ಕೇಂದ್ರ ಸರಕಾರವು ಇಂದು ಬೇರೆಬೇರೆ ರಾಜ್ಯಗಳಿಗೆ ಒಟ್ಟು 23,680 ಸೀಸೆ ಅ್ಯಾಂಫೋಟೆರಿಸಿನ್-ಬಿ (Amphotericin-B) ಔಷಧವನ್ನು ಹಂಚಿಕೆ ಮಾಡಿದೆ. ಸುಮಾರು 500 ಕಪ್ಪುಶಿಲೀಂಧ್ರ ಪ್ರಕರಣರಣಗಳಿರುವ ಕರ್ನಾಟಕಕ್ಕೆ1270 ಸೀಸೆ ಅ್ಯಾಂಫೋಟೆರಿಸಿನ್-ಬಿ ಒದಗಿಸಲಾಗಿದೆ. ಈ ಹಿಂದೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ಹಂಚಿಕೆ ಮೂಲಕ ಮೂರು ಕಂತಿನಲ್ಲಿ 1660 ಸೀಸೆ ಅ್ಯಾಂಫೋಟೆರಿಸಿನ್-ಬಿ ಒದಗಿಸಲಾಗಿತ್ತು.

ಇಂದು ಇಲ್ಲಿ ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು – ದೇಶದಲ್ಲಿ ಸೀಮಿತವಾಗಿ ಲಭ್ಯವಿರುವ ಈ ಔಷಧವನ್ನು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳಿಗೂ ಪ್ರಕರಣಗಳ ಸಂಖ್ಯೆಯ ಆಧಾರದ ಮೇಲೆ ನ್ಯಾಯಯುತವಾಗಿ ಹಂಚಿಕೆ ಮಾಡುತ್ತಿದ್ದು ಬರುವ ದಿನಗಳಲ್ಲಿ ದೇಶಾದ್ಯಂತ ಇದು ವಿಫುಲವಾಗಿ ಲಭ್ಯವಾಗಲಿದೆ – ಎಂದರು.

ಸ್ವದೇಶಿಯವಾಗಿ ಅ್ಯಾಂಫೋಟೆರಿಸಿನ್-ಬಿ ಉತ್ಪಾದನೆ ಹೆಚ್ಚಳಕ್ಕೆ ತ್ವರಿತ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ದೇಶದ ಐದು ಫಾರ್ಮಾ ಕಂಪನಿಗಳು (Bharat Serums & Vaccines Ltd, BDR Pharmaceuticals Ltd, Sun Pharma Ltd, Cipla Ltd & Life Care Innovations) ಇದರ ಉತ್ಪಾದನೆ ಮಾಡುತ್ತಿದ್ದು ಈಗ ಹೊಸದಾಗಿ ಮತ್ತೆ ಐದು ಕಂಪನಿಗಳಿಗೆ (NATCO Pharmaceuticals Hyderabad, Alembic Pharmaceuticals Vadodara, Gufic Biosciences Ltd, Gujarat, Emcure Pharmaceuticals Pune & Lyka Gujarat) ಲೈಸನ್ಸ್ ದೊರಕಿಸಿಕೊಡಲಾಗಿದೆ. ಈ ಸ್ವದೇಶಿ ಕಂಪನಿಗಳು ಮೇ ತಿಂಗಳಲ್ಲಿ 1.63 ಲಕ್ಷ ಸೀಸೆ ಹಾಗೂ ಜೂನ್ ತಿಂಗಳಲ್ಲಿ 2.55 ಸೀಸೆ ಅ್ಯಾಂಫೋಟೆರಿಸಿನ್-ಬಿ ಉತ್ಪಾದನೆ ಮಾಡಲಿವೆ ಎಂದು ಫಾರ್ಮಾ ಇಲಾಖೆಯನ್ನೂ ಹೊಂದಿರುವ ಸದಾನಂದ ಗೌಡ ವಿವರಿಸಿದರು.

ಹಾಗೆಯೇ ವಿದೇಶಗಳಿಂದ ಈ ತಿಂಗಳ ಒಳಗಾಗಿ 3.63 ಲಕ್ಷ ಸೀಸೆ ಅ್ಯಾಂಫೋಟೆರಿಸಿನ್-ಬಿ ಆಮದು ಮಾಡಿಕೊಳ್ಳುತ್ತಿದ್ದೇವೆ (ಬಹುತೇಕ ಮೈಲಾನ್ ಕಂಪನಿ ಮೂಲಕ). ಹೀಗಾಗಿ ದೇಶದಲ್ಲಿ ಈ ತಿಂಗಳು ಒಟ್ಟು 5.26 ಲಕ್ಷ ಸೀಸೆ ಔಷಧ ಲಭ್ಯವಿರಲಿದೆ. ಮುಂದಿನ ತಿಂಗಳು 3.15 ಲಕ್ಷ ಸೀಸೆ ಆಮದು ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಬಿದ್ದರೆ ಇನ್ನು ಹೆಚ್ಚಿಗೆ ಆಮದು ಮಾಡಿಕೊಳ್ಳುತ್ತೇವೆ. ಆಮದು ಮಾಡಿಕೊಳ್ಳುವ ಅ್ಯಾಂಫೋಟೆರಿಸಿನ್-ಬಿ ಹಲವು ಕಂತುಗಳಲ್ಲಿ ಭಾರತ ತಲುಪುತ್ತಿದೆ. ಇಂದು ಕೂಡಾ ಸುಮಾರು 40 ಸಾವಿರ ಸೀಸೆ ಭಾರತ ತಲುಪುವುದೆಂದು ನಿರೀಕ್ಷಿಸಲಾಗಿದೆ. ಅವು ಬರುತ್ತಿದ್ದಂತೆ ವಿವಿಧ ರಾಜ್ಯಗಳ ಅವಶ್ಯಕತೆಗೆ ತಕ್ಕಂತೆ ಹಂಚಲಾಗುತ್ತಿದೆ. ಇದು ನಿರಂತರ ಪ್ರಕ್ರಿಯೆ. ಇನ್ನು ಅ್ಯಾಂಫೋಟೆರಿಸಿನ್-ಬಿ’ಗೆ ಪರ್ಯಾಯ ಔಷಧಗಳೂ ಇವೆ. ಹಾಗಾಗಿ ಕಪ್ಪುಶಿಲೀಂಧ್ರ ರೋಗಕ್ಕೆ ಔಷಧ ಕೊರತೆಯಾಗುತ್ತದೆ ಎಂದು ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಸದಾನಂದ ಗೌಡ ತಿಳಿಸಿದರು.

ಕರ್ನಾಟಕಕ್ಕೆ ಮತ್ತೆ 4.25 ಲಕ್ಷ ಸೀಸೆ ರೆಮ್ಡೆಸಿವಿರ್:

ಬೇರೆ ಬೇರೆ ರಾಜ್ಯಗಳಿಗೆ ಮುಂದಿನ ವಾರದ (ಮೇ 24 – ಮೇ 30) ಬಳಕೆಗಾಗಿ 22.17 ಲಕ್ಷ ಸೀಸೆ ರೆಮ್ಡೆಸಿವಿರ್ ಹಂಚಿಕೆ ಮಾಡಿದ್ದೇವೆ. ಕರ್ನಾಟಕಕ್ಕೆ 4.25 ಲಕ್ಷ ಸೀಸೆ ರೆಮ್ಡೆಸಿವಿರ್ ನಿಗದಿಪಡಿಸಲಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.

ಕೇಂದ್ರವು ರಾಜ್ಯಗಳಿಗೆ ಏಪ್ರಿಲ್ 21ರಿಂದ ಇದುವರೆಗೆ ಒಟ್ಟು 98.8 ಲಕ್ಷ ಸೀಸೆ ರೆಮ್ಡೆಸಿವಿರ್ ಹಂಚಿಕೆ ಮಾಡಿದೆ. ಕರ್ನಾಟಕಕ್ಕೆ ಕಳೆದ ವಾರವೂ 4.25 ಲಕ್ಷ ಸೀಸೆ ರೆಮ್ಡೆಸಿವಿರ್ ಒದಗಿಸಲಾಗಿತ್ತು. ಹೀಗಾಗಿ ರಾಜ್ಯಕ್ಕೆ ಇದುವರಗೆ 14.25 ಲಕ್ಷ ಸೀಸೆ ರೆಮ್ಡೆಸಿವಿರ್ ದೊರೆತಂತಾಗಿದೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English