ಮಂಗಳೂರು: ಮೋದಿಯ ಸುನಾಮಿ ಕರ್ನಾಟಕವನ್ನು ಹಾಳುಗೆಡವಲಿದೆ ಎಂದು ಪಾಂಡಿಚೇರಿ ಸಿಎಂ ನಾರಾಯಣಸ್ವಾಮಿ ಹೇಳಿದರು.
ನಗರದಲ್ಲಿಂದು ಕಾಂಗ್ರೆಸ್ ಪರ ಮತಯಾಚನೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಚುನಾವಣಾ ಭರವಸೆಗಳನ್ನು ಈಡೇರಿಸಿದ್ದಾರೆ. ಬಂಡವಾಳ ಹೂಡಿಕೆಯಲ್ಲಿ ಈ ರಾಜ್ಯ ಮೊದಲ ಸ್ಥಾನದಲ್ಲಿದೆ. ಐದು ವರ್ಷಗಳಿಂದ ಕರ್ನಾಟಕ ರಾಜ್ಯ ಉತ್ತಮ ಪ್ರಗತಿ ದಾಖಲಿಸಿದೆ ಎಂದು ರಾಜ್ಯ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿದ್ರು.
ಇನ್ನು ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ನಾರಾಯಣಸ್ವಾಮಿ, ಮೋದಿ ಸರ್ಕಾರ ರೈತರ ಪರ ಎಂದು ಹೇಳುತ್ತಾರೆ. ಆದರೆ, ಸಾಲ ಮನ್ನಾ ಮಾಡಲು ಅವರಿಗೆ ಇಚ್ಛಾಶಕ್ತಿ ಇಲ್ಲ. ದೇಶದ ಜನರನ್ನು ನಾಲ್ಕು ವರ್ಷದಿಂದ ಮೋದಿ ಸರ್ಕಾರ ವಂಚಿಸಿದೆ. ಅದು ಯುಪಿಎ ಸರ್ಕಾರಕ್ಕಿಂತಲೂ ಕಳಪೆ ಪ್ರದರ್ಶನ ನೀಡಿದೆ. ಕೋಮು ಗಲಭೆ ಸೃಷ್ಟಿಸುವುದೇ ಬಿಜೆಪಿ ಅಜೆಂಡಾ ಎಂದು ಕಿಡಿ ಕಾರಿದ್ರು.
Click this button or press Ctrl+G to toggle between Kannada and English