ಕಾಪು: ಕಾಪು ಕ್ಷೇತ್ರ ವ್ಯಾಪ್ತಿಯ ಹಿರಿಯಡ್ಕ ಬ್ಲಾಕ್ ನ ಬೈರಂಪಳ್ಳಿ ವ್ಯಾಪ್ತಿಯಲ್ಲಿ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯವರು ಮನೆ ಮನೆಗೆ ತೆರಳಿ ಮತಪ್ರಚಾರ ನಡೆಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಸೊರಕೆ, ಕಳೆದ ಬಾರಿಯ ಶಾಸಕರು 10 ವರ್ಷಗಳಲ್ಲಿ ಅಭಿವೃದ್ಧಿ ಮಾಡಲಾಗದಿದ್ದನ್ನು ನನ್ನ ಅವಧಿಯಲ್ಲಿನ 5 ವರ್ಷಗಳಲ್ಲಿ ಮಾಡಿತೋರಿಸಲಾಗಿದೆ ಎಂದು ಹೇಳಿದರು.
ಬೈರಂಪಳ್ಳಿ ವ್ಯಾಪ್ತಿಯ 6 ಬೂತ್ ಗಳಲ್ಲಿ ಮನೆ ಮನೆಗೆ ತೆರಳಿ ಮತ ಪ್ರಚಾರ ನಡೆಸಲಾಯಿತು.
ಹಿರಿಯಡ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಹೆಗ್ಡೆ,ಕಾಂಗ್ರೆಸ್ ಮುಖಂಡರಾದ ಮಹಾಬಲ ಕುಂದರ್,ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪ್ರಫುಲ್ಲ ಎಸ್ ಕುಲಾಲ್, ರಾಜು ಶೆಟ್ಟಿ ಮೊದಲಾದವರು ಶಾಸಕರಿಗೆ ಸಾಥ್ ನೀಡಿದರು.
Click this button or press Ctrl+G to toggle between Kannada and English