ಮಡಿಕೇರಿ: ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ತಮ್ಮ ಮದುವೆ ನಿರ್ಧಾರವನ್ನು ಮಡಿಕೇರಿಯಲ್ಲಿ ರಿವೀಲ್ ಮಾಡಿದ್ದಾರೆ. ಮದುವೆ ಆಗೊಲ್ವಾ? ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು ಮೂರು ತಿಂಗಳಲ್ಲೇ ಮದುವೆಯಾಗುತ್ತಿದ್ದೇನೆ ಎಂದರು.
ನಗರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಡುಗಿ ಯಾರು ಎಂಬ ಪ್ರಶ್ನೆಗೆ, `ಹೇಳ್ತೇನೆ, ನನ್ನ ಸಂಬಂಧಿಕರಾದ ಮಾಧ್ಯಮದವರನ್ನು ಮದುವೆಗೆ ತಪ್ಪದೇ ಕರೆಯುತ್ತೇನೆ. ಆದರೆ, ಪೆನ್ನು, ಕ್ಯಾಮರಾ ಬದಿಗಿಟ್ಟು ಮದುವೆಗೆ ಬರಬೇಕೆಂದು ಅವರು ಆಹ್ವಾನ ನೀಡಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ ಅವರು, ಅಭ್ಯರ್ಥಿಗಳ ಚುನಾವಣಾ ವೆಚ್ಚವಾಗಿ 28 ಲಕ್ಷ ರೂಪಾಯಿ ನಿಗದಿಪಡಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 28 ಲಕ್ಷ ಖರ್ಚು ಮಾಡಿದ ಅಭ್ಯರ್ಥಿ, ತಾನು ಗೆದ್ದ ಮೇಲೆ ದುಪ್ಪಟ್ಟು ಹಣ ಸಂಪಾದಿಸಲು ಯೋಚಿಸುತ್ತಾನೆ. ಇದೇ ಹಣವನ್ನು ಬಡವರಿಗಾದರೂ ವಿನಿಯೋಗಿಸಬಹುದು ಎಂದು ಅವರು ಹೇಳಿದರು.
ತಾವು ಚುನಾವಣೆಯಲ್ಲಿ ಸೋತರೆ ಅದು ಜನರ ಸೋಲು ಎಂದು ಅವರು ವೆಂಕಟ್ ಹೇಳಿದರು. ತಮಗೆ ಆಯೋಗದಿಂದ ಚಪ್ಪಲಿ ಚಿಹ್ನೆ ಸಿಕ್ಕಿದೆ. ಚುನಾವಣೆಯಲ್ಲಿ ಮತದಾನವನ್ನು ಮಾರಾಟ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಪ್ರತಿಯೊಬ್ಬರೂ ತಮ್ಮ ತಂದೆಯ ಹಣೆ ಮೇಲಿನ ಬೆವರನ್ನು ನೋಡಿರುತ್ತಾರೆ. ಆದರೆ, ಹೆಬ್ಬೆರಳ ತುದಿಯಿಂದ ಹರಿದು ಚಪ್ಪಲಿಯನ್ನು ಸವೆಸುವ ತಂದೆಯ ಪರಿಶ್ರಮದ ಬೆವರನ್ನು ಯಾರೂ ನೋಡಿರುವುದಿಲ್ಲ ಎಂದು ವೆಂಕಟ್ ಭಾವುಕರಾಗಿ ಹೇಳಿದರು.
ತಾನು 16 ವರ್ಷಗಳ ಕಾಲ ಕೊಡಗಿನ ವಿದ್ಯಾಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡಿದ್ದ ಬಗ್ಗೆ ಮತ್ತು ಆ ವೇಳೆ ಸೋಮವಾರಪೇಟೆಯ ಯುವತಿವೋರ್ವಳನ್ನ ಪ್ರೀತಿಸಿದ್ದ ಬಗ್ಗೆ ಹುಚ್ಚ ವೆಂಕಟ್ ಗುಟ್ಟೊಂದನ್ನು ಬಿಚ್ಚಿಟ್ಟರು.
Click this button or press Ctrl+G to toggle between Kannada and English