ಮೇ 7ರಂದು ಮತದಾರರ ಚೀಟಿ ಪಡೆಯಲು ಕೊನೆಯ ದಿನ: ಸಸಿಕಾಂತ್ ಸೆಂಥಿಲ್

10:13 AM, Saturday, May 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

sesikanth-senthilಮಂಗಳೂರು: ಮತದಾರರ ಪಟ್ಟಿಯಲ್ಲಿ ಇರುವ ಮತದಾರರ (ವೋಟರ್ ಸ್ಲಿಫ್) ಚೀಟಿಯನ್ನು ಈ ಬಾರಿ ಪ್ರತಿ ಮತದಾರರ ಮನೆಗೆ ತಲುಪಿಸಲಾ ಗುವುದು ಒಂದು ವೇಳೆ ಈ ಚೀಟಿ ದೊರೆಯದೆ ಇದ್ದವರಿಗಾಗಿ ಮೇ 7ರಂದು ಪ್ರತಿ ಮತಗಟ್ಟೆಯಲ್ಲಿ ಚೀಟಿ ಪಡೆಯಲು ಅವಕಾಶ ಮಾಡಿಕೊಡಲಾಗುವುದು. ಈ ಚೀಟಿಯಲ್ಲಿ ಮತದಾರರ ಭಾವಚಿತ್ರ ಮತಗಟ್ಟೆಯ ವಿವರ ಒಳಗೊಂಡಿರುತ್ತದೆ. ಈ ಚೀಟಿ ಇಲ್ಲದಿದ್ದರೂ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಮತಚಲಾಯಿಸಲು ಯಾವೂದೇ ಸಮಸ್ಯೆಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದ.ಕ ಜಿಲ್ಲೆಯಲ್ಲಿ ಚುನಾವಣಾ ಸಿಬ್ಬಂದಿಗಳ ಪೈಕಿ ಮಹಿಳೆಯರೆ ಅಧಿಕ:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 10,980 ಸಿಬ್ಬಂದಿಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಈ ಪೈಕಿ 6988 ಮಹಿಳಾ ಸಿಬ್ಬಂದಿಗಳಿದ್ದಾರೆ,ಉಳಿದಂತೆ 3992 ಪುರಷ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಂಚೆ ಮತಪತ್ರಕ್ಕೆ ಅರ್ಜಿ ಸಲ್ಲಿ ಸಲು ಮೇ 8 ಕೊನೆಯ ದಿನ:- ಚುನಾವಣೆಯಲ್ಲಿ ಕರ್ತವ್ಯ ನಿರತ ಮತಗಟ್ಟೆ ಅಧಿಕಾರಿ,ಪೊಲೀಸ್ ಸಿಬ್ಬಂದಿ ಮತ್ತು ವಾಹನ ಚಾಲಕರಿಗೆ ಮತಚಲಾಯಿಸಲು ಆಯಾ ಚುನಾವಣಾಧಿಕಾರಿಗಳಿಂದ ನಮೂನೆ 12ನ್ನು ಪಡೆದು ಅರ್ಜಿಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಚುನಾವಣೆಗೆ ಸಂಬಂಧಿಸಿದಂತೆ 182 ಪ್ರಕರಣಗಳು ದಾಖಲಾಗಿದ್ದು 177 ಅರ್ಜಿಗಳನ್ನು ಪರಿಶೀಲಿಸಲಾಗಿದೆ. 22 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.ಇನ್ನೂ 5 ಪ್ರಕರಣಗಳು ತನಿಖಾ ಹಂತದಲ್ಲಿದೆ. ಇದುವರೆಗೆ 15,89,500 ನಗದು ಮುಟ್ಟುಗೋಲು ಹಾಕಲಾಗಿದೆ.ಈ ಪೈಕಿ 12,89,500 ನಗದಿಗೆ ದಾಖಲೆ ಪಡೆದು ಪರಿಶೀಲಿಸಿ ಪರಿಹಾರ ಸಮಿತಿ ಬಿಡುಗಡೆಗೊಳಿಸಿದೆ.23,952.675 ಲೀಟರ್ ಅಕ್ರಮ ಸಂಗ್ರಹ ಮತ್ತು ಮಾರಾಟ ಮದ್ಯಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಚುನಾವಣಾ ಮಾಹಿತಿ ಪಡೆಯಲು ‘ಚುನಾವಣಾ ’ಹೆಸರಿನ ಆ್ಯಪ್ ಒಂದನ್ನು ರಚಿಸಲಾಗಿದೆ ಈ ಆ್ಯಫ್ ಮೂಲಕ ವಿಕಲ ಚೇತನರು ಗಾಲಿಖುರ್ಚಿಗಳನ್ನು ಬುಕ್ ಮಾಡಬಹುದಾಗಿದೆ, ಮತದಾರರ ಗುರುತು ಪತ್ರ,ಮತಗಟ್ಟೆಯ ನಂಬರ್ ಪಡೆಯಬಹುದಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಿದರೆ ಅವರ ವಿರುದ್ಧ ದೂರು ದಾಖಲಿಸಲಾಗುವುದು. ಹಣದ ಆಮಿಷ ಮತಗಟ್ಟೆಯ ಬಗ್ಗೆ ದೂರುಗಳಿದ್ದರೆ, ಹಣ, ಮದ್ಯ, ವಸ್ತು ವಿತರಣೆ ಆಗುತ್ತಿದ್ದರೆ ದೂರು ನೀಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂ ತೆರಯಲಾಗಿದೆ.

ದೂರವಾಣಿ 1800-425-2099,0824-2420002 ಹಾಗೂ ವಾಟ್ಸ್ ಆ್ಯಫ್ 8277163522ಸಂಖ್ಯೆಗೆ ದೂರು ನೀಡಬಹುದಾಗಿದೆ. ಮತದಾನದ ಅವಧಿ ಈ ಬಾರಿ ಬೆಳಗ್ಗೆ 7 ಗಂಟೆಯಿಂದ ಆರಮಭಗೊಂಡು ಸಂಜೆ 6 ಗಂಟೆಗೆ ಸಮಾರೋಪಗೊಳ್ಳಲಿದೆ ಚುನಾವಣಾ ಕಾರ್ಯ ನಿರ್ವಹಣೆಗೆ ಸೆಂಟ್ರಲ್‌ನ ಪ್ಯಾರಾ ಮಿಲಿಟರಿ ಪಡೆಯ ಯೊಧರು ಕಾರ್ಯನಿರ್ವಹಿಸಲಿದ್ದಾರೆ.

ಬಸ್ ಸೌಲಭ್ಯ ಇಲ್ಲದ ಕಡೆ ಬಸ್ ಸೌಕರ್ಯ ಒದಗಿಸುವ ಬಗ್ಗೆ ಚಿಂತನೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English