ಗೆದ್ದೇ ಗೆಲ್ಲುವೆವು – ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತ ಬೇಟೆ

9:12 PM, Saturday, May 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

angadi ಮಂಗಳೂರು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ. ವಾಮಂಜೂರು ಸುತ್ತಮುತ್ತ ಭರ್ಜರಿ ಪ್ರಚಾರ ಮಾಡಿದ್ರು. ಆಟೋರಿಕ್ಷಾ ಪಾರ್ಕ್, ಬಸ್ಸು ನಿಲ್ದಾಣ, ಅಂಗಡಿ, ಹೋಟೆಲ್ , ಕ್ಯಾಂಟೀನ್‌ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಮತಯಾಚನೆ ಮಾಡಿದರು.

ತಮ್ಮ ಬಳಿಗೆ ಬಂದ ಅಭ್ಯರ್ಥಿಯನ್ನ ಜನರೂ ಕೂಡ ಆತ್ಮೀಯವಾಗಿ ಬರಮಾಡಿಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಹೊರಟ ಭರತ್‌ ಶೆಟ್ಟಿ ಮತಯಾಚನೆಯೇ ವಾಮಂಜೂರಿನಲ್ಲಿ ಕೆಲಕ್ಷಣ ಜನಾಕರ್ಷಣೆಯ ಕೇಂದ್ರವಾಗಿತ್ತು. ಅಭ್ಯರ್ಥಿ ಹೋದಲೆಲ್ಲ ಜನ ಮುತ್ತಿಕೊಂಡು ಭರತ್‌ ಶೆಟ್ಟಿಯನ್ನ ಹುರಿದುಂಬಿಸಿದರು.

ಜನರ ಆಶೀರ್ವಾದ ನನ್ನ ಮೇಲಿದ್ದರೆ ಈ ಬಾರಿ ಖಂಡಿತ ಗೆದ್ದೇ ಗೆಲ್ಲುತ್ತೇನೆ . ಒಳ್ಳೇ ಕೆಲಸ ಮಾಡಬೇಕೆನ್ನುವ ಅಭಿಲಾಷೆಯಲ್ಲಿದ್ದೇನೆ . ಒಂದು ಅವಕಾಶ ಮಾಡಿಕೊಡಿ ಎಂದು ಭರತ್‌ ಶೆಟ್ಟಿ ಎಲ್ಲರ ಬಳಿ ಮತಯಾಚನೆ ಮಾಡಿದರು.

ರಾಜೇಶ್ ಕೊಟ್ಟಾರಿ, ಜಗದೀಶ್ ಶೇಣವ, ಉಮೇಶ್ ಕೋಟ್ಯಾನ್, ಓಂ ಪ್ರಕಾಶ್ , ಕಿರಣ್ ಕುಮಾರ್‍ ಕೋಡಿಕಲ್, ಯೋಗೀಶ್ ಅಂಚನ್, ಅನಿಲ್ ರೈ ಇನ್ನಿತರರು ಉಪಸ್ಥಿತರಿದ್ದರು.

 ವ್ಯಾಸನಗರ ಬಾರೇಬೈಲ್ 

merihill ಗೆದ್ದೇ ಗೆಲ್ಲುವೆವು.. ಗೆಲ್ಲಲೇ ಬೇಕು ಎಂಬ ಉದ್ದೇಶದಿಂದ ಕಣಕ್ಕಿಳಿಯುತ್ತಿರುವ ಬಿಜೆಪಿ ಕಾರ್ಯಕರ್ತರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಾದ್ಯಂತ ಭಾರೀ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇವತ್ತು ವ್ಯಾಸನಗರ ಬಾರೇಬೈಲಿನ ಬಳಿ ಪ್ರಚಾರ ನಡೆಯಿತು. ಮನೆ, ಹೋಟೆಲ್ ಅಂಗಡಿ ಎಲ್ಲೆಡೆ ತೆರಳಿ ಬಿಜೆಪಿ ಪರ ಮತಯಾಚನೆ ನಡೆಯಿತು. ನಂತರ, ಜಾರಂದಾಯ ದೈವಸ್ಥಾನ. ಕೊರಗಜ್ಜ ಗುಡಿ, ರಕ್ತೇಶ್ವರಿ ದೈವಸ್ಥಾನ ಹಾಗೂ ಗೆಳೆಯರ ಬಳಗ ಮೇರಿಹಿಲ್‌‌‌ ಪ್ರದೇಶಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದರು.

ನಮ್ಮ ದೇಶಕ್ಕೆ ಯುವ ರಾಜಕಾರಣಿಗಳ ಅವಶ್ಯಕತೆ ಇದೆ. ಯುವಕರಿಂದ ಹಾಗೂ ಯುವ ಮನಸ್ಥಿತಿಯವರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಯುವ ಮನಸ್ಥಿತಿ ಹಾಗೂ ಸದಾ ದೇಶದ ಏಳಿಗೆ ಬಗ್ಗೆ ಯೋಚಿಸುವ ಮೋದಿಜಿ ಅಂತಹ ನಾಯಕರು ನಮಗೆ ಬೇಕು. ಅಂತಹ ನಾಯಕರಿಗೆ ನಮ್ಮ ಬೆಂಬಲ ಕೂಡ ಅಷ್ಟೇ ಅಗತ್ಯ ಇದೆ. ಒಬ್ಬ ಒಳ್ಳೇಯ ನಾಯಕನಿಗೆ ಬೆಂಬಲ ಸಿಗದಿದ್ದರೆ ಅವನಲ್ಲಿ ಸಾಮರ್ಥ್ಯ ಇದ್ದೂ ಕೂಡ ಅದು ವ್ಯರ್ಥವಾಗುತ್ತದೆ. ಹಾಗಾಗಿ ಈ ಬಾರಿ ನಿಮ್ಮ ಮತ ಬಿಜೆಪಿಗಿರಲಿ. ನಿಮ್ಮೊಳಗೊಂದಾಗಿ ದುಡಿಯುವ ಅವಕಾಶ ನನಗೆ ಕೊಡಿ ಎಂದು ಭರತ್ ಶೆಟ್ಟಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೋರೇಟರ್‍ ಜಯನಂದ್ ಅಂಚನ್ , ರಾಮ ಮುಗ್ರೋಡಿ. ಮಂಡಲ ಪ್ರಧಾನ ಕಾರ್ಯದರ್ಶಿ  ರಮೇಶ್ ಆಚಾರ್‍. ವಾರ್ಡ್ ಅಧ್ಯಕ್ಷ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.

ಮೇರಿಹಿಲ್‌

merihill ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಡೆಯುತ್ತಿರುವ ಬಿಜೆಪಿ ಮನೆ ಮನೆ ಪ್ರಚಾರ ಭರದಿಂದ ಸಾಗಿದೆ. ಕ್ಷೇತ್ರದುದ್ದಕ್ಕೂ ಸಂಚರಿಸುತ್ತಿರುವ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ. ಮೇರಿಹಿಲ್‌ನ ಅಯ್ಯಪ್ಪ ಮಂದಿರಕ್ಕೆ ಭೇಟಿ ನೀಡಿದರು.

ಈ ವೇಳೆ ಸೇರಿದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಭರತ್‌ ಶೆಟ್ಟಿ, ಪ್ರಜೆಗಳು ದೇಶದ ಶಕ್ತಿ. ಯಾವ ಪಕ್ಷವನ್ನಾದರೂ ಏರಿಸುವ , ಉರುಳಿಸುವ ಶಕ್ತಿ ಜನರಿಗಿದೆ. ಈಗ ಈ ಶಕ್ತಿ ಬಿಜೆಪಿಯೊಂದಿಗೆ ನಿಲ್ಲಬೇಕಿದೆ. ಪ್ರಜೆಗಳ ಋಣವನ್ನ ಎಂದೂ ತೀರಿಸಲು ಸಾಧ್ಯವಿಲ್ಲ. ಆದರೂ ಈಗೀನ ಸರ್ಕಾರದಂತೆ ಕೀಳು ರಾಜಕಾರಣ ಮಾಡದೇ.. ಜನ ಹಾಗೂ ದೇಶದ ಅಭಿವೃದ್ಧಿಗಾಗಿ ದುಡಿಯುತ್ತೇವೆ. ಜನರಿಂದಲೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಮ್ಮ ಬಿಜೆಪಿ ಸರ್ಕಾರದ ಉತ್ತಮ ಕೆಲಸಗಳೇ ಇದಕ್ಕೆ ಸಾಕ್ಷಿ ಎಂದರು.

ಕಾರ್ಯಕ್ರಮದಲ್ಲಿ ಜಯನಂದ್ ಅಂಚನ್, ರಮಾ ಮುಗ್ರೋಡಿ,ರಮೇಶ್‌ ಆಚಾರ್‍, ಮೋಹನ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English