ಮಂಗಳೂರು: 2014ರಲ್ಲಿ ಮೋದಿ ಮಂಗಳೂರಿನಲ್ಲಿ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಚುನಾವಣೆಗೆ ಮುನ್ನ ನೀಡಿದ ಭರವಸೆ ಬಗ್ಗೆ ಹೇಳಲು ಮೋದಿಯಲ್ಲಿ ಏನೂ ಉಳಿದಿಲ್ಲ ಎಂದು ಎಐಸಿಸಿ ವಕ್ತಾರ ರಣದೀಪ್ ಸುರ್ಜೇವಾಲ ಟೀಕಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜುಮ್ಲಾ ಹೇಳಿಕೆಗಳಿಗೆ ಈಗ ಅವರು ಕುಖ್ಯಾತಿ ಪಡೆದಿದ್ದಾರೆ. ಘರ್ ಘರ್ ಮೋದಿ ಈಗ ಬೈ ಬೈ ಮೋದಿ ಆಗಿ ಬದಲಾಗಿದೆ. ಕರ್ನಾಟಕಕ್ಕೆ ಅವರು ಮೋಸ, ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ರಾಜ್ಯದ ಯೋಜನೆಗಳನ್ನು ತಪ್ಪಿಸುವುದು ಬಿಜೆಪಿಯ ಡಿಎನ್ಎ ಆಗಿದೆ. ಮೋದಿ, ಬಿಎಸ್‌ವೈ, ರೆಡ್ಡಿ ಗ್ಯಾಂಗ್ ಈಗ ರಾಜ್ಯದ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಮೂಲಸೌಕರ್ಯ 13 ವರ್ಷದಲ್ಲೇ ಅತ್ಯಂತ ಕಡಿಮೆಯಾಗಿದೆ. ಬರದಿಂದ ನಲುಗುತ್ತಿದ್ದಾಗ ರಾಜ್ಯದ ರೈತರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಆರೋಪ ಮಾಡಿದರು.
ಬರ ಪರಿಹಾರಕ್ಕೆ ರಾಜ್ಯ 3310 ಕೋಟಿ ಕೇಳಿದಾಗ ಕೇಂದ್ರ ಕೇವಲ 790 ಕೋಟಿ ನೀಡಿತು. ರಾಜೀವ್ ಗಾಂಧಿ ಪಂಚಾಯತ್ ಶಕ್ತಿ ಅಭಿಯಾನದಲ್ಲೂ ಭಾರಿ ಪ್ರಮಾಣದ ಅನುದಾನ ಕಡಿತ ಮಾಡಲಾಗಿದೆ. ರೈತರು ಯಾಕಾಗಿ ನಿಮಗೆ ಮತ ಹಾಕಬೇಕು ಹೇಳಿ ಎಂದು ಪ್ರಶ್ನಿಸಿದರು.
Click this button or press Ctrl+G to toggle between Kannada and English