ಪ್ರಧಾನಿ ಮೋದಿ ಅವರದ್ದು ಸುಳ್ಳಿನ ಕಂತೆ: ಆರ್.ಪಿ.ಎನ್. ಸಿಂಗ್ ಹೇಳಿಕೆ

2:50 PM, Monday, May 7th, 2018
Share
1 Star2 Stars3 Stars4 Stars5 Stars
(No Ratings Yet)
Loading...

prime-ministerಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆರ್.ಪಿ.ಎನ್. ಸಿಂಗ್ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ. 45 ನಿಮಿಷಗಳ ಭಾಷಣದಲ್ಲಿ 5 ನಿಮಿಷವೂ ಅಭಿವೃದ್ಧಿ ಬಗ್ಗೆ ಮಾತಾಡಿಲ್ಲ. ಉದ್ಯೋಗ ಸೃಷ್ಟಿ, ಅಭಿವೃದ್ಧಿ ಬಗ್ಗೆ ತಮ್ಮ ಭರವಸೆಯನ್ನು ಅವರು ಮರೆತಿದ್ದಾರೆ. 4 ವರ್ಷದಲ್ಲಿ ರೈತರ ಸಾಲದ ಒಂದು ರೂ. ಕೂಡ ಮನ್ನಾ ಮಾಡಲಿಲ್ಲ.ತನ್ನ ಸ್ವಂತ ಕ್ಷೇತ್ರದಲ್ಲಿ ಸ್ವಚ್ಚತೆ ಕಾಪಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ನಿಮ್ಮ 64 ಇಂಚಿನ ಎದೆಯ ದಿಟ್ಟತನ ಎಲ್ಲಿ ಹೋಯಿತು ? ಪಾಕ್, ಚೀನಾಗೆ ದಿಟ್ಟ ಉತ್ತರ ಕೊಡುವ ಮಾತೆಲ್ಲಿ?, ಛೋಟಾ ಮೋದಿ ದೇಶವನ್ನು ಕೊಳ್ಳೆ ಹೊಡೆದಾಗ ಈ ಚೌಕಿದಾರ ಎಲ್ಲಿ ಹೋಗಿದ್ದರು? ಯಡಿಯೂರಪ್ಪ ಸಿಎಂ ಯಾಕೆ ಮಾಡಬೇಕು ಎಂಬ 5 ಪ್ರಶ್ನೆ ಸಿದ್ದರಾಮಯ್ಯ ಕೇಳಿದ್ದರು ಆದರೆ ಪ್ರಧಾನಿ, ಪಕ್ಷ ಈ ಬಗ್ಗೆ ಚಕಾರವೂ ಎತ್ತಿಲ್ಲ ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English