ಮಂಗಳೂರು: ಕಾಂಗ್ರೆಸ್ಗೆ ಪೂರ್ಣ ಬಹುಮತ ನೀಡಲು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಜನತೆಗೆ ಕರೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮತನಾಡಿದ ಅವರು ಅಭಿವೃದ್ಧಿಯ ಮುನ್ನಡೆಗೆ ಮತ್ತೆ ಕಾಂಗ್ರೆಸ್ ಸರ್ಕಾರ ಅನಿವಾರ್ಯ. ರಾಜ್ಯದ ಅಭಿವೃದ್ಧಿ ದರ ಅತ್ಯುತ್ತಮ ಮಟ್ಟದಲ್ಲಿದೆ. ಉದ್ಯೋಗ, ಶಿಕ್ಷಣ, ಔದ್ಯಮಿಕ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದೇಶದ ದರಕ್ಕೆ ಹೋಲಿಸಿದರೆ ಇದು ಸಾಕಷ್ಟು ಎತ್ತರದಲ್ಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಉತ್ತಮ ಹಣಕಾಸಿನ ನಿರ್ವಹಣೆ ನೀಡಿದೆ.ಸಾಮಾಜಿಕ ವಲಯದಲ್ಲಿ ಬಜೆಟ್ನಲ್ಲಿ ಉತ್ತಮ ಅನುದಾನ. ಆದರೆ, ಬಿಜೆಪಿ ಭ್ರಷ್ಟಾಚಾರ, ಅತ್ಯಾಚಾರ, ಒಳಜಗಳದಿಂದ ಕೂಡಿತ್ತು. ಅವರ ಸಾಧನೆ ಬಗ್ಗೆ ಅವರ ಒಂದಕ್ಷರ ಮಾತಾಡಲು ಆಗುತ್ತಿಲ್ಲ. ಬಿಜೆಪಿ ಆಡಳಿತದ ಮೂರು ಸಿಎಂಗಳ ಸಾಧಾರಣವಾಗಿ ಶೂನ್ಯ.ಕರಾವಳಿಯಲ್ಲಿ ಕೇಸರೀಕರಣವಾಗಿದೆ. ಬಿಜೆಪಿಯಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಆಗಿದೆ, ಹಿಂಸೆ ತಾಂಡವವಾಡುತ್ತಿದೆ ಎಂದು ಹೇಳಿದರು.
Click this button or press Ctrl+G to toggle between Kannada and English