ಮಂಗಳೂರು ನೆಚ್ಚಿನ ಶಾಸಕ ಸಂತೋಷ್ ಕುಮಾರ್ ರೈ

1:25 PM, Friday, May 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

santhosh-raiಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕ ಮತದಾರರು. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಇಲ್ಲಿಯ ಶಾಸಕರಾಗಿದ್ದಾರೆ. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಚಿವರಿಗ ಜಿದ್ದಾಜಿದ್ದಿನ ಸ್ಪರ್ಧೆ ನೀಡುವವ ಉತ್ಸಾಹಿ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೊಳ್ಯಾರು.

ಕಳೆದ ಬಾರಿಯೇ ವಿಧಾನಸಭೆ ಚುನಾವಮೆಗೆ ಸ್ಪರ್ಧಿಸಿ ಶಾಸಕರಾಗಿದ್ದ ಖಾದರ್ ಅವರನ್ನು ಸೋಲಿಸಲು ಪ್ರಯತ್ನಿಸಬೇಕು ಎಂದು ಹಮ್ಮನಸ್ಸಿನಲ್ಲಿದ್ದವರು ಸಂತೋಷ್ ರೈ. ಕಳೆದ ಬಾರಿ ಅವರಿಗೆ ಪಕ್ಷದ ವತಿಯಿಂದ ಅವಕಾಶ ದೊರೆತಿರಲಿಲ್ಲ. ಈ ಬಾರಿ ಗೆದ್ದೆ ಗೆಲ್ಲ ಬೇಕೆಂಬ ಛದಲ್ಲಿ ಇದ್ದಾರೆ ಸಂತೋಷ್ ಕುಮಾರ್ ರೈ ಬೊಳ್ಯಾರು.

ಹಿಂದಿನಿಂದಲೂ ಹಳೆಯ ಉಳ್ಳಾಲ ಇಂದಿನ ಮಂಗಳೂರು ವಿಧಾನಸಭಾಕ್ಷೇತ್ರ ಕಾಂಗ್ರೆಸ್ ನ ಭದ್ರ ಕೋಟೆ. 1994 ರಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಈಕ್ಷೇತ್ರ ಗೆದ್ದಿತ್ತು. ಆದರೆ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಯಲ್ಲಿಬಿಜೆಪಿ ಸೋತಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಚಂದ್ರಹಾಸ್ಉಳ್ಳಾಲ್ ಅವರ ಎದುರು ಯು.ಟಿ.ಖಾದರ್ 29,111 ಮತಗಳ ಅಂತರದಿಂದ ಜಯಗೊಳಿಸಿದ್ದರು. ಈಹಿನ್ನೆಲೆಯಲ್ಲಿ ಕೈ ಪಾಳಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮಂಗಳೂರು ವಿಧಾನಸಭಾಅತ್ಯಂತ ಸೇಫ್ ಕ್ಷೇತ್ರ ಎನ್ನಲಾಗುತ್ತಿದೆ.

ಆದರೆ, ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೊಳ್ಯಾರು ಇಂತಹ ಮಾತುಗಳನ್ನು ಒಪ್ಪಲು ಸುತರಾಂ ಸಿದ್ಧರಿಲ್ಲ. ಇದು ಏಕಪಕ್ಷೀಯ ಚುನಾವಣೆ ಅಲ್ಲ ಎಂಬುದು ಅವರ ಸ್ಪಷ್ಟ ನಿಲುವು ಆಗಿದ್ದು, ಪ್ರತಿ ಮನೆಗೂ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.

ಹಿರಿಯ ಅನುಭವಿ ರಾಜಕಾರಣಿ, ರಾಜ್ಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ಶಾಸಕ ಯು ಟಿ ಖಾದರ್ ಅವರ ವಿರುದ್ಧಸ್ಪರ್ಧಿಸಲು ಬಿಜೆಪಿ ಈ ಕಾರಣಕ್ಕಾಗಿಯೇ ಈ ಬಾರಿ ಆಯ್ಕೆ ಮಾಡಿಕೊಂಡಿರುವುದು ಬೋಳಿಯಾರು ಸಂತೋಷ್ ಕುಮಾರ್ರೈ.

ಜಿಲ್ಲಾ ಪಂಚಾಯತ ಸದಸ್ಯರಾಗಿರುವ ಸಂತೋಷ್ ಸದ್ಯ ಉಳ್ಳಾಲ ಕ್ಷೇತ್ರದಲ್ಲಿ ಹೊಸ ಮುಖ.ಇಲ್ಲಿ ಸಂತೋಷ್ ಒಂದಷ್ಟು ಜನಪ್ರಿಯತೆಯನ್ನು ಹಿಂದೂ ಪರ ಸಂಘಟನೆಗಳಲ್ಲಿ ಪಾಲ್ಗೊಂಡುನಡೆಯುವ ಹೋರಾಟಗಳಲ್ಲಿ ಸೇರಿ ಪಡೆದುಕೊಂಡಿದ್ದಾರೆಯೇ ವಿನಃ ಕ್ಷೇತ್ರದ ಬಹುತೇಕ ಮಂದಿಗೆಅಷ್ಟೊಂದು ಪರಿಚಿತರಲ್ಲ ಎಂದು ನಾವು ಹೇಲುವ ಹಾಗಿಲ್ಲ. ವಿದ್ಯಾಕ್ಷೇತ್ರ, ಪ್ರವಾಸೋದ್ಯಮ, ಬೀಚ್ , ಧಾರ್ಮಿಕ ಕೇಂದ್ರಗಳು, ಆರೋಗ್ಯಕ್ಷೇತ್ರದಲ್ಲಿ ಹೆಸರಾಗಿರುವಉಳ್ಳಾಲ ಕ್ಷೇತ್ರದಲ್ಲಿ ಓರ್ವ ಸಮರ್ಥ ಅಭ್ಯರ್ಥಿಯನ್ನು ಬಿಜೆಪಿ ಆಯ್ಕೆಮಾಡಿಕೊಂಡಿದೆ ಎಂದೇ ಹೇಳಬೇಕಾಗಿದೆ.

ನಾಲ್ಕನೇ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿರುವ ಯು ಟಿ ಖಾದರ್ ಅವರನ್ನು ಮಣಿಸಲುಸಂತೋಷ್ ರೈ ಸಮರ್ಥ ಅಭ್ಯರ್ಥಿ ಎಂದು ಪಕ್ಷ ತೀರ್ಮಾನಿಸಿದೆ. ಏಕೆಂದರೆ ಅವರು ಪ್ರಾಮಾಣಿಕ ಕಾರ್ಯಕರ್ತ ಮಾತ್ರವಲ್ಲದೆ ಎದೆಗುಂದದೆ ಹೋರಾಟ ಮಾಡಬಲ್ಲ ಧಝೀಮಂತ ಮುಖಂಡ ಎಂದೇ ಹೇಳಬೇಕಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English