ಎಲ್ಲರ ಪ್ರೀತಿ ಪಾತ್ರರಾದ ರಮಾನಾಥ ರೈ

2:44 PM, Friday, May 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

congressಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರ ಬಂಟ್ವಾಳ. ಕ್ಷೇತ್ರದ ಶಾಸಕರು ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ ರಮಾನಾಥ ರೈ. ಹಲವಾರು ವಿವಾದಗಳಿಂದ ಸುದ್ದಿ ಮಾಡಿದ್ದ ಸಚಿವ ರಮಾನಾಥ ರೈ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಬೇಬಿಯಣ್ಣ ಎಂದೇ ಖ್ಯಾತರಾದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕ್ಷೇತ್ರದಲ್ಲಿ ಜಾರಿ ಮಾಡಿರುವ ಅಸಂಖ್ಯ ಅಭಿವೃದ್ಧಿ ಕಾಮರ್ಯಗಳು ಮತ್ತು ಅವರು ಜನರಿಂದ ಗಳಿಸಿದ ಪ್ರತಿ ವಿಶ್ವಾಸ ಅವರ ಕೈ ಹಿಡಿಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಪ್ರಮುಖ ಟಾರ್ಗೆಟ್ ರಮಾನಾಥ ರೈ ಅವರು ಆಗಿ ಹೋಗಿದ್ದಾರೆ, ರೈ ಒಬ್ಬರನ್ನು ಸೋಲಿಸಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನೇ ಸೋಲಿಸಿದಂತೆ ಎನ್ನಲಾಗುತ್ತದೆ.

ಕಾಂಗ್ರೆಸ್ ಹಾಗು ಬಿಜೆಪಿಯ ಜಿದ್ದಾಜಿದ್ದಿನ ಕ್ಷೇತ್ರವಾಗಿದೆ ಬಂಟ್ವಾಳದಲ್ಲಿ ಬಿ.ರಮಾನಾಥ ರೈ 6 ಬಾರಿ ಶಾಸಕರಾಗಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಒಂದು ಬಾರಿ ಸೋಲನ್ನು ಕಂಡಿದ್ದಾರೆ. 2013ರ ಚುನಾವಣೆಯಲ್ಲಿ ಅವರು 17,850 ಮತಗಳ ಅಂತರದಿಂದ ಗೆದ್ದಿದ್ದಾರೆ. 2013ರ ಚುನಾವಣೆಯಲ್ಲಿ ರಮಾನಾಥ ರೈ ಬಿಜೆಪಿಯ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಿರುದ್ಧ 17,850 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ರಮಾನಾಥ ರೈ 81,665 ಮತಗಳನ್ನು ಗಳಿಸಿದರೆ, ರಾಜೇಶ್ ನಾಯ್ಕ್ 63,815 ಮತ, ಜೆಡಿಎಸ್‌ನ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ 1,927 ಮತ ಪಡೆದಿದ್ದರು.

ದೀರ್ಘ ಕಾಲದಿಂದ ಮತೀಯ ಸಂಘರ್ಷಕ್ಕೆ ಅಖಾಡವಾಗಿ ರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸ್ಥಳೀಯ ಶಾಸಕ ಬಿ.ರಮಾನಾಥ ರೈ ಅವರ ವಿರುದ್ಧ ಕತ್ತಿ ಮಸೆಯುತ್ತಿದ್ದ ಮತೀಯವಾದಿಗಳು ಈಗ ಕೊಂಚ ತಣ್ಣಗಾಗಿದ್ದಾರೆ.

ಬಂಟ್ವಾಳ ಕ್ಷೇತ್ರದಲ್ಲಿ ಈವರೆಗೆ ಏಳು ಬಾರಿ ಸ್ಪರ್ಧಿಸಿರುವ ರಮಾನಾಥ ರೈ, ಎಂಟನೇ ಬಾರಿ ಚುನಾ ವಣಾ ಅಖಾಡಕ್ಕಿಳಿದು ಭರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್‌ನ ಸಾಂಪ್ರ ದಾಯಿಕ ಎದುರಾಳಿಯಾಗಿದೆ. ಬಿಲ್ಲವ ಮತ್ತು ಮುಸ್ಲಿಂ ಮತದಾರರ ಬಾಹುಳ್ಯವಿರುವ ಕ್ಷೇತ್ರ ದಲ್ಲಿ ಎಲ್ಲರ ಪ್ರೀತಿ ವಿಶ್ವಸಾವನ್ನು ಗಳಿಸಿಕೊಂಡು ಬಂದವರು ರಮಾನಾಥ ರೈ.

ಬಂಟ್ವಾಳದಲ್ಲಿ ಅಪಪ್ರಚಾರದ್ದೆ ಕಾರುಬಾರು ಎನ್ನುತ್ತಾರೆ ಕಾಂಗ್ರೆಸಸ್ಸಿಗರು. ಈ ಅಪಪ್ರಚಾರವನ್ನು ಮಟ್ಟಹಾಕಲು ಸಲ ವ್ಯವಸ್ತೆಯನ್ನು ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮಾಡಿಕೊಂಡಿದೆ. ಸ್ವತಃ ಸಚಿವ ರಮಾನಾಥ ರೈ ಖುದ್ದಾಗಿ  ಪ್ರಚಾರದ ನೇತೃತ್ವ ವಹಿಸಿದ್ದು, ಪಕ್ಷದ ಮುಖಂಡರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಬಿಜೆಪಿಯ ‘ಪೇಜ್‌ ಪ್ರಮುಖ್‌’ಗೆ ಪ್ರತಿಯಾಗಿ ‘ಸತ್ಯವಾದಿ’ ಎಂಬ ಹೆಸರಿನಲ್ಲಿ ಮತದಾರರ ಜೊತೆ ಸಂಪರ್ಕ ಸಾಧಿಸಲು ಕಾಂಗ್ರೆಸ್ ಕಾರ್ಯಕರ್ತರನ್ನು ನಿಯೋಜಿಸಲಾಗುತ್ತಿದೆ.

ರಮಾನಾಥ ರೈ ಅವರು ಪಕ್ಷಬೇಧ, ಜಾತಿ ಬೇಧ, ಮತ ಬೇಧ ಮರೆತು ಕೆಲಸ ಮಾಡುವ ಜನಪ್ರತಿನಿಧಿ ಆಗಿರುವುದರಿಂದ, ಅವರಿಗೆ ಜನಬೆಂಬಲವೂ ಕೂಡ ಅದೇ ರೀತಿ ಇದೆ. ಬಂಟ್ವಾಳವನ್ನು ಮಾದರಿ ವಿಧಾನಸಭಾ ಕ್ಷೇತ್ರವಾಗಿ ಮಾಡುವಲ್ಲಿ ರಮಾನಾಥ ರೈ ಅವರ ಪರಿಶ್ರಮ ಅನನ್ಯವಾದುದು. ಬಂಟ್ವಾಳಕ್ಕೆ ಸುಸಜ್ಜಿತವಾದ ಮಿನಿ ವಿಧಾನಸೌಧ, ಬಸ್ ನಿಲ್ದಾಣ, ಬಸ್ ಡಿಫೋ ಇತ್ಯಾದಿ ಹತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ. ರಮಾನಾಥ ರೈ ಅವರ ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಕೂಡ ಗಮನಾರ್ಹವಾದುದು.

ರಮಾನಾಥ ರೈ ಅವರ ವಿಶೇಷತೆ ಅಂದರೆ ಒಂದೇ ಪಕ್ಷದಿಂದ ಮತ್ತು ಕ್ಷೇತ್ರದಿಂದ ಸತತವಾಗಿಗೆಲುವು ಪಡೆದಿರುವ ಏಕೈಕ ಅಭ್ಯರ್ಥಿ ಎಂಬ ದಾಖಲೆ. ರಾಜ್ಯದ ಮೂವರುಮುಖ್ಯಮಂತ್ರಿಗಳೊಂದಿಗೆ ಸಚಿವ ಸಂಪುಟ ಸಹದ್ಯೋಗಿಯಾಗಿ ಕಾರ್ಯನಿರ್ವಹಿಸಿರುವ ಹೆಗ್ಗಳಿಕೆ.

1985, 1989, 1994, 1999, 2008 ಮತ್ತು 2013ರಲ್ಲಿ ಶಾಸಕರಾಗಿಆಯ್ಕೆಯಾಗಿದ್ದಾರೆ.1992ರಲ್ಲಿ ರಾಜ್ಯ ಗೃಹ ಸಚಿವರಾಗಿ, 1994ರಲ್ಲಿ ಅಬಕಾರಿಸಚಿವರಾಗಿ, 1999ರಲ್ಲಿ ಬಂದರು – ಮೀನುಗಾರಿಕೆ ಸಚಿವರಾಗಿ, 2002ರಲ್ಲಿ ಸಾರಿಗೆಸಚಿವರಾಗಿ, 2013ರಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಈಗಾಗಲೇ  ಆರುಬಾರಿಶಾಸಕರಾಗಿ ಆಯ್ಕೆಯಾಗಿರುವ ರಮಾನಾಥ ರೈ ಮತ್ತೆ ಗೆಲುವನ್ನು ಪಡೆಯುವವಿಶ್ವಾಸದಲ್ಲಿದ್ದಾರೆ.ಕೃಷಿ ಕುಟುಂಬದಲ್ಲಿ ಜನಿಸಿರುವ ರೈ ಸುಮಾರು 50 ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.

ಸುದೀರ್ಘ ಕಾಲ ಶಾಸಕನಾಗಿ ಮತ್ತು ಸಚಿವನಾಗಿ ಸೇವೆ ಸಲ್ಲಿಸಿದ ಏಕೈಕ ವ್ಯಕ್ತಿ ರಮಾನಾಥ ರೈ. ಇಂತಹ ಹೆಗ್ಗಳಿಕೆ ಜಿಲ್ಲೆಯಲ್ಲಿ ಇನ್ಯಾರಿಗೂ ಇಲ್ಲ. ಪ್ರಾಮಾಣಿಕ ಮತ್ತು ಶುದ್ಧಹಸ್ತರಾಗಿರುವ ರಮಾನಾಥ ರೈ ಇಲಾಖೆಯನ್ನು ನಿಭಾಯಿಸುವುದರಲ್ಲಿ ಎಂದಿಗೂ ಕೂಡ ವಿವಾದ ಮಾಡಿಕೊಂಡವರಲ್ಲ.

ಸಚಿವ ಬಿ. ರಮಾನಾಥ ರೈಯವರ ವಿಶೇಷ ಮುತುವರ್ಜಿಯಿಂದ ಇದೀಗ ಬಹು ಕಾಲದ ಕನಸಿನ ಯೋಜನೆಗಳಾದಮಿನಿ ವಿಧಾನ ಸೌಧ, ಬಂಟ್ವಾಳ ನಿರೀಕ್ಷಣಾ ಮಂದಿರ, ಕೆ.ಎಸ್.ಆರ್.ಟಿ.ಸಿ. ನೂತನ ಬಸ್ಸುನಿಲ್ದಾಣ, 100 ಹಾಸಿಗೆಗಳ ನೂತನ ಆಸ್ಪತ್ರೆ, ನೂತನ ಮೆಸ್ಕಾಂ ಕಟ್ಟಡ, ಸಮಗ್ರ ಕುಡಿಯುವನೀರಿನ ಯೋಜನೆ, ಟ್ರೀ ಪಾರ್ಕ್, ಪ್ರಾದೇಶಿಕ ಸಾರಿಗೆ ಕಛೇರಿ, ಬಹುಗ್ರಾಮ ಕುಡಿಯುವ ನೀರಿನಯೋಜನೆ, ಮಂಜೆ ಮಂಜೇಶರಾಯ ಸ್ಮಾರಕ ಭವನ, ಅಜಿಲಮೊಗರು-ಕಡೇಶಿವಾಲಯ ಸೌಹಾರ್ಧ ಸೇತುವೆ, ಅರಳ ಕಿಂಡಿ ಅಣೆಕಟ್ಟು ಮೊದಲಾದವುಗಳು ಅನುಷ್ಠಾನಗೊಂಡಿದ್ದು ಜನಮಾನಸದ ಮನದಲ್ಲಿ ಶಾಶ್ವತಯೋಜನೆಗಳಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

13 ವರ್ಷಗಳಿಂದ ಜಕ್ರಿಬೆಟ್ಟಿನಲ್ಲಿ ಶ್ರೀ ಗಣೇಶೋತ್ಸವದ ಸಂಘಟನೆ ಸಹಿತ ಹಲವಾರುಕಡೆಗಳಲ್ಲಿ ಸಾಹಿತ್ಯಿಕ, ಧಾರ್ಮಿಕ ಸಮಾರಂಭಗಳನ್ನು ಮಾದರಿಯಾಗಿ ಸಂಘಟಿಸಿರುವುದು ಅವರದಕ್ಷ ನಾಯಕತ್ವದ ದ್ಯೋತಕ.  1978 ರಿಂದ 1984 ರವರೆಗೆ ಬಂಟ್ವಾಳ ತಾಲೂಕು ಪ್ರಾಥಮಿಕಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರುನಂತರ 1985ರಿಂದ 2013ರತನಕ 6 ಬಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕವಿಧಾನಸಭೆಗೆ ಸದಸ್ಯರಾಗಿ ಆಯ್ಕೆಯಾಗಿ ಜನಮೆಚ್ಚಿದ ಜನನಾಯಕರಾದವರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English