ಕಾಪು : ನೈಜ ಸಮಾಜ ಸೇವಕ ಎಂದೂ ಅಧಿಕಾರಕ್ಕಾಗಿ ಹಂಬಲಿಸುವುದಿಲ್ಲ. ಅಧಿಕಾರ ಬಂದಾಗ ಸಮರ್ಥವಾಗಿ ನಿರ್ವಹಿಸಬಲ್ಲ, ಜನಪರವಾಗಿ ಕೆಲಸ ಮಾಡಬಲ್ಲವೇ ನೀಜವಾದ ನಾಯಕ. ನಾವೀಗ ಮಾತನಾಡುತ್ತಿರುವ ವ್ಯಕ್ತಿ ನಿಮ್ಮೆಲ್ಲರ ಮೆಚ್ಚಿನ ವಿನಯ ಕುಮಾರ್ ಸೊರಕೆ. ಸೊರಕೆ ಬಗ್ಗೆ ನಿಮಗೆಲ್ಲರಿಗೂ ಗೊತ್ತೆ ಇದೆ.
ಶಾಸಕನಾಗ ಬೇಕು, ಸಂಸದನಾಗ ಬೇಕು, ಸಚಿವನಾಗ ಬೇಕು ಎಂದು ಬಯಸಿದವರವಲ್ಲ ಸೊರಕೆ. ಚುನಾವಣೆ ಅವರನ್ನು ಹುಡುಕಿ ಕೊಂಡು ಬಂದಿತ್ತು. ಕಾಂಗ್ರೆಸ್ ಪಕ್ಷ ಅವರಿಗೆ ಮಹತ್ವದ ಹುದ್ದೆಯನ್ನು ನೀಡಿತ್ತು. ಕಾಪು ಕ್ಷೇತ್ರದ ಅಭಿವೃದ್ಧಿಯ ನೇತಾರ ವಿನಯ ಕುಮಾರ್ ಸೊರಕೆ ಅವರ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ವಿಚಾರಗಳ ಒಂದು ಕಣ್ಣೋಟ.
ರಾಜಕೀಯವಾಗಿ ಕೂಡ ಕಾಪು ಮಹತ್ವ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕಾಪು. ಮಂಗಳೂರು ಮತ್ತು ಉಡುಪಿ ನಡುವೆ ಇರುವ ಕಾಪು ವಿಧಾನಸಭಾ ಕ್ಷೇತ್ರ ಹತ್ತು ಪಟ್ಟಣಗಳನ್ನು, ಮೂವತ್ತೆಂಟು ಗ್ರಾಮಗಳನ್ನು ಒಳಗೊಂಡಿದೆ. ಒಂದೂವರೆ ಲಕ್ಷ ಮತದಾರರು ಕಾಪು ಕ್ಷೇತ್ರದಲ್ಲಿ ಇದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವವರು ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿರುವ ವಿನಯ್ ಕುಮಾರ್ ಸೊರಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದವರು. ವಿನಯ ಕುಮಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸೊರಕೆಯವರು. ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ರಂಗದಲ್ಲಿ ಆಸಕ್ತಿ ಹೊಂದಿದವರು. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಆಶ್ರಯದಲ್ಲಿ ಇದ್ದು ಶಿಕ್ಷಣ ಪಡೆದ ಕಾನೂನು ಪದವೀಧರರು. ಮಾತ್ರವಲ್ಲದೆ ಮಂಗಳೂರಿನ ರೋಶನಿ ನಿಲಯದಲ್ಲಿ ಸೋಶಿಯಲ್ ವರ್ಕ್ ಡಿಗ್ರಿ ಪಡೆದವರು.
ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಸಮಾಜ ಸೇವಕನಾಗಿ, ಆಡಳಿತಗಾರನಾಗಿ ದುಡಿದ ಅನನ್ಯ ಅನುಭವ ಸೊರಕೆ ಅವರದು.
ವಿದ್ಯಾರ್ಥಿ ಮುಖಂಡರಾಗಿದ್ದಾಗಲೇ ಭೂಸುಧಾರಣೆ ಕಾನೂನಿನ ಲೇಂಡ್ ಟಿಬ್ರ್ಯುನಲ್ ಸದಸ್ಯರಾಗಿದ್ದರು. ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯು ಐ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗಲೇ ಪುತ್ತೂರು ಶಾಸಕರಾಗಿ ಆಯ್ಕೆ.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆತ ಕಾರಣ ಮೊದಲ ಬಾರಿಗೆ ಉಡುಪಿಯಿಂದ ಲೋಕಸಭಾ ಸದಸ್ಯರಾಗಿ ಚುನಾಯಿತರಾದವರು ವಿನಯ ಕುಮಾರ್ ಸೊರಕೆ.
ಲೋಕಸಭಾ ಸದಸ್ಯರಾಗಿ ಕೂಡ ವಿನಯ ಕುಮಾರ್ ಸೊರಕೆ ಜನಪ್ರಿಯರಾಗಿದ್ದರು. ಅಂದು ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಇಲ್ಲದ ಕಾರಣ ಅವರು ಕೇಂದ್ರ ಸಚಿವರಾಗಲಿಲ್ಲ.
2013 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಮಯದಲ್ಲಿ ಚುನಾವಣೆಗೆ ಕೇವಲ 13 ದಿನಗಳು ಬಾಕಿ ಇರುವಾಗ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ಘೋಷಿಸಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಪಕ್ಷದ ಪ್ರಚಾರದೊಂದಿಗೆ 1855 ಮತಗಳ ಅಂತರದಲ್ಲಿ ಗೆದ್ದ ಸೊರಕೆ ನಂತರ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದರು.
ವಿದ್ಯಾರ್ಥಿ ಜೀವನದಿಂದಲೇ ನಾಯಕರಾಗಿ ಬೆಳೆದ ಸೊರಕೆ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡುವ ನಿರೀಕ್ಷೆಯನ್ನು ಹೊಂದಿರಲಿಲ್ಲ, ಪ್ರಯತ್ನ ಮಾಡಿದವರೂ ಅಲ್ಲ. ಒಬ್ಬ ಪೊಲೀಸ್ ಅಧಿಕಾರಿ ಆಗಲು ಬಯಸಿದ್ದ ವಿನಯ ಕುಮಾರ್ ಸೊರಕೆ ಅವರ ನಾಯಕತ್ವ ಗುಣವನ್ನು ಪರಿಗಣಿಸಿ ಚುನಾವಣಾ ಟಿಕೇಟ್ ನೀಡಿದ್ದು ಕಾಂಗ್ರೆಸ್.
ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ವಿನಯ ಕುಮಾರ್ ಸೊರಕೆ. 1982 ರಿಂದ 87 ರವರೆಗೆ ರಾಜ್ಯ ಎನ್ ಎಸ್ ಯು ಐ ಅಧ್ಯಕ್ಷರಾದ ಸೊರಕೆ , ಅನಂತರ ರಾಷ್ಟ್ರೀಯ ಯವ ಕಾಂಗ್ರೆಸ್ ಸಹಕಾರ್ಯದರ್ಶಿಯಾಗಿ ಕೂಡ ಸೇವೆ ನೀಡಿದವರು.
ಪುತ್ತೂರು ವಿಧಾನಸಭಾ, ಉಡುಪಿ ಲೋಕಸಭಾ ಮತ್ತು ಕಾಪು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿರುವ ವಿನಯ ಕುಮಾರ್ ಸೊರಕೆ ಅವರದು ಅನನ್ಯ ಸಾಧನೆ. ಇದು ಅವರ ಎಲ್ಲಿಯೂ ಸಲ್ಲುವ, ಎಲ್ಲರ ಮನ ಗೆಲ್ಲುವ ನಾಯಕತ್ವ ಗುಣದಿಂದ ಸಾಧ್ಯವಾಗಿದೆ.
ಕಳೆದ ಐದು ವರ್ಷಗಳಿಂದ ಕಾಪು ಕ್ಷೇತ್ರ ಶಾಸಕರಾಗಿರುವ ವಿನಯ ಕುಮಾರ್ ಸೊರಕೆ ಇಂದು ಕಾಪ ಕ್ಷೇತ್ರದ ಅಭಿವೃದ್ಧಿಯ ಚಿತ್ರಣವನ್ನೇ ಬದಲಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕಾಪು ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.
ಕಾಪು ತಾಲೂಕು ರಚನೆ, ಕಾಪು ಪುರಸಭೆ ಆಗಿ ಮೇಲ್ದರ್ಜೆಗೆ ಏರಿರುವುದು, ಹಲವಾರು ರಸ್ತೆ ಸೇತುವೆಗಳ ನಿರ್ಮಾಣ, ನೂರು ಬೆಡ್ಡಿನ ಸರಕಾರಿ ಆಸ್ಪತ್ರೆಗೆ ಅವಕಾಶ ಇತ್ಯಾದಿ ಹಲವಾರು ಕಾಮಗಾರಿಗಳನ್ನು ನಡೆಸುವ ಮೂಲಕ ಮಾಜಿ ಸಚಿವ, ವಿನಯ್ ಕುಮಾರ್ ಸೊರಕೆ ಅವರ ಕೆಲಸಗಳು ಕ್ಷೇತ್ರದ ಮತದಾರರಿಗೆ ಖುಷಿಯನ್ನು ತಂದಿದೆ.
ಲೋಕೋಪಯೋಗಿ ಇಲಾಖೆಯ ಮೂಲಕ 200ಕ್ಕೂ ಹೆಚ್ಚು ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಅತ್ಯುತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ 145 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅನುದಾನ ಕಾಪು ಕ್ಷೇತ್ರಕ್ಕೆ ಲಭಿಸಿದೆ. ಈ ರಸ್ತೆ ಅಭಿವೃದ್ಧಿ ಯೋಜನೆಯಡಿ ಒಟ್ಟು 47 ಕೋಟಿ ರೂಪಾಯಿ ಮಂಜೂರಾಗಿದ್ದು ಎಲ್ಲ ಕಾಮಗಾರಿಗಳು ಆರಂಭವಾಗಿವೆ, ಹಲವು ಕಾಮಗಾರಿ ಪೂರ್ತಿಯಾಗಿವೆ.
ಮೊದಲ ಬಾರಿಗೆ ಕಾಪುವಿನ ಶಾಸಕನಾಗಿ ಆಯ್ಕೆಯಾದ ವಿನಯ ಕುಮಾರ್ ಸೊರಕೆ ಪ್ರತಿಯೊಂದು ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಕಾರ್ಯಕ್ರಮ ಆರಂಭಿಸಿದರು. ಇದರಿಂದ ಮಾಡಿದರು. ಆಡಳಿತ ವ್ಯವಸ್ಥೆಯನ್ನು ಜನರಿಗೆ ಹತ್ತಿರದಲ್ಲಿ ಸಿಗಬೇಕು ಎನ್ನುವ ಅಪೇಕ್ಷೆಯಿಂದ ಪ್ರತಿಯೊಂದು ಗ್ರಾಮಪಂಚಾಯತಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಸಮಸ್ಯೆ ಮತ್ತು ಬೇಡಿಕೆಯನ್ನು ಖುದ್ದಾಗಿ ತಿಳಿದುಕೊಳ್ಳುವ, ಜನರ ಅಹವಾಲುಗಳನ್ನು ಆಲಿಸಲು ಸಹಾಯ ಆಗುತಿತ್ತು.
ರಾಜ್ಯ ಸರಕಾರದ ವಿವಿಧ ಮೂಲಗಳಿಂದ ಅಸಂಖ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕಾಪು ಕ್ಷೇತ್ರಕ್ಕೆ ಅಂದಾಜು 1700 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ಹರಿದು ಬಂದಿದೆ. ಕಾಪು ಪ್ರದಶದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣ ಅಭಿವೃದ್ಧಿ ಅನುದಾನ ಮಂಜೂರು ಮಾಡುವಲ್ಲಿ ಇಲ್ಲಿನ ಶಾಸಕ ವಿನಯ ಕುಮಾರ್ ಸೊರಕೆ ಅವರ ಬುದ್ಧಿವಂತಿಕೆ, ನಾಯಕತ್ವ, ಪ್ರಭಾವ ಕೆಲಸ ಮಾಡಿದೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.
Click this button or press Ctrl+G to toggle between Kannada and English