ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಯ ನೂತನ ಸರ್ಕಾರದಿಂದ ಐಪಿಎಸ್ ಅಧಿಕಾರಿಗಳ ಮೊದಲ ವರ್ಗಾವಣೆ ನಡೆದಿದ್ದು ಅಣ್ಣಾಮಲೈ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಕೆಎಸ್ಆರ್ಪಿ ಡಿಐಜಿ ಆಗಿದ್ದ ಸಂದೀಪ್ ಪಾಟೀಲ್ ಅವರನ್ನು ಗುಪ್ತದಳದ ಡಿಐಜಿಯಾಗಿ, ರೈಲ್ವೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರನ್ನು ಗುಪ್ತದಳದ ಎಡಿಜಿಪಿ, ಬೀದರ್ ಎಸ್ ಪಿ ಆಗಿದ್ದ ಡಿ. ದೇವರಾಜ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯನ್ನಾಗಿ ಹಾಗೂ ಎಸಿಬಿ ಎಸ್ಪಿ ಗಿರೀಶ್ ಅವರನ್ನು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿ, ಚಿಕ್ಕಮಗಳೂರು ಎಸ್ಪಿ ಯಾಗಿದ್ದ ಅಣ್ಣಾಮಲೈ ಅವರನ್ನು ರಾಮನಗರ ಎಸ್ಪಿ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
Click this button or press Ctrl+G to toggle between Kannada and English