40 ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿ ನೆರವು ನೀಡಿದ ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ

Friday, May 28th, 2021
Vishwanath

ಗದಗ : ಮೂಲತಃ ಗದಗ ಜಿಲ್ಲೆಯವರಾದ ತೆಲಂಗಾಣ ರಾಜ್ಯದ ಸೈಬರಾಬಾದ ಪೋಲಿಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಅಂದಾಜು 40 ಲಕ್ಷ ಮೌಲ್ಯದ ವೈದ್ಯಕೀಯ ಔಷಧಿ ಸಾಮಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ನೆರವು ನೀಡಿದ್ದಾರೆ. ಆಕ್ಸಿಜನ್ ಕಾನ್ಸ್ಂಟ್ರೇಟರ್ (22), ಆಕ್ಸಿಜನ ಸಿಲಿಂಡರ್ (84), ಕೋವಿಡ್ ಕಿಟ್ (2000), ಮಾಸ್ಕ (20000), ಸ್ಯಾನಿಟೈಸರ್ (200 ಲೀಟರ್), ಫೇಸ್‌ಶೀಲ್ಡ್ (1000), ರೆಮಿಡಿಸಿವರ್ (24 ಯುನಿಟ್) ಸೇರಿದಂತೆ ಇತರ ಔಷಧಿ […]

ಯುವತಿಯನ್ನು ವಂಚಿಸಿದ ನಕಲಿ ಐಪಿಎಸ್ ಅಧಿಕಾರಿ ಬಂಧನ

Monday, November 11th, 2019
mithun

ಮಡಿಕೇರಿ : ನಕಲಿ ಐಪಿಎಸ್ ಅಧಿಕಾರಿಯೊಬ್ಬ ಯುವತಿಯೊಬ್ಬಳನ್ನು ವಿವಾಹವಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಂಚಕರ ತಂಡವೊಂದನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ. ಮಿಥುನ್ (21), ಮನೋಜ್ (30), ಅಬು ತಾಹೀರ್ (31) ಹಾಗೂ ವಿನೋದ್ (27) ಐಪಿಎಸ್ ಅಧಿಕಾರಿಗಳಂತೆ ಯುವತಿಯ ಮನೆಯವರ ಮುಂದೆ ಡ್ರಾಮಾ ಮಾಡಲು ಹೋಗಿ ಬಂಧಿತರಾಗಿರುವ ಆರೋಪಿಗಳು. ಕೇರಳ ರಾಜ್ಯದ ತ್ರಿಶೂರ್‌ನ ಮಿಥುನ್ ಎಂಬಾತ ನಾನೊಬ್ಬ ಐಪಿಎಸ್ ಅಧಿಕಾರಿ ಎಂದು ನಂಬಿಸಿ ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. ಮದುವೆ ಬಳಿಕ ಆತನ ಬಗ್ಗೆ ತಿಳಿದು […]

ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಆರೋಗ್ಯ ಗಂಭೀರ

Thursday, December 27th, 2018
police-officer

ಬೆಂಗಳೂರು: ಹೆಚ್1 ಎನ್1 ಸೋಂಕಿನಿಂದ ಬಳಲುತ್ತಿರುವ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಉಡುಪಿ ಮೂಲದ ಮಧುಕರ್ ಶೆಟ್ಟಿ ಸದ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೋಲೀಸ್ ಅಕಾಡೆಮಿಯ ಉಪನಿರ್ದೇಶಕರಾಗಿ ಕಾರ್ಯ‌ನಿರ್ವಹಿಸುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು‌ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮಧುಕರ್ ಶ್ವಾಸಕೋಶ ಹಾಗೂ ಜೀರ್ಣಾಂಗ ಸಮಸ್ಯೆಯಿಂದ ಬಳಲುತ್ತಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ. 1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ […]

ಯಡಿಯೂರಪ್ಪ ನೂತನ ಸರ್ಕಾರದಿಂದ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ!

Thursday, May 17th, 2018
Annamalai

ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಯ ನೂತನ ಸರ್ಕಾರದಿಂದ ಐಪಿಎಸ್ ಅಧಿಕಾರಿಗಳ ಮೊದಲ ವರ್ಗಾವಣೆ ನಡೆದಿದ್ದು ಅಣ್ಣಾಮಲೈ  ಸೇರಿದಂತೆ ಐವರು  ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೆಎಸ್‌ಆರ್‌ಪಿ ಡಿಐಜಿ ಆಗಿದ್ದ ಸಂದೀಪ್ ಪಾಟೀಲ್ ಅವರನ್ನು ಗುಪ್ತದಳದ ಡಿಐಜಿಯಾಗಿ, ರೈಲ್ವೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರನ್ನು ಗುಪ್ತದಳದ ಎಡಿಜಿಪಿ, ಬೀದರ್ ಎಸ್ ಪಿ ಆಗಿದ್ದ ಡಿ. ದೇವರಾಜ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯನ್ನಾಗಿ ಹಾಗೂ ಎಸಿಬಿ ಎಸ್ಪಿ ಗಿರೀಶ್ ಅವರನ್ನು ಬೆಂಗಳೂರು ಈಶಾನ್ಯ […]

ನಗರದ ಪೊಲೀಸ್ ಆಯುಕ್ತರಾಗಿ ಎನ್ಎಸ್ ಮೇಘರಿಕ್

Friday, July 31st, 2015
N S Megharikh

ಬೆಂಗಳೂರು : ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಆಯುಕ್ತರನ್ನು ನೇಮಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ. ಎಂಎನ್ ರೆಡ್ಡಿ ಅವರಿಗೆ ಡಿಜಿಪಿಯಾಗಿ ಬಡ್ತಿ ನೀಡಲಾಗಿದೆ. ಎನ್.ಎನ್ ಮೇಘರಿಕ್ ಅವರು ನೂತನ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಬಿಬಿಎಂಪಿ ಚುನಾವಣೆ ಮುಗಿಯುವವರೆಗೂ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡದೇ. ಹಾಲಿ ಇರುವ ಸ್ಥಾನದಲ್ಲೇ ಮುಂದುವರೆಸಬೇಕು ಎಂದು ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ಗೊಂದಲಕ್ಕೆ ಬಿದ್ದಿದ್ದ ಸರ್ಕಾರ ಕೊನೆಗೂ ಧೈರ್ಯ ಮಾಡಿ ಹಿರಿಯ ಐಪಿಎಸ್ […]

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್.ಪಿ ಯಾಗಿ ಲಾಬೂರಾಂ

Tuesday, March 29th, 2011
ಲಾಬೂರಾಂ

ಮಂಗಳೂರು : ರಾಜಸ್ಥಾನ ಮೂಲದ ಲಾಬೂರಾಂ ದಕ್ಷಿಣ ಕನ್ನಡ ಜಿಲ್ಲಾ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿದ್ದಾರೆ, ಅವರು ನಿರ್ಗಮನ ಎಸ್ಪಿ ಡಾ.ಎ.ಎಸ್.ರಾವ್‌ರಿಂದ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಲಾಬೂರಾಂ ಬಿಎಸ್ಸಿ ಪದವೀಧರಾಗಿದ್ದು. 2003ರಲ್ಲಿ  ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, 2004ನೆ ಸಾಲಿನಲ್ಲಿ ಐಪಿಎಸ್ ಅಧಿಕಾರಿಯಾಗಿ ಕೆಲಸ ಆರಂಭಿಸಿದರು. 2006ರಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರೊಬೇಷನರಿ ಅವಧಿ ಪೂರೈಸಿ, ಉಡುಪಿ ಜಿಲ್ಲೆಯ ಪ್ರಭಾರ ಎಸ್ಪಿಯಾಗಿ, ಹಾಸನ ಜಿಲ್ಲಾ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲೂ ಎಸ್ಪಿಯಾಗಿ ಸೇವೆ […]