ಮಂಗಳೂರು: ಕೇರಳದಲ್ಲಿ 10ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ನಿಪಾಹ್ ವೈರಸ್ ಮಂಗಳೂರಿಗೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮಂಗಳೂರಿನಲ್ಲಿ ಇಬ್ಬರಲ್ಲಿ ನಿಪಾಹ್ ವೈರಸ್ ಇರುವ ಬಗ್ಗೆ ಶಂಕೆಯಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಇಬ್ಬರ ರಕ್ತ ಮಾದರಿಯನ್ನು ಕೆಎಂಸಿ ಮಣಿಪಾಲಕ್ಕೆ ಕಳುಹಿಸಲಾಗಿದ್ದು ಇದರ ವರದಿ ನಾಳೆ ಸಂಜೆಯೊಳಗೆ ಬರಲಿದೆ. ಅಲ್ಲಿ ಬಂದ ವರದಿಯಲ್ಲಿ ನಿಪಾಹ್ ವೈರಸ್ ಇದೆ ಎಂದು ಗೊತ್ತಾದರೆ ಅಲ್ಲಿಂದ ಪುಣೆಗೆ ವರದಿ ಕಳುಹಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಇದೇ ವೇಳೆ ನಿಪಾಹ್ ಕಾಣಿಸಿಕೊಂಡರೆ ಸದ್ಯಕ್ಕೆ ಆಯಾ ರೋಗಕ್ಕನುಗುಣವಾಗಿ ಚಿಕಿತ್ಸೆ ಮಾಡಲಾಗುವುದು ಎಂದು ಅವರು ತಿಳಿಸಿದರು.
Click this button or press Ctrl+G to toggle between Kannada and English